ರಾಜ್ಯದ ಗಮನ ಸೆಳೆದ ಶಿವಮೊಗ್ಗ NSUI : ಅತ್ಯುತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ

ಬೆಂಗಳೂರು, ಫೆ. 18: ಶಿವಮೊಗ್ಗ ಎನ್.ಎಸ್.ಯು.ಐ. ಘಟಕ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ, ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಅವರಿಗೆ ‘ಅತ್ಯುತ್ತಮ ಜಿಲ್ಲಾಧ್ಯಕ್ಷ’ ಪ್ರಶಸ್ತಿ ಪತ್ರ ನೀಡಿ  ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಭಿನಂದಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಎನ್.ಎಸ್.ಯು.ಐ ಸಂಘಟನೆಯ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ವಿಜಯಕುಮಾರ್ ಅವರಿಗೆ ಅಭಿನಂದಿಸಿ ಗೌರವಿಸಲಾಗಿದೆ. ಶಿವಮೊಗ್ಗ ಎನ್.ಎಸ್.ಯು.ಐ. ಸಂಘಟನೆಯ ಹೋರಾಟ, ಸಾಮಾಜಿಕ ಕಳಕಳಿ, ಸಾರ್ವಜನಿಕ ಸೇವೆಯ ಬಗ್ಗೆ ರಾಜ್ಯ ಮುಖಂಡರು ಮುಕ್ತಕಂಠದ ಶ್ಲಾಘನೆ ಮಾಡಿದ್ಧಾರೆ.
ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎನ್.ಎಸ್.ಯು.ಐ. ಸಂಘಟನೆ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಸಲೀಂ ಅಹಮದ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಅಭಿನಂದನೆ: ವಿಜಯಕುಮಾರ್ ಅವರ ಸಾಧನೆಗೆ ಶಿವಮೊಗ್ಗ ಯುವ ಕಾಂಗ್ರೆಸ್ ಮುಖಂಡರಾದ ಸಿ.ಜಿ.ಮಧುಸೂದನ್ ಹಾಗೂ ಕೆ.ಚೇತನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Previous post ಬಜೆಟ್ : ಈಡೇರದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಬೇಡಿಕೆಗಳು!
Next post ಲಾಡ್ಜ್ ಮಾಲೀಕರಿಗೆ ಪೊಲೀಸ್ ಇಲಾಖೆ ನೀಡಿದ ಸಲಹೆ-ಸೂಚನೆಗಳೇನು?