ಲಾಡ್ಜ್ ಮಾಲೀಕರಿಗೆ ಪೊಲೀಸ್ ಇಲಾಖೆ ನೀಡಿದ ಸಲಹೆ-ಸೂಚನೆಗಳೇನು?

ಶಿವಮೊಗ್ಗ, ಫೆ. 18: ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಶನಿವಾರ, ಠಾಣಾ ವ್ಯಾಪ್ತಿಯ ಲಾಡ್ಜ್ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯನ್ನು ಇನ್ಸ್’ಪೆಕ್ಟರ್ ಗಜೇಂದ್ರಪ್ಪ ನಡೆಸಿದರು. ಗ್ರಾಹಕರಿಗೆ ಕೊಠಡಿ ನೀಡುವ ವೇಳೆ ಪಾಲಿಸಬೇಕಾದ ವಿವರಗಳ ಬಗ್ಗೆ ಮಾಹಿತಿ ನೀಡಿದರು.
ಸಲಹೆ-ಸೂಚನೆಗಳೇನು?: ಲಾಡ್ಜ್ ಕಾರಿಡಾರ್ ಹಾಗೂ ಮುಂಭಾಗದಲ್ಲಿ, ರಸ್ತೆಗೆ ಅಭಿಮುಖವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಲಾಡ್ಜ್ ಗೆ ಬರುವ ಗ್ರಾಹಕರುಗಳ ಹೆಸರು, ವಿಳಾಸ, ಮೊಬೈಲ್ ಪೋನ್ ಸಂಖ್ಯೆ  ಪಡೆಯಬೇಕು. ಸಂಪೂರ್ಣ ಮಾಹಿತಿಯನ್ನು ಪಡೆದು ರಿಜಿಸ್ಟರ್ ಪುಸ್ತಕದಲ್ಲಿ ನಮೂದಿಸಬೇಕು.
ಗ್ರಾಹಕರ ಐಡಿ ಕಾರ್ಡ್ ಗಳ ಜೆರಾಕ್ಸ್ ಪ್ರತಿ ಪಡೆದುಕೊಳ್ಳಬೇಕು. ಅದರಲ್ಲಿರುವ ವಿವರ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು. ಕೊಠಡಿ ಪಡೆಯುತ್ತಿರುವ ಉದ್ದೇಶದ ವಿವರ ತಿಳಿದುಕೊಳ್ಳಬೇಕು. ಈ ಮಾಹಿತಿಯನ್ನು ಕೂಡ ಕಡ್ಡಾಯವಾಗಿ ರಿಜಿಸ್ಟರ್ ನಲ್ಲಿ ನೊಂದಾಯಿಸಬೇಕು.
ಗ್ರಾಹಕರ ಬಗ್ಗೆ ಅನುಮಾನ ಬಂದರೆ ಹತ್ತಿರದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ ಅಥವಾ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಇನ್ಸ್’ಪೆಕ್ಟರ್ ಗಜೇಂದ್ರಪ್ಪ ಅವರು ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಪೊಲೀಸ್ ಉಪ ನಿರೀಕ್ಷಕರು ಉಪಸ್ಥಿತರಿದ್ದರು.

Previous post ರಾಜ್ಯದ ಗಮನ ಸೆಳೆದ ಶಿವಮೊಗ್ಗ NSUI : ಅತ್ಯುತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ
Next post ನಟಿ ಪ್ರೇಮಾಗೆ ‘ಶ್ರೀಗಂಧದ ಗೊಂಬೆ’ ಬಿರುದು