ಶಿವಮೊಗ್ಗದಲ್ಲಿ ಎಎಪಿಯಿಂದ ಪೊರಕೆಯೆ ಪರಿಹಾರ ಅಭಿಯಾನ!

ಶಿವಮೊಗ್ಗ, ಫೆ. 20: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಹಾಗೂ ಹೊಸ ರಾಜಕೀಯ ಬದಲಾವಣೆಗೆ ಕೈ ಜೋಡಿಸುವಂತೆ ನಾಗರೀಕರಿಗೆ ಕರೆ ನೀಡಿ ಸೋಮವಾರ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷ ಪೊರಕೆಯೇ ಪರಿಹಾರ ಅಭಿಯಾನ ಹಮ್ಮಿಕೊಂಡಿತ್ತು.
ಇದರ ಅಂಗವಾಗಿ ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಆವರಣದಲ್ಲಿ ಕಸ ಗುಡಿಸುವ ಕಾರ್ಯಕ್ರಮವನ್ನು ಎಎಪಿ ಹಮ್ಮಿಕೊಂಡಿತ್ತು. 
ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊರಕೆ ಹಿಡಿದು ಮೆರವಣಿಗೆ ನಡೆಸಿದರು. ಅಭಿಯಾನದ ನೇತೃತ್ವವನ್ನ ಎಎಪಿ ಪಕ್ಷದ ನಾಯಕಿ ನೇತ್ರಾವತಿ ವಹಿಸಿದ್ದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಂಡರಾದ ಸುರೇಶ್ ಕೌಟೇಕರ್, ನಜೀರ್ ಅಹ್ಮದ್, ಮಕ್ಬುಲ್ ಅಹಮದ್, ಕಲಂದರ್,  ಬೊಮ್ಮನಕಟ್ಟೆ ಮಾಲತೇಶ್, ರಾಮಕೃಷ್ಣ,
ಶ್ರೀನಿವಾಸ್, ಹರೀಶ್, ರಮೇಶ್, ಶಿವಕುಮಾರ್, ಪುಷ್ಪಲತಾ, ಶೋಭಾ, ಶ್ವೇತಾ, ಮರಿಯಪ್ಪ, ಸೋಮಶೇಖರ್, ಹಾಲಪ್ಪ ಸೇರಿದಂತೆ ಮೊದಲಾದವರಿದ್ದರು.

Previous post ನಟಿ ಪ್ರೇಮಾಗೆ ‘ಶ್ರೀಗಂಧದ ಗೊಂಬೆ’ ಬಿರುದು
Next post ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮೆಸ್ಕಾಂ ಕಚೇರಿ ಎದುರು ರೈತ ಸಂಘದಿಂದ ಪ್ರತಿಭಟನೆ!