Shimoga Lok Sabha Constituency: Congress ticket for Geetha Shivarajkumar - Where did Kumar Bangarappa miss the 'hand'? Minister Madhu Bangarappa prevailed! Special Report: B. Renukesh ಶಿವಮೊಗ್ಗ ಲೋಕಸಭಾ ಕ್ಷೇತ್ರ : ಗೀತಾ ಶಿವರಾಜಕುಮಾರ್’ಗೆ ಕಾಂಗ್ರೆಸ್ ಟಿಕೆಟ್ – ಕುಮಾರ್ ಬಂಗಾರಪ್ಪಗೆ ‘ಕೈ’ ತಪ್ಪಿದ್ದೆಲ್ಲಿ? ಸಚಿವ ಮಧು ಬಂಗಾರಪ್ಪ ಮೇಲುಗೈ! ವಿಶೇಷ ವರದಿ : ಬಿ. ರೇಣುಕೇಶ್

ಶಿವಮೊಗ್ಗ ಲೋಕಸಭಾ ಕ್ಷೇತ್ರ : ಗೀತಾ ಶಿವರಾಜಕುಮಾರ್’ಗೆ ಕಾಂಗ್ರೆಸ್ ಟಿಕೆಟ್ – ಕುಮಾರ್ ಬಂಗಾರಪ್ಪಗೆ ‘ಕೈ’ ತಪ್ಪಿದ್ದೆಲ್ಲಿ?

ಶಿವಮೊಗ್ಗ, ಮಾ. 8: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ, ಶಿವಮೊಗ್ಗ ಕ್ಷೇತ್ರದ (Shimoga Lok Sabha Constituency) ಅಭ್ಯರ್ಥಿ ಹೆಸರು ಘೋಷಣೆಯಾಗಿದೆ. ನಿರೀಕ್ಷಿಸಿದಂತೆ ಮಾಜಿ ಸಿಎಂ ದಿವಂಗತ ಎಸ್. ಬಂಗಾರಪ್ಪ (s bangarappa) ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ (geetha shivarajkumar) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

2014 ರಲ್ಲಿ ಮೊದಲ ಬಾರಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದ ಗೀತಾ ಶಿವರಾಜಕುಮಾರ್, ಅಂದು ನಡೆದ ಲೋಕಸಭೆ ಚುನಾವಣೆ (lok sabha election) ಯಲ್ಲಿ ಜೆಡಿಎಸ್ (jds) ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಇದೀಗ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

2014 ರಲ್ಲಿ ಬಿಜೆಪಿ (bjp) ಯಿಂದ ಕಣಕ್ಕಿಳಿದಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (b s yeddiurappa) ಇವರ ಎದುರಾಳಿಯಾಗಿದ್ದರು. 2024 ರಲ್ಲಿ ಅವರ ಪುತ್ರ ಬಿ.ವೈ.ರಾಘವೇಂದ್ರ (b y raghavendra) ಇವರ ಪ್ರತಿಸ್ಪರ್ಧಿಯಾಗುತ್ತಿದ್ದಾರೆ. ಇದರಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ – ಬಂಗಾರಪ್ಪ ಕುಟುಂಬದ ಹಣಾಹಣಿಗೆ ಮತ್ತೊಮ್ಮೆ ವೇದಿಕೆ ಸಜ್ಜಾಗುತ್ತಿದೆ.

‘ಕೈ’ ತಪ್ಪಿದ್ದೆಲ್ಲಿ : ಪ್ರಸ್ತುತ ಬಿಜೆಪಿ ಪಕ್ಷದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ (kumar bangarappa) ಅವರನ್ನು ಕಾಂಗ್ರೆಸ್ ಗೆ ಕರೆತಂದು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಚರ್ಚೆಗಳು ಕಳೆದ ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಕುಮಾರ್ ಪಕ್ಷ ಸೇರ್ಪಡೆಗೆ ಸಿಎಂ ಸಿದ್ದರಾಮಯ್ಯ (cm siddaramaiah), ಡಿ.ಕೆ.ಶಿವಕುಮಾರ್ (d k shivakumar) ಸೇರಿದಂತೆ ಬಹುತೇಕ ಕಾಂಗ್ರೆಸ್ ವರಿಷ್ಠರು ಸಮ್ಮತಿಸಿದ್ದರು ಎಂಬ ಮಾತು ಕೂಡ ಕೇಳಿಬಂದಿತ್ತು.

ಆದರೆ ಕಾಂಗ್ರೆಸ್ (congress) ವರಿಷ್ಠರ ನಿರ್ಧಾರಕ್ಕೆ ಸಚಿವ ಮಧು ಬಂಗಾರಪ್ಪ (madhu bangarappa) ಸಮ್ಮತಿಸಿರಲಿಲ್ಲ. ಯಾವುದೇ ಕಾರಣಕ್ಕೂ ಸಹೋದರ ಕುಮಾರ್ ಬಂಗಾರಪ್ಪರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬಾರದು. ಜೊತೆಗೆ ಪಕ್ಷಕ್ಕೂ ಸೇರ್ಪಡೆ ಮಾಡಿಕೊಳ್ಳಬಾರದು. ಸಹೋದರಿ ಗೀತಾ ಶಿವರಾಜಕುಮಾರ್’ಗೆ ಟಿಕೆಟ್ ನೀಡಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದರು. ಅವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ನಡೆಸಿದ ಪ್ರಯತ್ನಗಳು ಫಲ ನೀಡಿರಲಿಲ್ಲ ಎನ್ನಲಾಗಿದೆ.

ಮಧು ಬಂಗಾರಪ್ಪರ ಬಿಗಿ ನಿಲುವಿನ ಕಾರಣದಿಂದ, ಗೀತಾ ಶಿವರಾಜಕುಮಾರ್ ರನ್ನೇ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವೆಂದು ಆ ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ.

*** ಸಹೋದರಿ ಗೀತಾ ಶಿವರಾಜಕುಮಾರ್’ಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಕೊಡಿಸುವಲ್ಲಿ, ಸಚಿವ ಮಧು ಬಂಗಾರಪ್ಪ ಕೊನೆಗೂ ಯಶಸ್ವಿಯಾಗಿದ್ದಾರೆ. ಆದರೆ ಈ ಮೂಲಕ ಪ್ರಸ್ತುತ ಚುನಾವಣೆಯಲ್ಲಿ ಸಹೋದರಿಯನ್ನು ಗೆಲ್ಲಿಸಿಕೊಂಡು ಬರಲೇ ಬೇಕಾದ, ರಾಜಕೀಯ ಅನಿವಾರ್ಯತೆಯನ್ನು ಕೂಡ ಅವರು ಸೃಷ್ಟಿಸಿಕೊಂಡಿದ್ದಾರೆ! ಕುಮಾರ್ ಬಂಗಾರಪ್ಪರನ್ನು ಕಾಂಗ್ರೆಸ್ ಗೆ ಕರೆತಂದು ಅಭ್ಯರ್ಥಿಯನ್ನಾಗಿ ಮಾಡುವ ಚಿಂತನೆ ಆ ಪಕ್ಷದ ಕೆಲ ನಾಯಕರದ್ದಾಗಿತ್ತು. ಆದರೆ ಮಧು ಬಂಗಾರಪ್ಪ ಬಿಗಿ ನಿಲುವಿನ ಕಾರಣದಿಂದ ಕುಮಾರ್ ಬಂಗಾರಪ್ಪಗೆ ‘ಕೈ’ ಟಿಕೆಟ್ ಮಾತ್ರವಲ್ಲದೆ, ಪಕ್ಷದ ಸೇರ್ಪಡೆ ಅವಕಾಶವೂ ತಪ್ಪಿದಂತಾಗಿದೆ. ಮಧು ಬಂಗಾರಪ್ಪ ಬೇಡಿಕೆಯಂತೆ ಸಹೋದರಿ ಗೀತಾಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ಈ ಕಾರಣದಿಂದ ಪ್ರಸ್ತುತ ಚುನಾವಣೆಯು ಮಧು ಬಂಗಾರಪ್ಪಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಹೋದರಿಯನ್ನ ಗೆಲ್ಲಿಸಲೇಬೇಕಾದ ಒತ್ತಡದಲ್ಲಿ ಸಿಲುಕಿ ಬೀಳುವಂತಾಗಿದೆ.

Capital investment of ₹ 17836 crore in state - 27067 new jobs created : CM ರಾಜ್ಯದಲ್ಲಿ ₹ 17836 ಕೋಟಿ ಮೊತ್ತದ ಬಂಡವಾಳ ಹೂಡಿಕೆ - 27067 ಹೊಸ ಉದ್ಯೋಗ ಸೃಷ್ಟಿ: ಸಿಎಂ Previous post ರಾಜ್ಯದಲ್ಲಿ ₹ 17,836 ಕೋಟಿ ಮೊತ್ತದ ಬಂಡವಾಳ ಹೂಡಿಕೆ – 27,067 ಹೊಸ ಉದ್ಯೋಗ ಸೃಷ್ಟಿ : ಸಿಎಂ
Haveri Lok Sabha ticket: KS Eshwabarappa's final fight for his son! ಹಾವೇರಿ ಲೋಕಸಭಾ ಟಿಕೆಟ್ : ಪುತ್ರನ ಪರ ಕೆ.ಎಸ್.ಈಶ್ವಬರಪ್ಪ ಕೊನೆ ಹಂತದ ಹೋರಾಟ! Next post ಹಾವೇರಿ ಲೋಕಸಭಾ ಟಿಕೆಟ್ : ಪುತ್ರನ ಪರ ಕೆ.ಎಸ್.ಈಶ‍್ವರಪ್ಪ ಕೊನೆ ಹಂತದ ಹೋರಾಟ..!