Color cotton candy (Bombay Mithai) banned in the state Gobi Manchuri is not banned but artificial color cannot be used! ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ನಿಷೇಧ : ಗೋಬಿ ಮಂಚೂರಿ ನಿಷೇಧವಿಲ್ಲ ಆದರೆ ಕೃತಕ ಬಣ್ಣ ಬಳಸುವಂತಿಲ್ಲ!

ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧ : ಗೋಬಿ ಮಂಚೂರಿ ನಿಷೇಧವಿಲ್ಲ- ಆದರೆ ಕೃತಕ ಬಣ್ಣ ಬಳಸುವಂತಿಲ್ಲ!

ಬೆಂಗಳೂರು, ಮಾ. 11: ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ಮಾರಾಟ ನಿಷೇಧಿಸಿ (banned) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಳಿದಂತೆ ಜನಪ್ರಿಯ ತಿನಿಸು ಗೋಬಿ ಮಂಚೂರಿ (Gobi Manchuri) ನಿಷೇಧ ಮಾಡಿಲ್ಲ. ಆದರೆ ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸುವುದನ್ನು ಸರ್ಕಾರ (karnataka state govt)ಸಂಪೂರ್ಣವಾಗಿ ನಿರ್ಬಂಧಿಸಿದೆ.

ಬೆಂಗಳೂರಿನ (bengaluru) ವಿಕಾಸಸೌಧದಲ್ಲಿ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (health minister dinesh gundurao) ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಲರ್ ಕಾಟನ್ ಕ್ಯಾಂಡಿ (color cotton candy) ಯಲ್ಲಿ ಅಪಾಯಕಾರಿ ಅಂಶಗಳಿವೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಕಾರಣದಿಂದ ಕಲರ್ ಕಾಟನ್ ಕ್ಯಾಂಡಿ (Bombay Mithai) ತಯಾರಿಸಿದರೆ ಕಠಿಣ ಕ್ರಮಕೈಗೊಳ್ಳುತ್ತೆವೆ. ಕಲರ್ ಬಳಸದೆ ಮಾರಾಟ ಮಾಡುವ ಕಾಟನ್ ಕ್ಯಾಂಡಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗೋಬಿ ಮಂಚೂರಿ : ಗೋಬಿ ಮಂಚೂರಿ (Gobi Manchurian) ಸಸ್ಯಹಾರಿ ತಿನಿಸಾಗಿದೆ. ಇದನ್ನು ನಿಷೇಧ ಮಾಡಲು ಆಗುವುದಿಲ್ಲ. ಆದರೆ ಗೋಬಿ ತಯಾರಿಕೆ ವೇಳೆ ಕೃತಕ ಬಣ್ಣ (artificial color) ಬಳಕೆ ಮಾಡುವಂತಿಲ್ಲ. ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಾದ್ಯಂತ 171 ಗೋಬಿ ಮಂಚೂರಿ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿತ್ತು. ಇದನ್ನು ಪ್ರಯೋಗಾಲಯ ಪರೀಕ್ಷೆಗೊಳಪಡಿಸಿದಾಗ, 107 ಗೋಬಿ ಮಂಚೂರಿ ಸ್ಯಾಂಪಲ್ ಗಳಲ್ಲಿ ನಾಗರೀಕರ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಅಪಾಯಕಾರಿ ಕೃತಕ ಬಣ್ಣ ಬಳಸಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಾರ್ಮೊಸಿನ್, ಸನ್ ನೆಟ್ ಯೆಲ್ಲೋ, ಟಾರ್ ಟ್ರಾಸೈನ್ ರಾಸಾಯನಿಕಗಳನ್ನು ಬಳಸಿ ಗೋಬಿ ಮಂಚೂರಿ ತಯಾರಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಕೃತಕ ಬಣ್ಣ ಬಳಸಿದರೆ ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Will Gobi Manchuri – Bombay Mithai be banned in the state too?! ರಾಜ್ಯದಲ್ಲಿಯೂ ನಿಷೇಧವಾಗಲಿದೆಯಾ ಗೋಬಿ ಮಂಚೂರಿ – ಬಾಂಬೆ ಮಿಠಾಯಿ?! Previous post ರಾಜ್ಯದಲ್ಲಿಯೂ ನಿಷೇಧವಾಗಲಿದೆಯಾ ಗೋಬಿ ಮಂಚೂರಿ – ಬಾಂಬೆ ಮಿಠಾಯಿ?!
Urination on the cricket pitch consumption of alcohol: anger of the athletes! ಕ್ರಿಕೆಟ್ ಪಿಚ್ ಮೇಲೆಯೇ ಮೂತ್ರ ವಿಸರ್ಜನೆ ಮದ್ಯ - ಮಾಂಸ ಸೇವನೆ : ಕ್ರೀಡಾಪಟುಗಳ ಆಕ್ರೋಶ! Next post ಕ್ರಿಕೆಟ್ ಪಿಚ್ ಮೇಲೆಯೇ ಮೂತ್ರ ವಿಸರ್ಜನೆ, ಮದ್ಯ – ಮಾಂಸ ಸೇವನೆ : ಕ್ರೀಡಾಪಟುಗಳ ಆಕ್ರೋಶ!