BJP list published: BSY son B.Y. Raghavendra fix for Shimoga - Eshwarappa son K. E. Kantesh miss Haveri! ಬಿಜೆಪಿ ಪಟ್ಟಿ ಪ್ರಕಟ : ಶಿವಮೊಗ್ಗಕ್ಕೆ ಬಿಎಸ್ವೈ ಪುತ್ರ ಬಿ.ವೈ.ರಾಘವೇಂದ್ರ ಫಿಕ್ಸ್ – ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್’ಗೆ ಹಾವೇರಿ ಮಿಸ್!

ಬಿಜೆಪಿ ಪಟ್ಟಿ ಪ್ರಕಟ : ಶಿವಮೊಗ್ಗಕ್ಕೆ ಬಿಎಸ್ವೈ ಪುತ್ರ ಬಿ.ವೈ.ರಾಘವೇಂದ್ರ ಫಿಕ್ಸ್ – ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್’ಗೆ ಹಾವೇರಿ ಮಿಸ್!

ಶಿವಮೊಗ್ಗ, ಮಾ. 13: ಲೋಕಸಭೆ ಚುನಾವಣೆಗೆ (loksabha election) ಬಿಜೆಪಿ ಪಕ್ಷ (bjp) ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ, ನಿರೀಕ್ಷಿಸಿದಂತೆ ಶಿವಮೊಗ್ಗ ಕ್ಷೇತ್ರದಿಂದ (shimoga lok sabha constituency) ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರಗೆ ಮತ್ತೊಮ್ಮೆ ಟಿಕೆಟ್ ನೀಡಲಾಗಿದೆ.

ಉಳಿದಂತೆ ಹಾವೇರಿ (haveri) ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್’ಗೆ ಕೊನೆಗೂ ಟಿಕೆಟ್ ಕೈತಪ್ಪಿದೆ. ಆ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ.

ನಿರೀಕ್ಷಿತ : 2009 ರಲ್ಲಿ ಮೊದಲ ಬಾರಿಗೆ ಬಿ.ವೈ.ರಾಘವೇಂದ್ (b y raghavendra) ರ ಬಿಜೆಪಿ ಪಕ್ಷದಿಂದ ಲೋಕಸಭೆ ಚುನಾವಣಾ ಕಣಕ್ಕಿಳಿದಿದ್ದರು. ಮೊದಲ ಪ್ರಯತ್ನದಲ್ಲಿಯೇ ಎದುರಾಳಿಯಾಗಿದ್ದ ಮಾಜಿ ಸಿಎಂ ಎಸ್.ಬಂಗಾರಪ್ಪರನ್ನು(s bangarappa) ಮಣಿಸಿದ್ದರು.

ತದನಂತರ 2014 ರ ಲೋಕಸಭೆ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ (b s yeddiurappa) ಕಣಕ್ಕಿಳಿದಿದ್ದರು. ಆದರೆ ಯಡಿಯೂರಪ್ಪ ಅವರು ಅವಧಿ ಪೂರ್ಣಕ್ಕೂ ಮುನ್ನವೇ, ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, 2017 ರಲ್ಲಿ ಶಿವಮೊಗ್ಗ (shimoga) ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಸದರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ.ವೈ.ರಾಘವೇಂದ್ರ, ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ (madhu bangarappa) ಎದುರು ಜಯ ಸಂಪಾದಿಸಿದ್ದರು.

ತದನಂತರ 2018 ರ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಮತ್ತೆ ಜೆಡಿಎಸ್ (jds) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಧು ಬಂಗಾರಪ್ಪರನ್ನು ಪರಾಭವಗೊಳಿಸಿ, ಮೂರನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು.

ಕೈತಪ್ಪಿದ ಅವಕಾಶ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಪುತ್ರನ ಸ್ಪರ್ಧೆಗೆ ಅವಕಾಶವಾಗಬೇಕೆಂಬ ಉದ್ದೇಶದಿಂದ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (k s eshwarappa) ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು. ಭಾರೀ ಪ್ರಯತ್ನದ ಹೊರತಾಗಿಯೂ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಡಿಸಲು ಸಾಧ್ಯವಾಗಿರಲಿಲ್ಲ.

ಈ ನಡುವೆ ವರಿಷ್ಠರ ಭರವಸೆಯಂತೆ, ಹಾವೇರಿ – ಗದಗ ಲೋಕಸಭಾ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸುವ ತಯಾರಿಯನ್ನು ಕೆ.ಎಸ್.ಈಶ್ವರಪ್ಪ ನಡೆಸುತ್ತಿದ್ದರು. ಈ ಕಾರಣದಿಂದ ಕಳೆದೊಂದು ವರ್ಷದಿಂದ ಹಾವೇರಿ ಕ್ಷೇತ್ರದಲ್ಲಿ ಪುತ್ರನ ಜೊತೆ ಚುನಾವಣಾ ಸಿದ್ದತೆಯಲ್ಲಿ ತೊಡಗಿದ್ದರು.

ಹಾವೇರಿ ಕ್ಷೇತ್ರದಲ್ಲಿ ಕಾಂತೇಶ್ ಗೆ (k e kantesh) ಟಿಕೆಟ್ ಖಚಿತ ಎಂದೇ ಹೇಳಲಾಗಿತ್ತು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ದಾರೆ. ಮತ್ತೊಮ್ಮೆ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಕೆ.ಎಸ್.ಈಶ್ವರಪ್ಪ ವಿಫಲರಾಗಿದ್ಧಾರೆ.

One thought on “ಬಿಜೆಪಿ ಪಟ್ಟಿ ಪ್ರಕಟ : ಶಿವಮೊಗ್ಗಕ್ಕೆ ಬಿಎಸ್ವೈ ಪುತ್ರ ಬಿ.ವೈ.ರಾಘವೇಂದ್ರ ಫಿಕ್ಸ್ – ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್’ಗೆ ಹಾವೇರಿ ಮಿಸ್!

  1. ಕಾಂತೇಶ್ ಅವರಿಗೆ ಮುಂದೆ MLA ಗೆ ಅವಕಾಶ ಸಿಗುವಂತಾಗಲಿ… 💐😊

Comments are closed.

Lok Sabha Elections: BJP Ticket Distribution – Yeddyurappa Dominance Again?! ಲೋಕಸಭೆ ಚುನಾವಣೆ : ಬಿಜೆಪಿ ಟಿಕೆಟ್ ಹಂಚಿಕೆ – ಮತ್ತೆ ಯಡಿಯೂರಪ್ಪ ಪ್ರಾಬಲ್ಯ?! ವರದಿ : ಬಿ. ರೇಣುಕೇಶ್ Previous post ಲೋಕಸಭೆ ಚುನಾವಣೆ : ಬಿಜೆಪಿ ಟಿಕೆಟ್ ಹಂಚಿಕೆ – ಮತ್ತೆ ಯಡಿಯೂರಪ್ಪ ಪ್ರಾಬಲ್ಯ?!
B.S.Yediyurappa - K.S.Eshwarappa fight again: How do friends become enemies?! ಮತ್ತೆ ಬಿ.ಎಸ್.ಯಡಿಯೂರಪ್ಪ – ಕೆ.ಎಸ್.ಈಶ್ವರಪ್ಪ ಫೈಟ್ : ದೋಸ್ತಿಗಳು ದುಷ್ಮನಿಗಳಾಗಿದ್ದು ಹೇಗೆ?! ವರದಿ : ಬಿ. ರೇಣುಕೇಶ್ Next post ಮತ್ತೆ ಬಿ.ಎಸ್.ಯಡಿಯೂರಪ್ಪ – ಕೆ.ಎಸ್.ಈಶ್ವರಪ್ಪ ಫೈಟ್  : ದೋಸ್ತಿಗಳು ದುಷ್ಮನಿಗಳಾಗಿದ್ದು ಹೇಗೆ?!