KS Eshwarappa Contest in Shimoga Constituency:Calculation of profit and loss has begun! ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ : ಶುರುವಾಗಿದೆ ಲಾಭ ನಷ್ಟದ ಲೆಕ್ಕಾಚಾರ! ವರದಿ : ಬಿ. ರೇಣುಕೇಶ್ reporter : b. Renukesha KS Eshwarappa Contest in Shimoga Constituency:Calculation of profit and loss has begun! ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ : ಶುರುವಾಗಿದೆ ಲಾಭ ನಷ್ಟದ ಲೆಕ್ಕಾಚಾರ! ವರದಿ : ಬಿ. ರೇಣುಕೇಶ್ reporter : b. Renukesha

ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ : ಶುರುವಾಗಿದೆ ಲಾಭ – ನಷ್ಟದ ಲೆಕ್ಕಾಚಾರ!

ಶಿವಮೊಗ್ಗ, ಮಾ. 15: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Shimoga loksabha Constituency), ಬಿಜೆಪಿ ಪಕ್ಷಕ್ಕೆ ಬಂಡಾಯ (Rebellion) ಎದುರಾಗಿದೆ. ತಮ್ಮನ್ನು ತಾವು ಬಿಜೆಪಿ (bjp) ಪಕ್ಷದ ಕಟ್ಟಾಳು ಎಂದೇ ಕರೆದುಕೊಳ್ಳುತ್ತಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (k s eshwarappa) ಅವರು, ಸ್ವತಂತ್ರವಾಗಿ ಚುನಾವಣಾ ಕಣಕ್ಕಿಳಿಯುವ ಘೋಷಣೆ ಮಾಡಿದ್ದಾರೆ. ಇದು ಬಿಜೆಪಿ ಪಾಳೇಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ!

ಹಾವೇರಿ-ಗದಗ (haveri – gadag) ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಕೆ.ಇ.ಕಾಂತೇಶ್’ಗೆ (k e kantesh) ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಬೇಸರಗೊಂಡಿದ್ದ ಕೆ.ಎಸ್.ಈಶ್ವರಪ್ಪ, ಇದೀಗ ಕೊನೆಗೂ ಬಂಡಾಯದ ಬಾವುಟ ಹಾರಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (b s yediyurappa) ವಿರುದ್ದ ತಿರುಗಿ ಬಿದ್ದಿದ್ದಾರೆ.

ಶಿವಮೊಗ್ಗದ (shimoga) ಬಂಜಾರ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಅಭಿಪ್ರಾಯ ಸಂಗ್ರಹಣೆಯ ಸಭೆಯಲ್ಲಿ, ಬಂಡಾಯವಾಗಿ ಕಣಕ್ಕಿಳಿಯುವ ಘೋಷಣೆಯನ್ನು ಕೆ.ಎಸ್.ಈಶ್ವರಪ್ಪ ಮಾಡಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ.

ಅಡೆತಡೆ : ಪ್ರಸ್ತುತ ಶಿವಮೊಗ್ಗ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೀಗ ಕೆ.ಎಸ್.ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುತ್ತಿರುವುದು ಸಹಜವಾಗಿಯೇ ಬಿಜೆಪಿ ಪಕ್ಷಕ್ಕೆ ಅಡೆತಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು (puttur) ಕ್ಷೇತ್ರದಲ್ಲಿ ಹಿಂದೂತ್ವ ಪ್ರತಿಪಾದಕ ಅರುಣ್ ಕುಮಾರ್ ಪುತ್ತಿಲ (arun kumar puthila) ಅವರು, ಟಿಕೆಟ್ ಸಿಗದ ಕಾರಣದಿಂದ ಬಿಜೆಪಿ ಅಭ್ಯರ್ಥಿ ಎದುರು ಸ್ವತಂತ್ರವಾಗಿ ಕಣಕ್ಕಿಳಿದಿದ್ದರು. ಅವರ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದರು. ಇದೀಗ ಕೆಎಸ್ಇ (kse) ಕೂಡ ಅದೇ ಮಾದರಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುವ ತಯಾರಿ ನಡೆಸುತ್ತಿದ್ದಾರೆ.

ಆದರೆ ಕೆಎಸ್ಇಗೆ ಶಿವಮೊಗ್ಗ ನಗರ ವಿಧಾನಸಭಾ (shimoga assembly) ಕ್ಷೇತ್ರದಲ್ಲಿರುವಷ್ಟು ಬೆಂಬಲಿಗರ ಪಡೆ, ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿಲ್ಲ. ಚುನಾವಣೆ ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಹಾಗೆಯೇ ಬಿಜೆಪಿ ಮತ ಬ್ಯಾಂಕ್ (bjp vote bank) ಸೆಳೆಯುವುದು ಅವರಿಗೆ ಕಷ್ಟಕರವಾಗಬಹುದು. ಆದರೆ ಮುಂದಿನ ದಿನಗಳಲ್ಲಿ ಕೆಎಸ್ಇ ತಂತ್ರಗಾರಿಕೆ ಏನಾಗಿರಲಿದೆ? ಅವರ ‘ಹಿಂದುತ್ವ’ (hindutva) ‘ಪಕ್ಷ ನಿಷ್ಠರಿಗೆ ಅನ್ಯಾಯ’ದ ಟ್ರಂಪ್ ಕಾರ್ಡ್ ಗಳು ಎಷ್ಟರಮಟ್ಟಿಗೆ  ಫಲ ನೀಡಲಿದೆ? ಎಂಬುವುದನ್ನು ಕಾದು ನೋಡಬೇಕಾಗಿದೆ’ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಕಾಂಗ್ರೆಸ್ ಲೆಕ್ಕಾಚಾರ : ಕಾಂಗ್ರೆಸ್ ಪಕ್ಷ (congress party) ದಿಂದ ಮಾಜಿ ಸಿಎಂ ಎಸ್.ಬಂಗಾರಪ್ಪ (s bangarappa) ಪುತ್ರಿ ಗೀತಾ ಶಿವರಾಜಕುಮಾರ್ (geetha shivarajkumar) ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಲ್ಲಿನ ಅಂತರ್ ಕಲಹದ ಲಾಭವಾಗುವ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ. ‘ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು, ಸಾಂಪ್ರದಾಯಿಕ ಮತಗಳ ಜೊತೆಗೆ ಈಶ್ವರಪ್ಪ ಬಂಡಾಯ ಸ್ಪರ್ಧೆ ಪಕ್ಷಕ್ಕೆ ಸಹಕಾರಿಯಾಗಲಿದೆ’ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ.

ಒಟ್ಟಾರೆ ಕೆ.ಎಸ್.ಈಶ್ವರಪ್ಪ ಬಂಡಾಯ ಸ್ಪರ್ಧೆಯಿಂದ, ಶಿವಮೊಗ್ಗ ಕ್ಷೇತ್ರವು ಮತ್ತೊಮ್ಮೆ ಹೈವೋಲ್ಟೇಜ್ ಕಣವಾಗಲಿದೆ. ಇಡೀ ರಾಷ್ಟ್ರ – ರಾಜ್ಯದ ಗಮನ ಸೆಳೆಯುವುದಂತೂ ನಿಶ್ಚಿತವಾಗಿದೆ.

*** ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರನ್ನು ಮಣಿಸುವ ಮೂಲಕ, ಬಿ.ಎಸ್.ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಬೇಕು ಎಂಬ ಕಾರಣದಿಂದ ಕೆ.ಎಸ್.ಈಶ್ವರಪ್ಪ ಚುನಾವಣೆ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದೇ ಹೇಳಲಾಗುತ್ತಿದೆ. ಈ ಕಾರಣದಿಂದಲೇ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕುವ ನಿರ್ಧಾರ ಪ್ರಕಟಿಸಿದ್ದಾರೆ. ಮತ್ತೆ ಹಿಂದುತ್ವದ ಟ್ರಂಪ್ ಕಾರ್ಡ್ ಉರುಳಿಸುತ್ತಿದ್ದಾರೆ. ಆದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಓಟ್ ಬ್ಯಾಂಕ್ ನ್ನು ಅಷ್ಟು ಸುಲಭವಾಗಿ ಈಶ್ವರಪ್ಪ ಬೇಧಿಸಲಿದ್ದಾರಾ? ಬಿ.ವೈ.ರಾಘವೇಂದ್ರರನ್ನು ಸೋಲಿಸುವ ಮಟ್ಟಕ್ಕೆ ಮತ ಗಳಿಸಲಿದ್ದಾರಾ? ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

POCSO case against former CM BS Yeddyurappa: Handed over to CID investigation! ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ದ ಪೋಕ್ಸೊ ಕೇಸ್ : ಸಿಐಡಿ ತನಿಖೆಗೆ ಹಸ್ತಾಂತರ! Previous post ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ದ ಪೋಕ್ಸೋ ಕೇಸ್  : ಸಿಐಡಿ ತನಿಖೆಗೆ ಹಸ್ತಾಂತರ!
ಶಿಕಾರಿಪುರದ ತೋಗರ್ಸಿ ಬಳಿ ಶಿವಮೊಗ್ಗದ ಯುವಕನ ಭೀಕರ ಹತ್ಯೆ! *ಕಾರಿಗೆ ಬೆಂಕಿ ಹಚ್ಚಿ ದೇಹ ಸುಟ್ಟು ಹಾಕಿದ ಹಂತಕರು!! Next post ಶಿಕಾರಿಪುರದ ತೋಗರ್ಸಿ ಬಳಿ ಶಿವಮೊಗ್ಗದ ಯುವಕನ ಭೀಕರ ಹತ್ಯೆ!