ಶಿಕಾರಿಪುರದ ತೋಗರ್ಸಿ ಬಳಿ ಶಿವಮೊಗ್ಗದ ಯುವಕನ ಭೀಕರ ಹತ್ಯೆ! *ಕಾರಿಗೆ ಬೆಂಕಿ ಹಚ್ಚಿ ದೇಹ ಸುಟ್ಟು ಹಾಕಿದ ಹಂತಕರು!!

ಶಿಕಾರಿಪುರದ ತೋಗರ್ಸಿ ಬಳಿ ಶಿವಮೊಗ್ಗದ ಯುವಕನ ಭೀಕರ ಹತ್ಯೆ!

ಶಿಕಾರಿಪುರ / ಶಿವಮೊಗ್ಗ, ಮಾ. 16: ಶಿಕಾರಿಪುರ (shikaripura) ತಾಲೂಕಿನ ಶಿರಾಳಕೊಪ್ಪ (shiralakoppa) ಸಮೀಪದ ತೋಗರ್ಸಿ ಬಳಿ, ಶಿವಮೊಗ್ಗದ (shimoga) ಯುವಕನೋರ್ವನನ್ನು ಭೀಕರವಾಗಿ ಕೊಲೆ (murder) ಮಾಡಿರುವ ಘಟನೆ ತಡರಾತ್ರಿ ನಡೆದಿದ್ದು, ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಗಾಡಿಕೊಪ್ಪದ (gadikoppa) ಮೈಸೂರು ಬೀದಿ ನಿವಾಸಿ ವೀರೇಶ್ (27) ಎಂಬ ಯುವಕನೇ ಭೀಕರವಾಗಿ ಹತ್ಯೆಗೀಡಾದ ಯುವಕ ಎಂದು ಹೇಳಲಾಗಿದೆ. ತೋಗರ್ಸಿ (togarsi) ಹೊರವಲಯದ ಸ್ಮಶಾನದ ಬಳಿ ಘಟನೆ ನಡೆದಿದೆ.

ಆತ ಕೊಂಡೊಯ್ದ ಇನ್ನೋವಾ ಕಾರಿನ (innvoa car) ಡಿಕ್ಕಿಯಲ್ಲಿ, ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹಂತಕರು ಕಾರಿಗೆ ಬೆಂಕಿ ಹಚ್ಚಿ ಸುಟ್ಟಿರುವುದರಿಂದ ದೇಹವು ಸಂಪೂರ್ಣ ಸುಟ್ಟು ಕರಕಲಾಗಿದೆ. ಯುವಕನನ್ನು ಯಾವ ರೀತಿಯಲ್ಲಿ ಹತ್ಯೆ ಮಾಡಲಾಗಿದೆ ಎಂಬಿತ್ಯಾದಿ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

ರಾತ್ರಿ ಗಾಡಿಕೊಪ್ಪದ ಮನೆಯಲ್ಲಿದ್ದ ಯುವಕನಿಗೆ, ಕೆಲ ಪರಿಚಿತರು ಆತನ ಮೊಬೈಲ್ ಫೋನ್ ಗೆ ಕರೆ ಮಾಡಿದ್ದರು. ಸ್ನೇಹಿತರೋರ್ವರ ಇನ್ನೋವಾ ಕಾರಿನಲ್ಲಿ ವೀರೇಶ್ ತೆರಳಿದ್ದರು. ನಂತರ ಮನೆಗೆ ಹಿಂದಿರುಗಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಶಿಕಾರಿಪುರ ಡಿವೈಎಸ್‌ಪಿ (dysp) ಕೇಶವ್‍,  ಇನ್ಸ್’ಪೆಕ್ಟರ್ (pi) ರುದ್ರೇಶ್, ಶಿರಾಳಕೊಪ್ಪ ಠಾಣೆ (shiralakoppa police station) ಸಬ್ ಇನ್ಸ್’ಪೆಕ್ಟರ್ (psi) ರಮೇಶ್ ಮತ್ತವರ  ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

KS Eshwarappa Contest in Shimoga Constituency:Calculation of profit and loss has begun! ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ : ಶುರುವಾಗಿದೆ ಲಾಭ ನಷ್ಟದ ಲೆಕ್ಕಾಚಾರ! ವರದಿ : ಬಿ. ರೇಣುಕೇಶ್ reporter : b. Renukesha KS Eshwarappa Contest in Shimoga Constituency:Calculation of profit and loss has begun! ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ : ಶುರುವಾಗಿದೆ ಲಾಭ ನಷ್ಟದ ಲೆಕ್ಕಾಚಾರ! ವರದಿ : ಬಿ. ರೇಣುಕೇಶ್ reporter : b. Renukesha Previous post ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ : ಶುರುವಾಗಿದೆ ಲಾಭ – ನಷ್ಟದ ಲೆಕ್ಕಾಚಾರ!
Chandragutti Shree Renukamma Devi Jatra: Ban on naked service permission for worship rituals ಚಂದ್ರಗುತ್ತಿ ಶ್ರೀ ರೇಣುಕಮ್ಮ ದೇವಿ ಜಾತ್ರೆ: ಬೆತ್ತಲೆ ಸೇವೆ ನಿಷೇಧ ಪೂಜಾ ವಿಧಿ-ವಿಧಾನಗಳಿಗೆ ಅನುಮತಿ Next post ಚಂದ್ರಗುತ್ತಿ ಜಾತ್ರೆ : ಬೆತ್ತಲೆ ಸೇವೆ ನಿಷೇಧ – ಪೂಜಾ ವಿಧಿವಿಧಾನಗಳಿಗೆ ಅನುಮತಿ