
ಶಿವಮೊಗ್ಗದಲ್ಲಿ ಪತ್ನಿ ಪರ ಪ್ರಚಾರ : ನಟ ಶಿವರಾಜಕುಮಾರ್ ಸಿನಿಮಾ, ಜಾಹೀರಾತುಗಳ ನಿರ್ಬಂಧಕ್ಕೆ ಆಗ್ರಹ
ಶಿವಮೊಗ್ಗ / ಬೆಂಗಳೂರು, ಮಾ. 23: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (shimoga loksabha constituency) ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪತ್ನಿ ಗೀತಾ ಶಿವರಾಜಕುಮಾರ್ (geetha shivarajkumar) ಅವರ ಪರವಾಗಿ, ಇತ್ತೀಚೆಗೆ ಚಿತ್ರನಟ ಶಿವರಾಜಕುಮಾರ್ (actor shivarajkumar) ಅವರು ಬಿರುಸಿನ ಪ್ರಚಾರ ನಡೆಸಿದ್ದರು.
ಈ ನಡುವೆ ಅವರು ನಟಿಸಿರುವ ಸಿನಿಮಾ (cinema), ಜಾಹೀರಾತು, ಟಿವಿ ಶೋಗಳ ಪ್ರದರ್ಶನಕ್ಕೆ ಚುನಾವಣೆ (election) ಪೂರ್ಣಗೊಳ್ಳುವವರೆಗೆ ನಿರ್ಬಂಧ ಹೇರಬೇಕೆಂದು ಆಗ್ರಹಿಸಿ, ಶುಕ್ರವಾರ ಬಿಜೆಪಿ (bjp) ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಸಂಘಟನೆ ರಾಜ್ಯಾಧ್ಯಕ್ಷ ರಘು ಎಂಬುವರು ಬೆಂಗಳೂರಿನಲ್ಲಿ (bengaluru) ಮುಖ್ಯ ಚುನಾವಣಾ ಆಯುಕ್ತರ ಕಚೇರಿ (election commission) ಯಲ್ಲಿ ದೂರು ಸಲ್ಲಿಸಿದ್ದಾರೆ.
ನಟ ಶಿವರಾಜಕುಮಾರ್ ಅವರು ಕಾಂಗ್ರೆಸ್ (congress) ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಅವರು ಖ್ಯಾತ ನಟರಾಗಿದ್ದು, ಚುನಾವಣೆ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆಯಾಗಬೇಕಾಗಿದೆ.
ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ಸಿನಿಮಾ ಮಂದಿರಗಳು, ಟಿವಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಿನಿಮಾ ಹಾಗೂ ಜಾಹೀರಾತುಗಳ ಪ್ರದರ್ಶನಕ್ಕೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.
ನಿರ್ಬಂಧ ಸಾಧ್ಯತೆ? : ಶಿವರಾಜಕುಮಾರ್ ಅವರು ಪತ್ನಿ ಪರ ಶಿವಮೊಗ್ಗ (shivamogga) ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಕಾರಣದಿಂದ ಮಾದರಿ ನೀತಿ-ಸಂಹಿತೆ ಪೂರ್ಣಗೊಳ್ಳುವವರೆಗೂ ಅವರು ಅಭಿನಯಿಸಿದ ಸಿನಿಮಾ, ಜಾಹೀರಾತುಗಳ ಪ್ರದರ್ಶನಕ್ಕೆ ನಿರ್ಬಂಧ ಬೀಳುವ ಸಾಧ್ಯತೆಗಳು ಕಂಡುಬರುತ್ತಿವೆ.