B.Y.Raghavendra criticism against K. S. Eshwarappa! ಕೆ.ಎಸ್.ಈಶ್ವರಪ್ಪ ವಿರುದ್ದ ಬಿ.ವೈ.ರಾಘವೇಂದ್ರ ಟೀಕಾಪ್ರಹಾರ! reporter – b. renukesha

ಕೆ.ಎಸ್.ಈಶ್ವರಪ್ಪ ವಿರುದ್ದ ಬಿ.ವೈ.ರಾಘವೇಂದ್ರ ಟೀಕಾಪ್ರಹಾರ!

ಸೊರಬ, ಮಾ. 29: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (shivamogga loksabha) ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರವರು (k s eshwarappa), ಯಡಿಯೂರಪ್ಪ ಮತ್ತವರ ಕುಟುಂಬದವರ ವಿರುದ್ದ ನಿರಂತರ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಂಸದ ಬಿ.ವೈ.ರಾಘವೇಂದ್ರರವರು (b y raghavendra) ಕೆ.ಎಸ್.ಈಶ್ವರಪ್ಪ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ!

ಸೊರಬ (soraba) ಪಟ್ಟಣದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಈಶ್ವರಪ್ಪರ ಬಂಡಾಯ ಯಡಿಯೂರಪ್ಪ ಕುಟುಂಬದ ವಿರುದ್ದವಲ್ಲ. ಅದು ಪಕ್ಷದ ಕೇಂದ್ರ ಹೈಕಮಾಂಡ್ ವಿರುದ್ದವಾಗಿದೆ. ಅದನ್ನು ನೇರವಾಗಿ ಹೇಳದೆ ಯಡಿಯೂರಪ್ಪ ಕುಟುಂಬದ ವಿರುದ್ದ ಹಾಗೂ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸುವ ಉದ್ದೇಶವೆಂದು ಹೇಳುತ್ತಿದ್ದಾರೆ’ ಎಂದು ಆರೋಪಿಸಿದ್ಧಾರೆ.

ಈಶ್ವರಪ್ಪರವರು ಕಚೇರಿ ಉದ್ಘಾಟನೆ ವೇಳೆ ತಮ್ಮ ವಿರುದ್ದ ಸುಳ್ಳು ಆರೋಪ ಮಾಡಿದ್ದಾರೆ. ತಾವು ಸ್ವಾಮೀಜಿಗಳಿಗೆ ಹಾಗೂ ಕಾರ್ಯಕರ್ತರಿಗೆ ಪೋನ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದೆನೆ ಎಂದು ಹೇಳಿದ್ದಾರೆ. ಈ ಬಗ್ಗೆ ಒಂದೇ ಒಂದು ಊದಾಹರಣೆ ತೋರಿಸಲಿ. ಚಂದ್ರಗುತ್ತಿ ದೇವಾಲಯಕ್ಕೆ ಆಗಮಿಸಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಶಿವಮೊಗ್ಗ ಕ್ಷೇತ್ರ ಪ್ರಜ್ಞಾವಂತ ಮತದಾರರಿದ್ದಾರೆ. ಸುಳ್ಳು ಹೇಳುವ ಬದಲು ನಿಮ್ಮ ಸಾಧನೆ ಏನೆಂಬುವುದನ್ನ ತೋರಿಸಿ ಪ್ರಚಾರ ಮಾಡಿ. ಬಿಜೆಪಿ ಅಭ್ಯರ್ಥಿ ಗೆದ್ದು ಹೋದರೆ ಮಾತ್ರ ಮೋದಿ ಪರ ಬೆಂಬಲ ಸಿಗಲಿದೆ. ಆದರೆ ಯಾರೋ ಮೋದಿ ಫೋಟೋ ಹಾಕಿಕೊಂಡು ಗೆದ್ದು ಹೋದರೆ ಪ್ರಯೋಜನವಾಗುವುದಿಲ್ಲ.

ಬಿಜೆಪಿ ಅಭ್ಯರ್ಥಿಯನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಇದಕ್ಕೆ ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರು ಮನ್ನಣೆ ನೀಡುವುದಿಲ್ಲ. ತಮ್ಮ ಗೆಲುವು ನಿಶ್ಚಿತವಾಗಿದ್ದು, ಮೋದಿಯ ಪ್ರತಿನಿಧಿಯಾಗಿ ಕಳುಹಿಸಿ ಕೊಡಲಿದ್ದಾರೆ ಎಂದರು.

ಕಳೆದ ಹದಿನೈದು ದಿನಗಳ ಹಿಂದಷ್ಟೆ, ರಾಘುವನ್ನು ಗೆಲ್ಲಿಸಬೇಕೆಂದು ಆಶೀರ್ವಾದದ ಮಾತು ಬಂದಿದ್ದ  ನಿಮ್ಮ ಬಾಯಲ್ಲಿ ಈ ರೀತಿಯ ಮಾತು ಬರುತ್ತಿದೆ. ಜನ ಪ್ರಜ್ಞಾವಂತರಿದ್ದಾರೆ. ಎಲ್ಲವೂ ತಿಳಿದುಕೊಳ್ಳಲಿದ್ದಾರೆ ಎಂದು ಕೆ.ಎಸ್.ಈಶ‍್ವರಪ್ಪ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

*** ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ನಾಲ್ಕೈದು ತಿಂಗಳಾದ ನಂತರ ಈಗೇಕೆ ಅಸಮಾಧಾನವಾಗುತ್ತಿದೆ. ಯಾವಾಗ ಕಾಂತೇಶ‍್ ಅವರಿಗೆ ಟಿಕೆಟ್ ಸಿಕ್ಕಿಲ್ಲವೋ ಆಗಿನಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಕಾಂತೇಶ‍್ (kantesh) ಅವರಿಗೆ ಟಿಕೆಟ್ ಸಿಗಬೇಕು ಎಂಬುವುದು ನಮ್ಮಗಳ ಆಕಾಂಕ್ಷೆಯೂ ಆಗಿತ್ತು. ಪಕ್ಷದ ಕೇಂದ್ರ ಚುನಾವಣಾ ಸಮಿತಿಯಲ್ಲಿ ಪ್ರಧಾನಿ ಸೇರಿದಂತೆ ಹಲವು ಮುಖಂಡರಿದ್ದಾರೆ. ಅವರು ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಆದರೆ ಕೇವಲ ಯಡಿಯೂರಪ್ಪ ಕುಟುಂಬದ ವಿರುದ್ದ ಮಾತ್ರ ಆರೋಪ ಮಾಡುತ್ತಿರುವುದೇಕೆ? ಇದೀಗ ಬೇರೆ ಬೇರೆ ಸಮಾಜದ ಮುಖಂಡರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಸಲಾಗುತ್ತಿದೆ. ಇದು ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ವಿರುದ್ದ ಹರಿಹಾಯ್ದರು.

ಇತ್ತೀಚೆಗೆ ಶಿಕಾರಿಪುರದಲ್ಲಿ ನಡೆದ ಪಕ್ಷದ ಒಬಿಸಿ ಸಮಾವೇಶದಲ್ಲಿ ಕೆ.ಎಸ್.ಈಶ್ವರಪ್ಪರವರು ಮಾತನಾಡಿ, ರಾಘಣ್ಣನನ್ನ 5 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಯಡಿಯೂರಪ್ಪ ಕುಟುಂಬ ಯಾವುದೋ ಒಂದು ಜಾತಿಗೆ ಸೀಮಿತವಲ್ಲ ಎಂದು ಇದೇ ಈಶ್ವರಪ್ಪ ಹೇಳಿದ್ದರು ಎಂದು ಕುಟುಕಿದರು.

One thought on “ಕೆ.ಎಸ್.ಈಶ್ವರಪ್ಪ ವಿರುದ್ದ ಬಿ.ವೈ.ರಾಘವೇಂದ್ರ ಟೀಕಾಪ್ರಹಾರ!

  1. KSE has taken totally wrong decision, whatever may be the reason. His political career is finished and his son’s political career is finished before it took off. He is very sure that he will not win. He can only damage BYR’s chances. But, that is going to give antinationals a thin ray of hope. Let’s hope for the good of the country. For that matter, I am of the opinion that Mrs. Geetha is not capable also.

Comments are closed.

In Shimoga taluk the ground water is falling to the sun - draining bore wells wells! Reporter : b. renukesha ಬಿಸಿಲ ಧಗೆಗೆ ಕುಸಿಯುತ್ತಿರುವ ಅಂತರ್ಜಲ – ಬರಿದಾಗುತ್ತಿರುವ ಬೋರ್’ವೆಲ್, ಬಾವಿಗಳು : ಟ್ಯಾಂಕರ್ ಮೂಲಕ ನೀರು ಪೂರೈಕೆ! ವರದಿ : ಬಿ. ರೇಣುಕೇಶ್, Previous post ಬಿಸಿಲ ತಾಪಕ್ಕೆ ಬರಿದಾಗುತ್ತಿರುವ ಬೋರ್’ವೆಲ್, ಬಾವಿಗಳು : ಟ್ಯಾಂಕರ್ ಮೂಲಕ ನೀರು ಪೂರೈಕೆ!
The tragic death of three students who went swimming in the Tunga river! ತುಂಗಾ ನದಿಯಲ್ಲಿ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳ ದಾರುಣ ಸಾವು! Next post ತುಂಗಾ ನದಿಯಲ್ಲಿ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳ ದಾರುಣ ಸಾವು!