ಯಶಸ್ವಿಯಾದ ವಿಮಾನದ ಲ್ಯಾಂಡಿಂಗ್ : ನಿಟ್ಟುಸಿರು ಬಿಟ್ಟ ಅಧಿಕಾರಿಗಳ ತಂಡ!

ಶಿವಮೊಗ್ಗ, ಫೆ. 21: ಸದ್ಯ ಇಡೀ ದೇಶದ ಗಮನ ಸೆಳೆದಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ, ಲೋಹದ ಹಕ್ಕಿಗಳ ಸಂಚಾರ ಆರಂಭವಾಗಿದೆ. ಮಂಗಳವಾರ ಏರ್’ಪೋರ್ಟ್’ಗೆ ಪರೀಕ್ಷಾರ್ಥವಾಗಿ ಬಂದ ವಾಯು ಸೇನೆಯ ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ!
ಇದು ಅಧಿಕಾರಿಗಳ ತಂಡ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಳೆದ ಹಲವು ದಿನಗಳಿಂದ ಹಿರಿಯ ಅಧಿಕಾರಿಗಳ ತಂಡವು ವಿಮಾನ ನಿಲ್ದಾಣದ ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಅಕ್ಷರಶಃ ನಿದ್ದೆಬಿಟ್ಟು ಕೆಲಸ ಮಾಡುತ್ತಿದೆ. ಯಾವುದೇ ಲೋಪಕ್ಕೆ ಆಸ್ಪದವಾಗದಂತೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ.
ಮಂಗಳವಾರ ವಾಯು ಸೇನೆಯ ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿರುವುದಕ್ಕೆ ಅಧಿಕಾರಿಗಳ ತಂಡ ಅಕ್ಷರಶಃ ಸಂಭ್ರಮಿಸಿದೆ. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪಿಡಬ್ಲ್ಯೂಡಿ ಇಲಾಖೆ ಮುಖ್ಯ ಎಂಜಿನಿಯರ್ ಕಾಂತರಾಜ್, ಕಾರ್ಯಪಾಲಕ ಅಭಿಯಂತರ ಸಂಪತ್ ಕುಮಾರ್ ಪಿಂಗ್ಳೆ ಮತ್ತೀತರ ಅಧಿಕಾರಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ.
ಚಿತ್ತ: ಫೆ. 27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿರವರ ಕಾರ್ಯಕ್ರಮದತ್ತ ಜಿಲ್ಲಾಡಳಿತ ಚಿತ್ತ ನೆಟ್ಟಿದೆ. ಯಶಸ್ವಿಯಾಗಿ ಕಾರ್ಯಕ್ರಮ ನಡೆಯುವತ್ತ ಅಧಿಕಾರಿಗಳ ತಂಡ ಸಮರೋಪಾದಿ ಸಿದ್ದತಾ ಕಾರ್ಯ ನಡೆಸುತ್ತಿದೆ.

Previous post ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ವಿಮಾನ..!
Next post ಫೆ.23, 24 ರಂದು ಶಿವಮೊಗ್ಗ ತಾಲೂಕಿನ ಕುಂಸಿ, ಆಯನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ