
ಸುಮಲತಾ ಅಂಬರೀಷ್ ಮಹತ್ವದ ಘೋಷಣೆ!
ಮಂಡ್ಯ, ಏ. 3: ‘ಸಕ್ಕರೆ ನಾಡು ಮಂಡ್ಯ (mandaya) ಬಿಟ್ಟು, ಬೇರೆ ಕಡೆ ನನ್ನ ರಾಜಕೀಯ ಜೀವನವಿಲ್ಲ. ಆದರೆ ಲೋಕಸಭಾ ಚುನಾವಣಾ (loksabha election) ಕಣಕ್ಕಿಳಿಯುವುದಿಲ್ಲ. ಬಿಜೆಪಿ ಪಕ್ಷ ಸೇರ್ಪಡೆಯಾಗುವ ನಿರ್ಧಾರ ಮಾಡಿದ್ದೆನೆ. ಬಿಜೆಪಿ – ಜೆಡಿಎಸ್ (bjp – jds) ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುತ್ತೆನೆ’ ಎಂದು ಕ್ಷೇತ್ರದ ಹಾಲಿ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಷ್ (sumalatha ambareesh) ಅವರು ಘೋಷಿಸಿದ್ದಾರೆ.
ಮಂಡ್ಯದಲ್ಲಿ ಬುಧವಾರ ನಡೆದ ಬೆಂಬಲಿಗರ ಸಭೆಯಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಪ್ರಸ್ತುತ ಮಂಡ್ಯ ಲೋಕಸಭಾ ಕ್ಷೇತ್ರದಿಂದ (mandya loksabha constituency) ಜೆಡಿಎಸ್ ಪಕ್ಷದ ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (h d kumaraswamy) ಅವರು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ, ಏ.4 ರಂದು ಮಂಡ್ಯದಲ್ಲಿ ನಡೆಯಲಿರುವ ಬೆಂಬಲಿಗರ ಸಭೆಯಲ್ಲಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಸುಮಲತಾ ಅಂಬರೀಷ್ ತಿಳಿಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಇದರಿಂದ ಹೆಚ್.ಡಿ.ಕುಮಾರಸ್ವಾಮಿಗೆ ಎದುರಾಗಿದ್ದ ದೊಡ್ಡ ರಾಜಕೀಯ ಸಂಕಷ್ಟ ತಪ್ಪಿದಂತಾಗಿದೆ.
ಸುಮಲತಾ ಹೇಳಿದ್ದೇನು? : ಬೆಂಬಲಿಗರ ಸಭೆಯಲ್ಲಿ ಸುಮಲತಾ ಅವರು ಸುದೀರ್ಘ ಭಾಷಣ ಮಾಡಿದರು. ಸೀಟು ಹಂಚಿಕೆ ವೇಳೆ ಬಿಜೆಪಿ ಪಕ್ಷಕ್ಕೆ ಮಂಡ್ಯ ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಕೊನೆಯವರೆಗೂ ಹೋರಾಟ ನಡೆಸಿದೆ. ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಮೈಸೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವುದಾಗಿ ಮುಖಂಡರು ಹೇಳಿದರು.
ಆದರೆ ತಾವು ಎಲ್ಲಿಗೂ ಹೋಗುವುದಿಲ್ಲ. ಗೆದ್ದರೂ ಮಂಡ್ಯ, ಸೋತರೂ ಮಂಡ್ಯನೇ ಎಂದೂ ಹೇಳಿದ್ದೆ. ತಾವು ಸ್ವಾರ್ಥ ರಾಜಕಾರಣ ಕಲಿತಿಲ್ಲ. ಅಂಬರೀಷ್ ಅವರು ಕೂಡ ಯಾವುದಕ್ಕೂ ಆಸೆ ಪಟ್ಟಿರಲಿಲ್ಲ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದ (congress party) ಪ್ರಮುಖ ನಾಯಕರೊಬ್ಬರು ಸುಮಲತಾ ಅವರ ಅವಶ‍್ಯಕತೆ ನಿನ್ನೆಯೂ ಇಲ್ಲ, ಇವತ್ತಿಗೂ ಇಲ್ಲ, ನಾಳೆಯೂ ಇಲ್ಲ ಎಂದು ಹೇಳಿದ್ದಾರೆ. ನಮಗೆ ಬೆಲೆಯಿಲ್ಲದ ಜಾಗಕ್ಕೆ ನಾವೇಕೆ ಹೋಗಬೇಕು. ಅಂಬರೀಷ್ ಅವರು ಸ್ವಾಭಿಮಾನದ ಪ್ರತೀಕ. ಅದರಂತೆ ತಾವು ಕೂಡ ಸ್ವಾಭಿಮಾನಿಯಾಗಿದ್ದೆನೆ ಎಂದರು.
ಬಿಜೆಪಿಯವರು (bjp) ತಮ್ಮನ್ನು ಗೌರವ ಹಾಗೂ ವಿಶ್ವಾಸದಿಂದ ನಡೆಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (narendra modi) ಸೇರಿದಂತೆ ಹಲವು ಪ್ರಮುಖರು ತಮ್ಮನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಅದರಂತೆ ತಾವು ಬಿಜೆಪಿ ಪಕ್ಷ ಸೇರ್ಪಡೆಯಾಗುವ ನಿರ್ಧಾರ ಮಾಡಿದ್ದೆನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಿಲ್ಲ. ಮಂಡ್ಯದ ಋಣವನ್ನು ಎಂದಿಗೂ ಬಿಡುವುದಿಲ್ಲ. ತಮ್ಮ ಈ ನಿರ್ಧಾರಕ್ಕೆ ತಾವೆಲ್ಲ ಬೆಂಬಲಿಸುತ್ತಿರಿ ಎಂಬ ವಿಶ್ವಾಸವಿದೆ ಎಂದು ಸುಮಲತಾ ಅವರು ಬೆಂಬಲಿಗರ ಸಭೆಯಲ್ಲಿ ತಿಳಿಸಿದ್ದಾರೆ.