
ಭೀಕರ ರಸ್ತೆ ಅಪಘಾತ : ಕಾರಿನಲ್ಲಿದ್ದ ಮೂವರು ಸಾವು – ನಾಲ್ವರಿಗೆ ಗಾಯ!
ನ್ಯಾಮತಿ (nyamathi), ಏ. 11: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಓಮ್ನಿ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ (accident) ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನ್ಯಾಮತಿ ತಾಲೂಕು ಸವಳಂಗ (savalanga) ಸಮೀಪದ ಚಿನ್ನಿಕಟ್ಟೆ – ಬಿದರಹಳ್ಳಿ ಮಾರ್ಗದಲ್ಲಿ ನಡೆದಿದೆ.
ಶಿವಮೊಗ್ಗ (shivamogga) ತಾಲೂಕಿನ ಹರಮಘಟ್ಟದ ನಂಜುಂಡಪ್ಪ (83), ರಾಕೇಶ್ (27) ಹಾಗೂ ಹೊನ್ನಾಳ್ಳಿ ತಾಲೂಕಿನ ಸೂರಗೊಂಡನಕೊಪ್ಪದ (surgundanakoppa) ನಿವಾಸಿ ದೇವರಾಜ್ (30) ಮೃತಪಟ್ಟವರೆಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ (car) ನಾಲ್ವರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ( www.udayasaakshi.com )
ಓಮ್ನಿ ಕಾರಿನಲ್ಲಿ (omni car) 7 ಜನರು ಪ್ರಯಾಣಿಸುತ್ತಿದ್ದು, ಶಿವಮೊಗ್ಗದೆಡೆಯಿಂದ ಸೂರಗೊಂಡನಕೊಪ್ಪಕ್ಕೆ ತೆರಳುತ್ತಿತ್ತು. ಹಾಗೂ ಹಾನಗಲ್ (hangal) ಕಡೆಯಿಂದ ಶಿವಮೊಗ್ಗದೆಡೆಗೆ ಕೆ.ಎಸ್.ಆರ್.ಟಿ.ಸಿ (ksrtc bus) ಬಸ್ ಆಗಮಿಸುತ್ತಿತ್ತು ಎಂದು ಹೇಳಲಾಗಿದೆ.
ಅಪಘಾತದ ರಭಸಕ್ಕೆ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಜೊತೆಗೆ ಬಸ್ ಕೂಡ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿ, ಟೈರ್ ವೊಂದು ಕಳಚಿ ಬಿದ್ದಿದೆ. ಸ್ಥಳೀಯ ನಿವಾಸಿಗಳು ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಎಸ್ಪಿ (asp) ಮಂಜುನಾಥ್, ಡಿವೈಎಸ್ಪಿ (dysp) ಪ್ರಶಾಂತ್ ಮುನ್ನೊಳಿ, ನ್ಯಾಮತಿ ಪೊಲೀಸ್ ಠಾಣೆ (nyamathi police station) ಇನ್ಸ್’ಪೆಕ್ಟರ್ ರವಿ ಎನ್. ಎಸ್. ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ. ( www.udayasaakshi.com )