
ಭದ್ರಾವತಿಯ ಭದ್ರಾ ನದಿಯಲ್ಲಿ ಮೃತದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ
ಭದ್ರಾವತಿ (bhadravathi), ಏ.12 : ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೌಳಿಗರ ಬೀದಿ ಹಿಂಭಾಗದ ಭದ್ರಾ ನದಿಯಲ್ಲಿ (bhadra river) ಭಾಗಶಃ ಕೊಳೆತ ಸ್ಥಿತಿಯಲ್ಲಿ ಪುರುಷನ ಮೃತದೇಹ (dead body) ಪತ್ತೆಯಾಗಿದೆ.
ಮೃತರ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳು ಪತ್ತೆಯಾಗಿಲ್ಲ. ಮೃತರಿಗೆ ಸುಮಾರು 45 ರಿಂದ 50 ವರ್ಷ ವಯೋಮಾನವಿದೆ. 5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ತಲೆಯಲ್ಲಿ ಸುಮಾರು 3 ಇಂಚು ಉದ್ದದ ಗಾಯದ ಗುರುತು, ಎಡಕಣ್ಣಿನ ಹುಬ್ಬಿನ ಮೇಲೆ ಹಳೇಯ ಗಾಯದ ಗುರುತು ಇರುತ್ತದೆ. ( www.udayasaakshi.com )
ದೇಹದ ಹಲವೆಡೆ ಚರ್ಮ ಕೊಳೆತಿದೆ. ಕಣ್ಣುಗಳನ್ನು ಜಲಚರಗಳು ತಿಂದಿವೆ. ಮೈ ಮೇಲೆ ಹಳದಿ ಬಣ್ಣದ ಅಂಗಿ, ಬೂದು ಬಣ್ಣದ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ.
ಹೆಚ್ಚಿನ ಮಾಹಿತಿಗೆ ಭದ್ರಾವತಿ (bhadravathi) ಹಳೇನಗರ ಪೊಲೀಸ್ ಠಾಣೆಯನ್ನು (old town police station) ಸಂಪರ್ಕಿಸುವಂತೆ ಇನ್ಸ್’ಪೆಕ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. (www.udayasaakshi.com )