
ಶಿವಮೊಗ್ಗ ಜಿಲ್ಲೆಯಾದ್ಯಂತ ರೌಡಿಗಳ ಮನೆಗಳ ಮೇಲೆ ಪೊಲೀಸರ ರೈಡ್!
ಶಿವಮೊಗ್ಗ (shivamogga), ಏ. 13: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ (shimoga district) ವಿವಿಧೆಡೆ ರೌಡಿ ಶೀಟರ್ (rowdy sheeters) ಮನೆಗಳ ಮೇಲೆ ಪೊಲೀಸರು (police) ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ ಘಟನೆ, ಶನಿವಾರ ಮುಂಜಾನೆ ನಡೆದಿದೆ.
‘ಲೋಕಸಭೆ ಚುನಾವಣೆ (loksabha election) ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರೌಡಿ ಶೀಟರ್ ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಅವರು ಮಾಡುತ್ತಿರುವ ಕೆಲಸ, ( www.udayasaakshi.com )
ಮನೆಯಲ್ಲಿ ಮಾದಕ ಹಾಗೂ ಮಾರಕಾಸ್ತ್ರಗಳನ್ನಿಟ್ಟುಕೊಂಡಿರುವ ಬಗ್ಗೆ ಪರಿಶೀಲಿಸಲಾಯಿತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಮತ್ತು ಶಾಂತಿ ಭಂಗವನ್ನುಂಟು ಮಾಡದಂತಹ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ’ ಎಂದು ಪೊಲೀಸ್ ಇಲಾಖೆಯು (shimoga police dept) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
‘ಜಿಲ್ಲಾ ರಕ್ಷಣಾಧಿಕಾರಿ (sp) ಜಿ.ಕೆ.ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಶಿವಮೊಗ್ಗ ಎ ಹಾಗೂ ಬಿ ಉಪ ವಿಭಾಗಗಳ ಡಿವೈಎಸ್ಪಿಗಳಾದ (dysp) ಬಾಬು ಅಂಜನಪ್ಪ, ಸುರೇಶ್ ಎಂ, ಭದ್ರಾವತಿ (bhadravathi) ಉಪ ವಿಭಾಗ ಡಿವೈಎಸ್ಪಿ ನಾಗರಾಜ್, ಸಾಗರ (sagara) ಉಪ ವಿಭಾಗ ಡಿವೈಎಸ್ಪಿ ಗೋಪಾಲಕೃಷ್ಣ ತಿಮ್ಮಣ್ಣನಾಯ್ಕ್, ( www.udayasaakshi.com )
ಶಿಕಾರಿಪುರ (shikaripura) ಉಪ ವಿಭಾಗ ಡಿವೈಎಸ್ಪಿ ಕೇಶವ್, ತೀರ್ಥಹಳ್ಳಿ (thirthahalli) ಉಪ ವಿಭಾಗ ಡಿವೈಎಸ್ಪಿ ಗಜಾನನ ವಾಮನ ಸುತಾರ ಸೇರಿದಂತೆ ಆಯಾ ಠಾಣೆಗಳ ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್ ಗಳು ದಾಳಿಯಲ್ಲಿ ಭಾಗಿಯಾಗಿದ್ದರು.
ಪ್ರತ್ಯೇಕ ತಂಡಗಳ ರಚನೆ ಮಾಡಿಕೊಂಡು ಏಕಕಾಲದಲ್ಲಿಯೇ ರೌಡಿ ಶೀಟರ್ ಗಳ (rowdy’s) ಮನೆಗಳ ಮೇಲೆ ದಾಳಿ (raid) ನಡೆಸಿ ತಪಾಸಣೆ ನಡೆಸಿ ಪರಿಶೀಲನೆ ನಡೆಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ( www.udayasaakshi.com )