
ಶಿವಮೊಗ್ಗ : ಕೆರೆ ಹೂಳಿನಲ್ಲಿ ಸಿಲುಕಿ ಈಜಾಡಲು ತೆರಳಿದ್ದ ಬಾಲಕನ ದಾರುಣ ಸಾವು!
ಶಿವಮೊಗ್ಗ (shivamogga), ಏ. 14: ಕೆರೆಯಲ್ಲಿ ಈಜಾಡಲು (swimming) ತೆರಳಿದ ಬಾಲಕನೋರ್ವ, ಕೆರೆಯಲ್ಲಿನ ಹೂಳಿನಲ್ಲಿ (lake silt) ಸಿಲುಕಿ ಮೃತಪಟ್ಟ ದಾರುಣ ಘಟನೆ ಭಾನುವಾರ ಶಿವಮೊಗ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿ (mathodu village) ನಡೆದಿದೆ.
ಶಿಕಾರಿಪುರ (shikaripura) ತಾಲೂಕು ನಂದೀಹಳ್ಳಿ ಗ್ರಾಮದ ನಿವಾಸಿ ಜೀವನ್ (14) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಕ 8 ನೇ ತರಗತಿ ಅಭ್ಯಾಸ ಮಾಡುತ್ತಿದ್ದು, ಶಾಲೆಗೆ ರಜೆಯಿದ್ದ ಕಾರಣದಿಂದ ಮತ್ತೋಡು ಗ್ರಾಮದಲ್ಲಿರುವ ಚಿಕ್ಕಮ್ಮನ ಮನೆಗೆ ಆಗಮಿಸಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ( www.udayasaakshi.com )
‘ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಆದರೆ ಭಾರೀ ಪ್ರಮಾಣದ ಹೂಳು ತುಂಬಿಕೊಂಡಿದೆ. ಕೆರೆಯಲ್ಲಿ ಈಜಾಡಲು ಬಾಲಕ ತೆರಳಿದ್ದು, ಈ ವೇಳೆ ಹೂಳಿನಲ್ಲಿ ಸಿಲುಕಿ ಮುಳುಗಿದ್ದಾನೆ. ಗ್ರಾಮಸ್ಥರು ಹೂಳಿನಲ್ಲಿ ಸಿಲುಕಿ ಬಿದ್ದಿದ್ದ ಬಾಲಕನ ಮೃತದೇಹವನ್ನು ಹೊರ ತೆಗೆದಿದ್ದಾರೆ’ ಎಂದು ಸ್ಥಳೀಯ ಮುಖಂಡ ಪ್ರವೀಣ್ ಅವರು ಮಾಹಿತಿ ನೀಡಿದ್ದಾರೆ.
ಸದರಿ ಕೆರೆಯಲ್ಲಿ (lake) ಭಾರೀ ಪ್ರಮಾಣದ ಹೂಳು ತುಂಬಿಕೊಂಡಿದೆ. ಹೂಳು ತೆಗೆದು ಕೆರೆ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪ್ರವೀಣ್ ಅವರು ದೂರಿದ್ದಾರೆ. ( www.udayasaakshi.com )