
ಶಿವಮೊಗ್ಗ ಕ್ಷೇತ್ರ : ಕಾವೇರಿದ ಪ್ರಚಾರ – ಜೋರಾದ ನಾಯಕರ ಕೆಸರೆರಚಾಟ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಏ. 15: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (shimoga lok sabha constituency) ದಿನದಿಂದ ದಿನಕ್ಕೆ, ಬಿಸಿಲ ತಾಪದಷ್ಟೆ ಚುನಾವಣಾ ಕಾವು ಏರಲಾರಂಭಿಸಿದೆ. ಪ್ರಚಾರದ ಅಬ್ಬರ ಮುಗಿಲು ಮುಟ್ಟಲಾರಂಭಿಸಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಅಭ‍್ಯರ್ಥಿಗಳು (candidates) ಕ್ಷೇತ್ರ ಸುತ್ತು ಹಾಕಲಾರಂಭಿಸಿದ್ದಾರೆ. ಮತದಾರರ (voters) ಮನವೊಲಿಕೆಗೆ ಭಾರೀ ಕಸರತ್ತು ನಡೆಸಲಾರಂಭಿಸಿದ್ದಾರೆ.
ಈಗಾಗಲೇ ಶಿವಮೊಗ್ಗ ಕ್ಷೇತ್ರದಲ್ಲಿ ನಾಮಪತ್ರ (nomination) ಸಲ್ಲಿಕೆ ಕಾರ್ಯ ಆರಂಭವಾಗಿದೆ. ಇದಕ್ಕೆ ತೆರೆ ಬೀಳುವುದಕ್ಕೂ ಮುನ್ನವೇ ಪ್ರಮುಖ ಅಭ್ಯರ್ಥಿಗಳು ಹಾಗೂ ನಾಯಕರ ರೋಡ್ ಶೋ, ಸಾರ್ವಜನಿಕ ಸಭೆ – ಸಮಾರಂಭಗಳು, ಮತದಾರರ ಮನೆಮನೆ ಭೇಟಿಗಳು ಹೆಚ್ಚಾಗಲಾರಂಭಿಸಿದೆ. ( www.udayasaakshi.com )
ಹಾಗೆಯೇ ವಿವಿಧ ಸಮುದಾಯಗಳ ಗಮನ ಸೆಳೆಯಲು, ಧಾರ್ಮಿಕ ಕೇಂದ್ರಗಳಿಗೆ ಹಾಗೂ ಅವುಗಳ ಮುಖ್ಯಸ್ಥರನ್ನು ನಿರಂತರವಾಗಿ ಭೇಟಿಯಾಗುತ್ತಿದ್ದಾರೆ. ಇದೆಲ್ಲದರ ನಡುವೆ ನಡುವೆ ರಾಜಕೀಯ ನಾಯಕರ (political leaders) ನಡುವೆ ಆರೋಪ – ಪ್ರತ್ಯಾರೋಪಗಳು, ಟೀಕೆ – ಟಿಪ್ಪಣಿಗಳು ದಿನ ಕಳೆದಂತೆ ಬಿಸಿಯೇರಲಾರಂಭಿಸಿದೆ.
ಮತ್ತಷ್ಟು ಬಿರುಸು : ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡ ನಂತರ, ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಮತ್ತಷ್ಟು ಬಿರುಸುಗೊಳ್ಳುವುದು ನಿಶ್ಚಿತವಾಗಿದೆ. ಬಿಜೆಪಿ (bjp) ಹಾಗೂ ಕಾಂಗ್ರೆಸ್ (congress) ಪಕ್ಷಗಳ ಸ್ಟಾರ್ ಕ್ಯಾಂಪೇನರ್ ಗಳು (star campaigner) ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಆಗಮಿಸುತ್ತಿದ್ದು, ಸ್ಥಳ – ದಿನಾಂಕಗಳು ಇನ್ನಷ್ಟೆ ನಿಗದಿಯಾಗಬೇಕಾಗಿದೆ. ( www.udayasaakshi.com )
ಜಿದ್ದಾಜಿದ್ದಿ : ಪ್ರಸ್ತುತ ಶಿವಮೊಗ್ಗ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಕಳೆದ ಸರಿಸುಮಾರು ಒಂದೂವರೆ ದಶಕಗಳಿಂದ ಯಡಿಯೂರಪ್ಪ (yediyurappa) – ಬಂಗಾರಪ್ಪ (bangarappa) ಕುಟುಂಬಗಳ ನಡುವಿನ ಹೋರಾಟದಿಂದಲೇ ಕ್ಷೇತ್ರ ಗಮನ ಸೆಳೆಯುತ್ತಿತ್ತು. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿಯಿಂದ ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ (b y raghavendra) ಹಾಗೂ ಕಾಂಗ್ರೆಸ್ ನಿಂದ ಎಸ್.ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ (geetha shivarajkumar) ಅಖಾಡಕ್ಕಿಳಿಯುತ್ತಿದ್ದಾರೆ.
ಆದರೆ ಈ ಬಾರಿ ಕುಟುಂಬಗಳ ಹೋರಾಟದ ಜೊತೆಜೊತೆಗೆ, ಹೊಸದಾಗಿ ಬಂಡಾಯ (rebel) ಕಾಳಗವೂ ಸೇರಿಕೊಂಡಿರುವುದು ವಿಶೇಷವಾಗಿದೆ. ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ (k s eshwarappa) ಅವರು ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ದವೇ ಬಂಡಾಯವೆದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುತ್ತಿದ್ದಾರೆ. ಇದು ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಿದೆ. ( www.udayasaakshi.com )
ಈ ಹಿಂದಿನ ಚುನಾವಣೆಗಳಲ್ಲಿ (election) ಬಹುತೇಕ ನೇರ ಹಣಾಹಣಿಗೆ ಸಾಕ್ಷಿಯಾಗುತ್ತಿದ್ದ ಕ್ಷೇತ್ರವು, ಪ್ರಸ್ತುತ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ ಕಾರಣದಿಂದ ತ್ರಿಕೋನ ಹೋರಾಟಕ್ಕೆ ವೇದಿಕೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ.
ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರವು, ಮತ್ತೊಮ್ಮೆ ದೇಶ – ರಾಜ್ಯದ ಗಮನ ಸೆಳೆದಿದೆ. ಚುನಾವಣಾ ಕಣ ಕಾವೇರುವಂತೆ ಮಾಡಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲ ರಾಜಕೀಯ ಹೈಡ್ರಾಮಾಗಳಿಗೆ ಕ್ಷೇತ್ರ ಸಾಕ್ಷಿಯಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. ( www.udayasaakshi.com )