
ಶಿವಮೊಗ್ಗದಲ್ಲಿ ಭಾರೀ ಮಳೆ!
ಶಿವಮೊಗ್ಗ (Shivamogga), ಏ. 19: ಶಿವಮೊಗ್ಗ ನಗರದ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು, ಬಿರುಗಾಳಿಯೊಂದಿಗೆ ಧಾರಾಕಾರ ಮಳೆಯಾಯಿತು (heavy rainfall). ಇದರಿಂದ ಬೇಸಿಗೆ (summer) ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ನಗರಲ್ಲಿ ತಣ್ಣನೆಯ ವಾತಾವರಣ ನೆಲೆಸುವಂತಾಯಿತು.
ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಮಳೆ ಸುರಿಯಿತು. ಕಿವಿಗಡಚಕ್ಕುವ ಸಿಡಲು (th under):ನಾಗರೀಕರ ಎದೆ ಝಲ್ಲೇನಿಸುವಂತೆ ಮಾಡಿತು. ಭಾರೀ ಮಳೆಗೆ ಹಲವೆಡೆ ಚರಂಡಿಗಳು ಉಕ್ಕಿ ಹರಿದು ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು. ( http://8ky.2fa.mytemp.website )
ಶಿವಮೊಗ್ಗ ನಗರದ (shimoga city) ಜೊತೆಗೆ ಜಿಲ್ಲೆಯ ವಿವಿಧೆಡೆಯು ಉತ್ತಮ ಮಳೆಯಾದ ವರದಿಗಳು ಬಂದಿವೆ. ಹವಾಮಾನ ಇಲಾಖೆಯು ಮುಂದಿನ ಮರ‍್ನಾಲ್ಕು ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆಯಲ್ಲಿ ಮಾಹಿತಿ ನೀಡಿದೆ.
In#heavyrainfallinshimoga, #rainfall, #Shivamogga, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಮಳೆ, #ಶಿವಮೊಗ್ಗ, #ಶಿವಮೊಗ್ಗದಲ್ಲಿ ಭಾರೀ ಮಳೆ!, #ಶಿವಮೊಗ್ಗದಲ್ಲಿಮಳೆ, #ಶಿವಮೊಗ್ಗನ್ಯೂಸ್