
ಬೆಳ್ಳಂಬೆಳಿಗ್ಗೆ ಶಿವಮೊಗ್ಗದಲ್ಲಿ ಗುಡುಗು ಸಹಿತ ಭರ್ಜರಿ ಮಳೆ!
ಶಿವಮೊಗ್ಗ, (shivamogga), ಏ. 20: ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಪೂರ್ವ ಮುಂಗಾರು ಮಳೆ ಚುರುಕುಗೊಂಡಿದೆ. ಶುಕ್ರವಾರ ಸಂಜೆ ಧಾರಾಕಾರ ವರ್ಷಧಾರೆಗೆ (heavy rainfall) ಸಾಕ್ಷಿಯಾಗಿದ್ದ ಶಿವಮೊಗ್ಗ ನಗರ (shimoga city) ಹಾಗೂ ತಾಲೂಕಿನ ಹಲವೆಡೆ, ಶನಿವಾರ ಮುಂಜಾನೆಯೇ ಗುಡುಗು – ಸಿಡಿಲು (thunder) ಸಹಿತ ಮಳೆಯಾಯಿತು. ಇದು ನಗರವನ್ನು ಮತ್ತಷ್ಟು ಕೂಲ್ ಆಗುವಂತೆ ಮಾಡಿತ್ತು.
ಕಳೆದ ಹಲವು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕಣ್ಮರೆಯಾಗಿತ್ತು. ಬಿಸಿಲ ತಾಪ (temperature) ಹೆಚ್ಚಾಗಿತ್ತು. ಇದು ನಾಗರೀಕರನ್ನು ಹೈರಾಣಾಗುವಂತೆ ಮಾಡಿತ್ತು.
ಮತ್ತೊಂದೆಡೆ, ತಾಪಮಾನ ಹೆಚ್ಚಳದಿಂದ ಕೆರೆಕಟ್ಟೆಗಳಲ್ಲಿ ನೀರು ಬರಿದಾಗಲಾರಂಭಿಸಿತ್ತು. ಅಂತರ್ಜಲ (ground water) ಕುಸಿತದಿಂದ ಬೋರ್’ವೆಲ್ ಗಳಲ್ಲಿ ನೀರಿನ ಸಂಗ್ರಹ ಕುಸಿಯಲಾರಂಭಿಸಿತ್ತು. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಕಂಡುಬರಲಾರಂಭಿಸಿತ್ತು. ಈ ನಡುವೆ ಬೀಳುತ್ತಿರುವ ಬೇಸಿಗೆ ಮಳೆಯು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಇನ್ನಷ್ಟು ದಿನಗಳ ಕಾಲ ಮಳೆ ಮುಂದುವರಿದರೆ ಸಾಕಷ್ಟು ಅನುಕೂಲವಾಗಲಿದೆ ಎಂಬುವುದು ನಾಗರೀಕರ ಅಭಿಪ್ರಾಯವಾಗಿದೆ.
ಸಿಡಿಲು ಬಡಿದು ಓರ್ವ ಸಾವು – ಮತ್ತೋರ್ವನಿಗೆ ಗಾಯ!
ಶಿವಮೊಗ್ಗ, ಏ. 20: ಸಿಡಿಲು ಬಡಿತದಿಂದ ಯುವಕನೋರ್ವ ಮೃತಪಟ್ಟು, ಮತ್ತೋರ್ವರು ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಹರಮಘಟ್ಟ ಗ್ರಾಮದ ನಿವಾಸಿ ರಾಕೇಶ್ (30) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ರುದ್ರೇಶ್ ಎಂಬುವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (shimoga rural polic station) ಪ್ರಕರಣ ದಾಖಲಾಗಿದೆ.