
ಭದ್ರಾವತಿಯಲ್ಲಿ ಭಾರೀ ಪ್ರಮಾಣದ ಗಾಂಜಾ ವಶ : ಮಹಿಳೆಯ ಬಂಧನ!
ಭದ್ರಾವತಿ, ಏ. 23: ಗಾಂಜಾ (marijuana) ಸಾಗಾಣೆ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಮಹಿಳೆಯೋರ್ವರನ್ನು ಬಂಧಿಸಿದ ಘಟನೆ, ಭದ್ರಾವತಿ (Bhadravati) ನಗರದ ಹೊಸಮನೆ ಪೊಲೀಸ್ ಠಾಣಾ (Hosamane police station) ವ್ಯಾಪ್ತಿಯ ಸತ್ಯಸಾಯಿ ನಗರದಲ್ಲಿ ಸೋಮವಾರ ನಡೆದಿದೆ.
ಸತ್ಯಸಾಯಿ ನಗರದ ನಿವಾಸಿ ಹುಸೇನಾಬಿ (35) ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಅಪಾದಿತೆಯು ಗಾಂಜಾ ಸಾಗಾಣೆ ಮಾಡುತ್ತಿರುವ ಕುರಿತಂತೆ ಲಭ್ಯವಾದ ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
4,50,000 ರೂ. ಮೌಲ್ಯದ 7 ಕೆ.ಜಿ. 590 ಗ್ರಾಂ ಒಣ ಗಾಂಜಾವನ್ನು (ganja) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್ಪಿ ಜಿ ಕೆ ಮಿಥುನ್ ಕುಮಾರ್, ಎಎಸ್ಪಿಗಳಾದ ಅನಿಲ್ ಕುಮಾರ ಭೂಮರೆಡ್ಡಿ, ಎ.ಜಿ.ಕಾರಿಯಪ್ಪ, ಡಿವೈಎಸ್ಪಿ ನಾಗರಾಜ್, ಇನ್ಸ್‌ಪೆಕ್ಟರ್ ಶ್ರೀಶೈಲಕುಮಾರ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್ ಬಿ ಮಾನೆ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಆಪಾದಿತೆಯ ವಿರುದ್ದ ಹೊಸಮನೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ (NDP’s act) ಕಲಂ 20 (ಬಿ) ii (ಬಿ) ರೀತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಮಂಗಳವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.