
ಹಾಸನ ಪೆನ್ ಡ್ರೈವ್ ಪ್ರಕರಣ : ಆಯನೂರು ಮಂಜುನಾಥ್ ತೀವ್ರ ಆಕ್ರೋಶ!
ಶಿವಮೊಗ್ಗ (shivamogga), ಏ. 27: ಪ್ರಸ್ತುತ ಹಾಸನ ಪೆನ್ ಡ್ರೈವ್ ಪ್ರಕರಣ (hassan pen drive case) ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಮಹಿಳೆಯರ ಜೊತೆ ಯುವ ರಾಜಕಾರಣಿಯ (politician) ಅಶ್ಲೀಲ ವೀಡಿಯೋಗಳು, ಸಾಮಾಜಿಕ ಜಾಲತಾಣಗಳಲ್ಲಿ (social media) ಹರಿದಾಡುತ್ತಿವೆ. ಈ ನಡುವೆ ಸದರಿ ರಾಜಕಾರಣಿಯ ವಿರುದ್ದ ಕಾಂಗ್ರೆಸ್ ಮುಖಂಡ (congress leader), ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ (ayanur manjunath) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಕರಣದ ಕುರಿತಂತೆ ಸಮಾಜದ ದಿವ್ಯ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಶನಿವಾರ ಅವರು ಸುದ್ದಿಗೋಷ್ಠಿ (pressmeet) ಉದ್ದೇಶಿಸಿ ಮಾತನಾಡಿದರು. ‘ಮನಸ್ಸು ಖೇದಗೊಳಿಸುವ ಪ್ರಕರಣ ಹಾಸನ (hassan) ಜಿಲ್ಲೆಯಲ್ಲಿ ನಡೆದಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಮನೆ ಕೆಲಸಕ್ಕೆ ಬರುವ ಬಡ ಹೆಣ್ಣು ಮಕ್ಕಳಿಂದಿಡಿದು, ಹಲವರ ಮೇಲೆ ಅತ್ಯಾಚಾರ ಎಸಗಲಾಗಿದೆ. ಕಣ್ಣೀರಿಟ್ಟು ಗೋಗರೆದರೂ ದೌರ್ಜನ್ಯ ನಡೆಸಲಾಗಿದೆ. ನೂರಾರು ಮಹಿಳೆಯರ ಬದುಕು ಹಾಳು ಮಾಡಲಾಗಿದೆ. ಇದನ್ನು ಮಾಡಿರುವುದು ಓರ್ವ ರಾಜಕಾರಣಿ ಎಂಬುವುದು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದೆ ಎಂದು ದೂರಿದ್ದಾರೆ.
ಒಬ್ಬ ರಾಜಕಾರಣಿ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕಾಗಿ, ಸಮಾಜವು ಎಲ್ಲೋ ಒಂದು ಕಡೆ ಮೌನವಹಿಸಿದೆಯೋನೋ ಎಂಬ ಭಾವನೆ ಕಂಡುಬರುತ್ತಿದೆ. ನೇಹಾ ಹಿರೇಮಠ (neha hiermat) ಪ್ರಕರಣದಲ್ಲಿ ರಾಜಕಾರಣಿಗಳು ಉದ್ವೇಗದಿಂದ ಹೋರಾಟ ನಡೆಸಿದ್ದೆವು. ಇದರ ಅವಶ್ಯಕತೆಯಿತ್ತು. ಈ ಬಗ್ಗೆ ತಾವು ಟೀಕೆ ಮಾಡುವುದಿಲ್ಲ. ಆದರೆ ಹಾಸನ ಪ್ರಕರಣದಲ್ಲಿ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆ. ಅಸಹಾಯಕ ಬಡ ಹೆಣ್ಣು ಮಕ್ಕಳ ಮೇಲೆಯೂ ಅತ್ಯಾಚಾರ (sexual harassment) ಎಸಗಲಾಗಿದೆ. ಆದರೆ ಈ ಬಗ್ಗೆ ರಾಜಕಾರಣಿಗಳು ಏಕೆ ಮಾತನಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಬಲವಂತವಾಗಿಯೋ, ಸ್ವಇಚ್ಛೆಯಿಂದಲೋ ಅಥವಾ ರಾಜಕೀಯ ಆಮಿಷದಿಂದಲೋ ಮಹಿಳಾ ಪೊಲೀಸ್ (lady police) ಅಧಿಕಾರಿಯೋರ್ವರು ಕೂಡ ರಾಜಕಾರಣಿಯ ದೈಹಿಕ ವಾಂಛೆಗೆ ಒಳಗಾಗಿದ್ದಾರೆ. ಇದನ್ನು ಗಮನಿಸಿದರೆ ನಾವು ಕರ್ನಾಟಕದಲ್ಲಿದ್ದೆವೆಯೋ ಅಥವಾ ಎಲ್ಲಿದ್ದೆವೆಯೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ಕುರಿತಂತೆ ಕೆ.ಎಸ್.ಈಶ್ವರಪ್ಪ (k s eshwarappa), ಬಿ.ವೈ.ರಾಘವೇಂದ್ರ (b y raghavendra), ಹೆಚ್.ಡಿ.ಕುಮಾರಸ್ವಾಮಿ (h d kumaraswamy) ಅವರೆಲ್ಲ ಏಕೆ ಮಾತನಾಡುತ್ತಿಲ್ಲ. ಮಹಿಳಾ ಸಂಘಟನೆಗಳೇಕೆ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಇದೇ ವೇಳೆ ಆಯನೂರು ಮಂಜುನಾಥ್ (ayanur manjunath) ತರಾಟೆಗೆ ತೆಗೆದುಕೊಂಡಿದ್ದಾರೆ.
One thought on “ಹಾಸನ ಪೆನ್ ಡ್ರೈವ್ ಪ್ರಕರಣ : ಆಯನೂರು ಮಂಜುನಾಥ್ ತೀವ್ರ ಆಕ್ರೋಶ!”
Comments are closed.
ಕೋರ್ಟ್ ನಿಂದ ತಡೆಯಾಜ್ಞೆ ತಂದಿದಾರೆ ಅದಕ್ಕೆ ಇರಬಹುದು ಅಲ್ಲದೇ ಕೋರ್ಟ್ ಮಹಿಳೆಯರು ಬಗ್ಗೆ ಗೌಪ್ಯತೆಯಿಂದ ಈ ವ್ಯಕ್ತಿ ಬಗ್ಗೆ ತನಿಖೆಗೆ ಆದೇಶ ಕೊಡಬೇಕಿತ್ತು