Hassan's pen drive case: Let the culprits be punished - HD Kumaraswamy ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ : ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ – ಹೆಚ್.ಡಿ.ಕುಮಾರಸ್ವಾಮಿ

ಹಾಸನ ಪ್ರಕರಣ : ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ – ಹೆಚ್.ಡಿ.ಕುಮಾರಸ್ವಾಮಿ

ಶಿವಮೊಗ್ಗ (shivamogga), ಏ. 29: ಹಾಸನದ (hassan) ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ (prajwal revanna sex scandal) ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (h d kumaraswamy) ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿ, ‘ಸಮಾಜದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು. ನಿಷ್ಪಕ್ಷಪಾತ ತನಿಖೆಯಾಗಲಿ. ತಮ್ಮ ಕುಟುಂಬ ಮಹಿಳೆಯರ ಬಗ್ಗೆ ಮೊದಲಿನಿಂದಲೂ ಗೌರವಯುತವಾಗಿ ನಡೆದುಕೊಂಡು ಬಂದಿದೆ’ ಎಂದು ತಿಳಿಸಿದ್ದಾರೆ. ( www.udayasaakshi.com )

ಸುದ್ದಿಗೋಷ್ಠಿಯಲ್ಲಿ (pressmeet) ಸೋಮವಾರ ಅವರು ಮಾತನಾಡಿದರು. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಈ ನಾಡಿನ ಕಾನೂನಿಗೆ ಪ್ರತಿಯೋರ್ವರು ತಲೆಬಾಗಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಸರ್ಕಾರ ಎಸ್ಐಟಿ (SIT) ರಚಿಸಿದೆ. ಎಫ್ಐಆರ್ (FIR) ಕೂಡ ಆಗಿದೆ. ತನಿಖೆಯಿಂದ ಸತ್ಯಾಂಶ ಹೊರಬರಲಿ. ಈ ವಿಷಯದಲ್ಲಿ ತಾವು ಯಾರ ಮೇಲೂ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಸದರಿ ವಿಷಯ ತಮಗೆ ಗೊತ್ತಿರಲಿಲ್ಲ. ಮೊದಲೇ ಗಮನಕ್ಕೆ ಬಂದಿದ್ದರೆ ಮುಜುಗರ ತಪ್ಪಿಸಬಹುದಾಗಿತ್ತು. ಪ್ರಜ್ವಲ್ ರೇವಣ್ಣ (prajwal revanna) ಎಲ್ಲಿ ಹೋಗುತ್ತಾರೆ ಎಂದು ಕಾದು ಕುಳಿತುಕೊಳ್ಳಲಾಗುತ್ತದೆಯೇ? ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ( www.udayasaakshi.com )

ಪಕ್ಷದಿಂದಲೂ (jds party) ಕ್ರಮಕೈಗೊಳ್ಳಲಾಗುವುದು. ಎಸ್ಐಟಿ ವರದಿ ಬರಲಿ. ಸತ್ಯಾಂಶ ಏನೆಂಬುವುದು ಗೊತ್ತಾಗುತ್ತದೆ. ಸದ್ಯ ಈ ಪ್ರಕರಣದ ಬಗ್ಗೆ ತಮ್ಮ ನಿಲುವು ಏನೆಂಬುವುದನ್ನು ಸ್ಪಷ್ಟಪಡಿಸಿದ್ದೆನೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಚುನಾವಣೆ ಪೂರ್ವದಲ್ಲಿ ಪೆನ್ ಡ್ರೈವ್ (hassan pen drive case) ಪ್ರಕರಣ ಚರ್ಚೆಗೆ ಬಂದಿದ್ದೇಕೆ. ಈ ಪ್ರಕರಣ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ (h d kumaraswamy) ತಿಳಿಸಿದ್ದಾರೆ. ( www.udayasaakshi.com )

*** ‘ವ್ಯಕ್ತಿ (ಪ್ರಜ್ವಲ್ ರೇವಣ್ಣ) ಬಗ್ಗೆ ಚರ್ಚೆ ಮಾಡಿಕೊಳ್ಳಿ. ಕುಟುಂಬದ ಪ್ರಶ್ನೆಯಲ್ಲ. ಕಾಂಗ್ರೆಸ್ ಮಹಾನ್ ನಾಯಕರ ಬಗ್ಗೆ ಎಲ್ಲ ಗೊತ್ತಿದೆ. ಹೆಚ್.ಡಿ.ದೇವೇಗೌಡ (h d devegowda), ಕುಮಾರಸ್ವಾಮಿಯವರ (h d kumaraswamy) ಹೆಸರು ಏಕೆ ತರುತ್ತಿರಿ? ಈ ವಿಷಯದಲ್ಲಿ ತಮ್ಮೊಬ್ಬರಿಗೆ ಅಲ್ಲ. ಇಡೀ ಸಮಾಜಕ್ಕೆ ಮುಜುಗರವಾಗುತ್ತದೆ. ಎಫ್ಐಆರ್ ಆಗಿದೆ. ತನಿಖಾ ವರದಿ (enquiry report) ಬರಲಿ’ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ( www.udayasaakshi.com )

Hassan pen drive case : Ayanur Manjunath extreme outrage! ಹಾಸನ ಪೆನ್ ಡ್ರೈವ್ ಪ್ರಕರಣ : ಆಯನೂರು ಮಂಜುನಾಥ್ ತೀವ್ರ ಆಕ್ರೋಶ! Previous post ಹಾಸನ ಪೆನ್ ಡ್ರೈವ್ ಪ್ರಕರಣ : ಆಯನೂರು ಮಂಜುನಾಥ್ ತೀವ್ರ ಆಕ್ರೋಶ!
Chennai: The child fell from the hands of the mother - escaped from the jaws of death! ಚೆನ್ನೈ : ತಾಯಿ ಕೈಯಿಂದ ಕೆಳಕ್ಕೆ ಬಿದ್ದ ಮಗು - ಸಾವಿನ ದವಡೆಯಿಂದ ಪಾರು! Next post ಚೆನ್ನೈ : ತಾಯಿ ಕೈಯಿಂದ ಕೆಳಕ್ಕೆ ಬಿದ್ದ ಮಗು – ಸಾವಿನ ದವಡೆಯಿಂದ ಪಾರು!