Chennai: The child fell from the hands of the mother - escaped from the jaws of death! ಚೆನ್ನೈ : ತಾಯಿ ಕೈಯಿಂದ ಕೆಳಕ್ಕೆ ಬಿದ್ದ ಮಗು - ಸಾವಿನ ದವಡೆಯಿಂದ ಪಾರು!

ಚೆನ್ನೈ : ತಾಯಿ ಕೈಯಿಂದ ಕೆಳಕ್ಕೆ ಬಿದ್ದ ಮಗು – ಸಾವಿನ ದವಡೆಯಿಂದ ಪಾರು!

ಚೆನ್ನೈ (ತಮಿಳುನಾಡು), ಏ. 30: ತಮಿಳುನಾಡು (tamilnadu) ರಾಜ್ಯದ ರಾಜಧಾನಿ ಚೆನ್ನೈನ ಅಪಾರ್ಟ್ ಮೆಂಟ್ ವೊಂದರ (apartment) ಟಿನ್ ರೂಪ್ ನಲ್ಲಿ ಸಿಲುಕಿ ಬಿದ್ದಿದ್ದ 8 ತಿಂಗಳ ಮಗುವೊಂದನ್ನು (baby) ಸ್ಥಳೀಯ ನಿವಾಸಿಗಳು ರಕ್ಷಿಸಿದ ಸಾಹಸದ ವೀಡಿಯೋವೊಂದು (video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿವಾಸಿಗಳ ಸಕಾಲಿಕ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ( www.udayasaakshi.com )

ಚೆನ್ನೈನ (chennai) ಅವಡಿಯಲ್ಲಿರುವ ವಿಜಿನ್ ಸ್ಟಾಫರ್ಡ್ ಅಪಾರ್ಟ್’ಮೆಂಟ್ ನಲ್ಲಿ ಏ.28 ರ ಭಾನುವಾರ ಘಟನೆ ನಡೆದಿದೆ. ನಾಲ್ಕನೆ ಮಹಡಿಯ ಬಾಲ್ಕನಿಯಲ್ಲಿ ತಾಯಿ (mother) ಮಗುವಿನೊಂದಿಗೆ ಆಟವಾಡುತ್ತಿದ್ದ ವೇಳೆ, ಆಕಸ್ಮಿಕವಾಗಿ ಮಗು ಕೈನಿಂದ ಜಾರಿ ಕೆಳಕ್ಕೆ ಬಿದ್ದಿತ್ತು. ಅದೃಷ್ಟವಶಾತ್ ಒಂದನೇ ಮಹಡಿ ಮೇಲ್ಭಾಗದ ರೂಫ್ ಟಾಪ್ ನ (roof top) ಅಂಚಿನ ಮೇಲೆ ಮಗು ಅಂಗಾತ  ಬಿದ್ದಿದೆ. ( www.udayasaakshi.com )

ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ನೆರವಿಗೆ ದೌಡಾಯಿಸಿದ್ದಾರೆ. ಕೆಲವರು ಕೆಳಕ್ಕೆ ಬೆಡ್ ಶೀಟ್ ಹಿಡಿದು ನಿಂತಿದ್ದರು. ಮತ್ತೆ ಕೆಲವರು ಒಂದನೇ ಮಹಡಿಯ ಕಿಟಕಿಯಿಂದ ಹೊರಬಂದು ಮಗುವಿನ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ವ್ಯಕ್ತಿಯೋರ್ವರು ಗಾಜಿನ ರೈಲಿಂಗ್ಸ್ ಮೇಲೆ ನಿಂತು ಕೈ ಮೂಲಕ ಸುರಕ್ಷಿತವಾಗಿ ಮಗುವನ್ನು ರಕ್ಷಿಸಿದ್ದಾರೆ.

ಈ ದೃಶ್ಯವನ್ನು ಅಪಾರ್ಟ್ ಮೆಂಟ್ ನಲ್ಲಿನ ನಿವಾಸಿಯೋರ್ವರು ತಮ್ಮ ಮೊಬೈಲ್ ಪೋನ್ (mobile phone) ಮೂಲಕ ಸೆರೆ ಹಿಡಿದಿದ್ದರು. ಸದ್ಯ ದೃಶ್ಯಾವಳಿ ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದೆ. ( www.udayasaakshi.com )

Hassan's pen drive case: Let the culprits be punished - HD Kumaraswamy ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ : ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ – ಹೆಚ್.ಡಿ.ಕುಮಾರಸ್ವಾಮಿ Previous post ಹಾಸನ ಪ್ರಕರಣ : ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ – ಹೆಚ್.ಡಿ.ಕುಮಾರಸ್ವಾಮಿ
Kumar Bangarappa criticizes sister brother and actor shivarajakumar ಮಧು ಬಂಗಾರಪ್ಪ, ಗೀತಾ, ನಟ ಶಿವರಾಜಕುಮಾರ್ ವಿರುದ್ದ ಕುಮಾರ್ ಬಂಗಾರಪ್ಪ ಟೀಕಾಪ್ರಹಾರ! Next post ಸಹೋದರಿ, ಸಹೋದರ, ಭಾವನ ವಿರುದ್ದ ಕುಮಾರ್ ಬಂಗಾರಪ್ಪ ಟೀಕಾಪ್ರಹಾರ!