
ನಿವೃತ್ತ ಯೋಧನಿಗೆ ಗ್ರಾಮಸ್ಥರ ಭರ್ಜರಿ ಸ್ವಾಗತ : ತೆರೆದ ವಾಹನದಲ್ಲಿ ಮೆರವಣಿಗೆ
ಶಿವಮೊಗ್ಗ (shivamogga), ಮೇ 3: ಸೇನೆಯಿಂದ (indian army) ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಹಿಂದಿರುಗಿದ ಯೋಧನಿಗೆ (soldier), ಶುಕ್ರವಾರ ಬೀರನಕೆರೆ ಗ್ರಾಮಸ್ಥರು (beeranakere villagers) ಶಿವಮೊಗ್ಗ ನಗರದಲ್ಲಿ ಭರ್ಜರಿ ಸ್ವಾಗತ ನೀಡಿದರು. ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆದೊಯ್ದರು. ( www.udayasaakshi.com )
ಶಿವಮೊಗ್ಗ ತಾಲೂಕು (shimoga taluk) ಬೀರನಕೆರೆ ಗ್ರಾಮದ ನಿವಾಸಿ ಆರ್.ಸಿ.ಕುಮಾರನಾಯ್ಕ್ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ ಗೌರವಕ್ಕೆ ಪಾತ್ರರಾದ ಯೋಧರಾಗಿದ್ದಾರೆ. ಬೆಂಗಳೂರಿನಿಂದ (bengaluru) ಬಸ್ ನಲ್ಲಿ ಆಗಮಿಸಿದ ಶಿವಮೊಗ್ಗಕ್ಕೆ ಆಗಮಿಸಿದ ಅವರನ್ನು ಮೀನಾಕ್ಷಿ ಭವನ್ ಬಳಿ ಗ್ರಾಮಸ್ಥರು ಹೂಮಾಲೆ ಹಾಕಿ ಸ್ವಾಗತಿಸಿದರು.
‘2002 ರಿಂದ ಆರ್.ಸಿ.ಕುಮಾರನಾಯ್ಕ್ ಅವರು ಭೂ ಸೇನೆಯಲ್ಲಿ (land army) ಕಾರ್ಯನಿರ್ವಹಣೆ ಮಾಡುತ್ತಿದ್ದರು. ಜಮ್ಮಕಾಶ್ಮೀರದ (jammu kashimr) ಪಾಕ್ (pakistan) ಗಡಿ ಸೇರಿದಂತೆ ತಮಿಳುನಾಡು (tamilnadu), ಗುಜರಾತ್ (gujarat), ಉತ್ತರಖಾಂಡ್ (uttarakhand), ಹಿಮಾಚಲ ಪ್ರದೇಶಗಳಲ್ಲಿ (himachal pradesh), ಅರುಣಾಚಲ ಪ್ರದೇಶಗಳಲ್ಲಿ (arunachal pradesh) ಕಾರ್ಯನಿರ್ವಹಣೆ ಮಾಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ದೇವನಹಳ್ಳಿ (bengaluru devanahalli) ಟ್ರೈನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಸೇವೆಯಿಂದ ಅವರು ನಿವೃತ್ತಿಗೊಂಡಿದ್ದರು. ಸುಮಾರು 22 ವರ್ಷಗಳ ಕಾಲ ಸೇನೆಯಲ್ಲಿ ಕಾರ್ಯನಿರ್ವಹಿಸಿ ದೇಶ ರಕ್ಷಣೆಯ ಮಹತ್ತರ ಕಾರ್ಯ ನಿರ್ವಹಿಸಿದ್ದಾರೆ.
ಸೇವೆಯಿಂದ ನಿವೃತ್ತಿಗೊಂಡು ಗ್ರಾಮಕ್ಕೆ ಹಿಂದಿರುಗುತ್ತಿರುವ ಆರ್.ಸಿ.ಕುಮಾರನಾಯ್ಕ್ (r.c.kumarnaik) ಅವರಿಗೆ ಗ್ರಾಮಸ್ಥರೆಲ್ಲ ಸೇರಿ ಅದ್ದೂರಿ ಸ್ವಾಗತ ನೀಡಿದ್ದೆವೆ. ಶಿವಮೊಗ್ಗ ನಗರದಿಂದ ಗ್ರಾಮದವರೆಗೆ ಮೆರವಣಿಗೆಯಲ್ಲಿ ಕರೆದೊಯ್ದು ಅವರ ದೇಶ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೆವೆ’ ಎಂದು ಕಿಟ್ಟದಾಳ್ ಬಸವರಾಜ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ( www.udayasaakshi.com )
ಮೆರವಣಿಗೆಯಲ್ಲಿ ಗ್ರಾಮದ ಮುಖಂಡರಾದ ಜಿ.ಪಿ.ಬಸವರಾಜ್ ಗೌಡ, ಅಮರ್, ಅನಿಲ್ ನಾಯ್ಕ್, ಕುಮಾರನಾಯ್ಕ್, ಹೀರಾನಾಯ್ಕ್, ಗೋವಿಂದ್ ರಾಜ್, ಕುಬೇಂದ್ರನಾಯ್ಕ್, ಗಣೇಶ್ ನಾಯ್ಕ್, ಗೋಪಿನಾಯ್ಕ್ ಸೇರಿದಂತೆ ಮೊದಲಾದವರಿದ್ದರು.