
ಶಿವಮೊಗ್ಗ : ರೌಡಿ ಕಾಲಿಗೆ ಗುಂಡೇಟು!
ಶಿವಮೊಗ್ಗ (shivamogga), ಮೇ 13: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲೆತ್ನಿಸಿದ, ಕೊಲೆ ಪ್ರಕರಣದ ಆರೋಪಿಯೋರ್ವನ ಕಾಲಿಗೆ ಪೊಲೀಸರು ಗುಂಡು (police firing) ಹಾರಿಸಿ ಬಂಧಿಸಿದ ಘಟನೆ, ಸೋಮವಾರ ಬೆಳಿಗ್ಗೆ ಶಿವಮೊಗ್ಗದ ಹೊರವಲಯ ಗ್ರಾಮಾಂತರ ಪೊಲೀಸ್ ಠಾಣೆ (rural police station) ವ್ಯಾಪ್ತಿಯ ಬೀರನಕೆರೆ ಗ್ರಾಮದ ಬಳಿ ನಡೆದಿದೆ. ( www.udayasaakshi.com )
ಶೋಯೆಬ್ ಅಲಿಯಾಸ್ ಅಂಡಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯು ಬೀರನಕೆರೆ ಗ್ರಾಮದಲ್ಲಿರುವ ಮಾಹಿತಿ ಮೇರೆಗೆ, ಸಬ್ ಇನ್ಸ್’ಪೆಕ್ಟರ್ (psi) ಕುಮಾರ್ ಹಾಗೂ ಹೆಡ್ ಕಾನ್ಸ್’ಟೇಬಲ್ (HC) ಅಣ್ಣಪ್ಪ ಅವರು ಸ್ಥಳಕ್ಕೆ ತೆರಳಿ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಆರೋಪಿಯು ಆಯುಧವೊಂದರಿಂದ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದ. ತಕ್ಷಣವೇ ಪಿಎಸ್ಐ ಕುಮಾರ್ ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ( www.udayasaakshi.com )
ಯಾರೀತ?: ಇತ್ತೀಚೆಗೆ ಕೋಟೆ ಪೊಲೀಸ್ ಠಾಣೆ (kote police station) ವ್ಯಾಪ್ತಿಯ ಲಷ್ಕರ್ ಮೊಹಲ್ಲಾದಲ್ಲಿ, ಆದಿಲ್ ಹಾಗೂ ಯಾಸಿನ್ ಖುರೇಷಿ ರೌಡಿ ತಂಡಗಳ (rowdies team) ನಡುವೆ ನಡೆದಿದ್ದ ಗ್ಯಾಂಗ್ ವಾರ್ ನಲ್ಲಿ ಮೂವರು ಕೊಲೆಗೀಡಾಗಿದ್ದರು (triple murder). ಆರೋಪಿ ಶೋಯೆಬ್ ಅಲಿಯಾಸ್ ಅಂಡಾನು ರೌಡಿ ಆದಿಲ್ ಸಹಚರನಾಗಿದ್ದ. ಘಟನೆಯ ನಂತರ ಈತ ತಲೆಮರೆಸಿಕೊಂಡಿದ್ದ.
‘ಆರೋಪಿಯ ವಿರುದ್ದ ಐಪಿಸಿ ಕಲಂ 302 ಸೆಕ್ಷನ್ ನ 2 ಕೇಸ್ ಗಳು ಸೇರಿದಂತೆ 5 ಪ್ರಕರಣಗಳಿದ್ದವು. ಕಳೆದ ಎರಡು ತಿಂಗಳ ಹಿಂದೆಯೇ ರೌಡಿಸಂ ಚಟುವಟಿಕೆಯಲ್ಲಿ ತೊಡಗದಂತೆ ಪೊಲೀಸರು ಆರೋಪಿಗೆ ಎಚ್ಚರಿಕೆ ಕೂಡ ನೀಡಿದ್ದರು’ ಎಂದು ಜಿಲ್ಲಾ ರಕ್ಷಣಾಧಿಕಾರಿ (sp) ಜಿ.ಕೆ.ಮಿಥುನ್ ಕುಮಾರ್ (mithun kumar ips) ಅವರು ತಿಳಿಸಿದ್ದಾರೆ.