Illegal usury business in Shimoga : Police raid on houses – case against seven people! ಶಿವಮೊಗ್ಗದಲ್ಲಿ ಕಾನೂನುಬಾಹಿರ ಬಡ್ಡಿ ದಂಧೆ : ಮನೆಗಳ ಮೇಲೆ ಪೊಲೀಸರ ದಾಳಿ – ಏಳು ಜನರ ವಿರುದ್ದ ಕೇಸ್!

ಶಿವಮೊಗ್ಗದಲ್ಲಿ ಕಾನೂನುಬಾಹಿರ ಬಡ್ಡಿ ದಂಧೆ : ಮನೆಗಳ ಮೇಲೆ ಪೊಲೀಸರ ದಾಳಿ – ಏಳು ಜನರ ವಿರುದ್ದ ಕೇಸ್!

ಶಿವಮೊಗ್ಗ (shivamogga), ಮೇ 18: ನಿಯಮಕ್ಕೆ ವಿರುದ್ದವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಮನೆಗಳ ಮೇಲೆ, ಶಿವಮೊಗ್ಗ ಪೊಲೀಸರು (shimoga police) ದಿಢೀರ ದಾಳಿ (raid) ನಡೆಸಿ ಕೇಸ್ ದಾಖಲಿಸಲಾರಂಭಿಸಿದ್ದಾರೆ. ಇದು ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುವವರ ನಿದ್ದೆಗೆಡುವಂತೆ ಮಾಡಿದೆ!

ಕಳೆದೆರೆಡು ದಿನಗಳ ಅಂತರದಲ್ಲಿ ಶಿವಮೊಗ್ಗದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಏಳು ಜನರ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ನಗದು (cash), ಖಾಲಿ ಚೆಕ್ ಗಳು (blank check), ಪ್ರಾಮಿಸರಿ ನೋಟ್, ನಿವೇಶನ ಸೇರಿದಂತೆ ವಾಹನ ದಾಖಲಾತಿ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತರ ವಿರುದ್ದ ‘ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಯಂತ್ರಣ ಕಾಯ್ದೆ’ಯಡಿ (the karnataka prevention of charging exorbitant interest act) ಕೇಸ್ ದಾಖಲಿಸಿದ್ದಾರೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಪ್ರಕರಣಗಳ ವಿವರ : ಗ್ರಾಮಾಂತರ ಪೊಲೀಸ್ ಠಾಣೆ (rural police station) ವ್ಯಾಪ್ತಿಯ ಗೋಂಧಿಚಟ್ನಳ್ಳಿ ಗ್ರಾಮದ ನಿವಾಸಿ ರಂಗನಾಥ್ ಎಂಬುವರು ಎರಡು ವರ್ಷಗಳ ಹಿಂದೆ ಮನೆ ಕಟ್ಟಲು ಸ್ಥಳೀಯರಾದ ಅನಿಲ, ರಾಜಣ್ಣ, ಪ್ರಭಣ್ಣ,ವಿಜಯೇಂದ್ರಣ್ಣ, ಪ್ರದೀಪ ಮತ್ತು ಹಾಲೇಶಪ್ಪ ಎಂಬುವರಿಂದ ಶೇ. 3 ರ ಬಡ್ಡಿಯಂತೆ ಸಾಲ ಮಾಡಿದ್ದರು.

ಸಕಾಲದಲ್ಲಿ ಬಡ್ಡಿ ಹಾಗೂ ಸಾಲ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಹಣ ಕೊಟ್ಟವರು ಮನೆಯ ಬಳಿ ಆಗಮಿಸಿ ಗಲಾಟೆ ಮಾಡುತ್ತಿದ್ದಾರೆ ಎಂದು ರಂಗನಾಥ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಗಳ ಮನೆ ಮೇಲೆ ದಿಢೀರ್ ದಾಳಿ (raid) ನಡೆಸಿದ್ದರು. ಈ ವೇಳೆ 217 ಸಹಿ ಇರುವ ಖಾಲಿ ಚೆಕ್ ಗಳು, ಪ್ರಾಮಿಸರಿ ನೋಟ್ ಗಳು, ನಿವೇಶನ ಮತ್ತು ವಾಹನ ದಾಖಲಾತಿಗಳ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ (jayanagara police station) ವೆಂಕಟೇಶ ನಗರದ ಮಹಿಳೆಯೋರ್ವರು ವೆಂಕಟೇಶ್ ಎಂಬುವರಿಂದ ಶೇ. 5 ರ ಬಡ್ಡಿ ದರದಲ್ಲಿ ಹಣ ಪಡೆದಿದ್ದರು. ಈ ವೇಳೆ ಬ್ಯಾಂಕ್ ನ ಖಾಲಿ ಚೆಕ್ ಹಾಗೂ ಮನೆಯ ದಾಖಲಾತಿ ಪತ್ರಗಳನ್ನು ಕೊಟ್ಟಿದ್ದರು.

ಸಾಲ ಹಾಗೂ ಬಡ್ಡಿ ಹಣವನ್ನು ಸಕಾಲದಲ್ಲಿ ಕೊಟ್ಟಿರಲಿಲ್ಲ. ಆರೋಪಿಯು ಮಹಿಳೆಗೆ ಬೆದರಿಕೆ ಹಾಕಿ ಕೋರ್ಟ್ ನಲ್ಲಿ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದ. ಈ ಸಂಬಂಧ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವೆಂಕಟೇಶ ನಗರದಲ್ಲಿರುವ ಆರೋಪಿ ಮನೆ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ 29,750 ನಗದು, 13 ಖಾಲಿ ಚೆಕ್, ಸಹಿ ಮಾಡಿರುವ 100 ಮುಖಬೆಲೆಯ ಇ-ಸ್ಟ್ಯಾಂಪ್ (e-stamp), ನಿವೇಶನ ದಾಖಲಾತಿಗಳು ಹಾಗೂ ಬಡ್ಡಿ ವ್ಯವಹಾರದ ಬಗ್ಗೆ ನಮೂದು ಮಾಡಿರುವ ಏಳು ನೋಟ್ ಬುಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ : ಎಸ್ಪಿ (sp) ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿಗಳಾದ (asp) ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ, ಡಿವೈಎಸ್ಪಿ (dysp) ಸುರೇಶ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ (pi) ಸತ್ಯನಾರಾಯಣ , ಜಯನಗರ ಠಾಣೆ ಇನ್ಸ್’ಪೆಕ್ಟರ್ (pi) ಸಿದ್ದೇಗೌಡ ಮತ್ತವರ ಸಿಬ್ಬಂದಿಗಳು ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

'There is no internal strife no external strife' : CM Siddaramaiah's response to opposition criticism ‘ಒಳಜಗಳವೂ ಇಲ್ಲ ಹೊರ ಜಗಳವೂ ಇಲ್ಲ’ : ವಿಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ Previous post ‘ಒಳ ಜಗಳವೂ ಇಲ್ಲ, ಹೊರ ಜಗಳವೂ ಇಲ್ಲ’ : ಸಿಎಂ ಸಿದ್ದರಾಮಯ್ಯ
Heavy rain with thunder in Shimoga! ಶಿವಮೊಗ್ಗದಲ್ಲಿ ಗುಡುಗು ಸಹಿತ ಭಾರೀ ಮಳೆ! Next post ಶಿವಮೊಗ್ಗದಲ್ಲಿ ಗುಡುಗು ಸಹಿತ ಭಾರೀ ಮಳೆ!