
ಶಿವಮೊಗ್ಗ – ಯಶವಂತಪುರ ರೈಲಿನಲ್ಲಿ ತೆರಳಿದ್ದ ಯುವತಿ ನಿಗೂಢ ಕಣ್ಮರೆ!
ಶಿವಮೊಗ್ಗ (shivamogga), ಮೇ 20 : ಶಿವಮೊಗ್ಗ – ಯಶವಂತಪುರ ಎಕ್ಸ್’ಪ್ರೆಸ್ ರೈಲಿನಲ್ಲಿ (bangalore – shimoga express train) ಪ್ರಯಾಣಿಸಿದ್ದ ಯುವತಿಯೋರ್ವಳು, ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ (shimoga railway police station) ಪ್ರಕರಣ ದಾಖಲಾಗಿದೆ.
ದಾವಣಗೆರೆ (davanagere) ಜಿಲ್ಲೆ ನ್ಯಾಮತಿ (nyamathi) ತಾಲೂಕಿನ ಸುರಹೊನ್ನೆ ಗ್ರಾಮ ಶಾಂತಿನಗರದ ನಿವಾಸಿ ಐಶ್ವರ್ಯ (19) ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ (bengaluru) ಹೋಂ ನರ್ಸಿಂಗ್ (home nursing) ಕೆಲಸ ಮಾಡುತ್ತಿದ್ದರು. ( www.udayasaakshi.com )
ಮೇ 15 ರಂದು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ (shimoga railway station) ಯಶವಂತಪುರಕ್ಕೆ ಹೋಗುವ ಎಕ್ಸ್’ಪ್ರೆಸ್ ರೈಲಿನಲ್ಲಿ (train) ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಸ್ಥಳಕ್ಕೆ ತೆರಳದೆ ಕಣ್ಮರೆಯಾಗಿದ್ದಾರೆ.
ಸದರಿ ಯುವತಿಯ ಕುರಿತಂತೆ ಯಾವುದೇ ಮಾಹಿತಿ, ಸುಳಿವು ಲಭ್ಯವಾಗಿಲ್ಲ. ಮೊಬೈಲ್ ಪೋನ್ (mobile phone) ಕೂಡ ಸ್ವಿಚ್ ಆಫ್ ಆಗಿದ್ದು, ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ( www.udayasaakshi.com )
ಚಹರೆ : ಯುವತಿಯು ಸುಮಾರು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನದಂದು ಪೇಂಟ್‍ಗ್ರೀನ್ ಕಲರ್ ಟಾಪ್, ಕ್ರೀಮ್ ಕಲರ್ ಪ್ಯಾಂಟ್ ಹಾಗೂ ಕ್ರೀಮ್ ಕಲರ್ ವೇಲ್ ಧರಿಸಿರುತ್ತಾರೆ.
ಸದರಿ ಯುವತಿಯ ಸುಳಿವು ಕಂಡುಬಂದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ, ದೂ.ಸಂ.: 08182-222974 / 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸ್ ಸಬ್ ಇನ್ಸ್’ಪೆಕ್ಟರ್ (police sub inspector) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ( www.udayasaakshi.com )