Shimoga: Life weed for lakes dried up by summer rain! ಶಿವಮೊಗ್ಗ : ಬೇಸಿಗೆ ಮಳೆಯಿಂದ ಒಣಗಿದ ಕೆರೆಗಳಿಗೆ ಜೀವ ಕಳೆ!

ಶಿವಮೊಗ್ಗ : ಒಣಗಿದ ಕೆರೆಗಳಿಗೆ ಜೀವ ಕಳೆ!

ಶಿವಮೊಗ್ಗ (shivamogga), ಮೇ 23: ಕಳೆದ ಮಳೆಗಾಲದ ವೇಳೆ ಮುಂಗಾರು ಮಳೆ (monsoon rain) ಕೊರತೆ ಹಾಗೂ ಪ್ರಸ್ತುತ ಬೇಸಿಗೆ ವೇಳೆ ಕಂಡುಂಬದ ತೀವ್ರ ಸ್ವರೂಪದ ಬಿಸಿಲಿನ (temprature) ಕಾರಣದಿಂದ, ಶಿವಮೊಗ್ಗ ತಾಲೂಕಿನ (shimoga taluk) ಹಲವು ಗ್ರಾಮಗಳ ಕೆರೆಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿದ್ದವು. ಹಲವೆಡೆ ಕೆರೆಕಟ್ಟೆಗಳಲ್ಲಿ (lakes) ಹನಿ ನೀರಿಲ್ಲದೆ ಒಣಗಿ ಹೋಗಿದ್ದವು. ಬಿರುಕು ಬಿಟ್ಟಿದ್ದವು. ಬರಗಾಲಕ್ಕೆ (drought) ಮೂಕ ಸಾಕ್ಷಿಯಾಗಿ ನಿಂತಿದ್ದವು.

ಕೆರೆಕಟ್ಟೆಗಳು ಒಣಗಿ ಹೋಗಿದ್ದರಿಂದ, ಜಾನುವಾರುಗಳು (cattle) ಸೇರಿದಂತೆ ಪ್ರಾಣಿ-ಪಕ್ಷಿ (animals – birds) ಸಂಕುಲದ ಸ್ಥಿತಿ ಅಯೋಮಯವಾಗಿತ್ತು. ಕುಡಿಯುವ ನೀರಿಗೆ (drinking water) ಪರದಾಡುವಂತಾಗಿತ್ತು. ನೀರು ಹುಡುಕಿಕೊಂಡು ಅಲೆದಾಡುವಂತಹ ದಯನೀಯ ಸ್ಥಿತಿ ಕಂಡುಬಂದಿತ್ತು.

ಕೆರೆಕಟ್ಟೆಗಳು ಬರಿದಾಗಿದ್ದರಿಂದ, ಬೋರ್’ವೆಲ್ – ಬಾವಿಗಳಲ್ಲಿಯೂ ಅಂತರ್ಜಲ (ground water) ಕುಸಿತವಾಗಿತ್ತು. ನಾಗರೀಕರು ಕುಡಿಯುವ ನೀರಿಗೆ ಪರಿತಪಿಸುವಂತಾಗಿತ್ತು. ಹಲವು ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು.

ಆದರೆ ಕಳೆದ ಕೆಲ ದಿನಗಳ ಹಿಂದೆ ಬಿದ್ದ ಮುಂಗಾರು ಪೂರ್ವ ಮಳೆಯು (pre monsoon rain), ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಜಲಮೂಲಗಳ (water source) ಚಿತ್ರಣವನ್ನೇ ಬದಲಾಯಿಸಿದೆ. ಮಳೆಯ (rain) ಕೃಪೆಯಿಂದ ಬರಗಾಲದ ಕರಿಛಾಯೆಯಿಂದ ಕೊಂಚ ಹೊರಬರುವಂತೆ ಮಾಡಿದೆ.

ನೀರಿಲ್ಲದೆ ಬರಿದಾಗಿದ್ದ ಕೆರೆಕಟ್ಟೆಗಳಲ್ಲಿ ನಿಧಾನವಾಗಿ ಜಲರಾಶಿ ಕಂಡುಬರಲಾರಂಭಿಸಿದೆ. ಇದರಿಂದ ಕಳೆದ ಹಲವು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಮೂಕಪ್ರಾಣಿಗಳಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

‘ಇತ್ತೀಚಿಗಿನ ವರ್ಷಗಳಿಗೆ ಹೋಲಿಸಿದರೆ ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ತೀವ್ರ ಸ್ವರೂಪದ ಬರಗಾಲದ ಛಾಯೆ ಕಂಡುಬಂದಿತ್ತು. ಹಲವು ಕೆರೆಕಟ್ಟೆಗಳಲ್ಲಿ ಹನಿ ನೀರೂ ಇರದಂತಹ ದುಃಸ್ಥಿತಿ ಎದುರಾಗಿತ್ತು. ತೀವ್ರ ಬಿಸಿಲ ತಾಪದಿಂದ ಹಸಿರು ಕೂಡ ಒಣಗಿ ಹೋಗಿತ್ತು. ನೀರು – ಹಸಿರಿಲ್ಲದೆ ಜಾನುವಾರುಗಳ ಸಂಕಷ್ಟ ಹೇಳತೀರದಾಗಿತ್ತು.

ಅದೆಷ್ಟೊ ಜಾನುವಾರುಗಳು ಹಸಿವಿನಿಂದ ನಾನಾ ರೋಗಕ್ಕೆ ತುತ್ತಾಗುವಂತಾಗಿತ್ತು. ಮತ್ತೊಂದೆಡೆ, ಮೇವಿನ ದರವು ಗಗನಕ್ಕೇರಿತ್ತು. ಆದರೆ ಇತ್ತೀಚೆಗೆ ಬಿದ್ದ ಭಾರೀ ಮಳೆಯು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ. ಕೆರೆಕಟ್ಟೆಗಳಲ್ಲಿ ಉತ್ತಮ ನೀರು ಸಂಗ್ರಹವಾಗಿದೆ. ಹಾಗೆಯೇ ಹಸಿರು ಕೂಡ ಬೆಳೆದಿದೆ. ಮಳೆಯಿಂದ ಮೂಕಪ್ರಾಣಿಗಳು ಹಸಿವು – ದಾಹದಿಂದ ಹೊರಬರುವಂತಾಗಿದೆ’ ಎಂದು ಜಾನುವಾರು ಪಾಲಕರು ಅಭಿಪ್ರಾಯಪಡುತ್ತಾರೆ.

ಹದ ಮಳೆ : ಮಳೆ ಕೊರತೆಯಿಂದ ಬೇಸಿಗೆ ಕೃಷಿ ಚಟುವಟಿಕೆ (Agricultural activity) ಸ್ತಬ್ದವಾಗಿತ್ತು. ತೋಟದ ಬೆಳೆ ಉಳಿಸಿಕೊಳ್ಳಲು ರೈತರು (farmers) ಹರಸಾಹಸ ಪಡುವಂತಾಗಿತ್ತು. ಆದರೆ ಮುಂಗಾರು ಪೂರ್ವ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬಹುತೇಕ ಕಡೆ ಉತ್ತಮ ಮಳೆಯಾಗಿರುವುದರಿಂದ, ಅತ್ಯಂತ ಉತ್ಸಾಹದಿಂದ ರೈತರು ಮುಂಗಾರು ಹಂಗಾಮಿನ ಸಿದ್ಧತೆಯತ್ತ ಕಾರ್ಯೋನ್ಮುಖರಾಗುತ್ತಿದ್ದಾರೆ. ಬಿತ್ತನೆ ಬೀಜ ಸೇರಿದಂತೆ ಕೃಷಿ ಉಪಕರಣಗಳ ಖರೀದಿಯಲ್ಲಿ ತೊಡಗಿದ್ದಾರೆ.

ಒಟ್ಟಾರೆ ಮರುಭೂಮಿಯಲ್ಲಿ (desert) ಓಯಸಿಸ್ ಕಂಡ ರೀತಿಯಲ್ಲಿ, ಸುಡು ಬೇಸಿಗೆ ಹಾಗೂ ಬರಗಾಲದ ವೇಳೆ ಬಿದ್ದ ಮಳೆಯು ಸಕಲ ಜೀವರಾಶಿಗಳಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಹಾಗೆಯೇ ಬರಿದಾಗಿದ್ದ ಜಲಮೂಲಗಳಿಗೆ ಹೊಸ ಜೀವಕಳೆ ತರುವಂತೆ ಮಾಡಿದೆ.

Fraud of money from bank accounts through banking application: Police department alert! Reporter : B. Renukesh ಬ್ಯಾಂಕಿಂಗ್ ಅಪ್ಲಿಕೇಷನ್ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ವಂಚನೆ : ಪೊಲೀಸ್ ಇಲಾಖೆ ಎಚ್ಚರಿಕೆ! ವರದಿ : ಬಿ. ರೇಣುಕೇಶ್ Previous post ಬ್ಯಾಂಕಿಂಗ್ ಅಪ್ಲಿಕೇಷನ್ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ವಂಚನೆ : ಪೊಲೀಸ್ ಇಲಾಖೆ ಎಚ್ಚರಿಕೆ!
The state government's decision to conduct GP-Taam elections ಲೋಕಸಭೆ ರಿಸಲ್ಟ್ ನಂತರ ಜಿಪಂ – ತಾಪಂ ಚುನಾವಣೆ ನಡೆಸಲು ರಾಜ್ಯ ಸರ್ಕಾರದ ನಿರ್ಧಾರ Next post ಜಿಪಂ – ತಾಪಂ ಚುನಾವಣೆ ನಡೆಸಲು ರಾಜ್ಯ ಸರ್ಕಾರದ ನಿರ್ಧಾರ