ಲಾಡ್ಜ್ – ರೆಸಾರ್ಟ್ ಗಳಿಗೆ ಪೊಲೀಸರ ದಿಢೀರ್ ಭೇಟಿ : ಪರಿಶೀಲನೆ!

ಶಿಕಾರಿಪುರ, ಫೆ. 24: ಶಿಕಾರಿಪುರ ಪಟ್ಟಣದ ಲಾಡ್ಜ್ ಹಾಗೂ ರೆಸಾರ್ಟ್ ಗಳಿಗೆ ಪೊಲೀಸರು ದಿಢೀರ್ ಭೇಟಿ ನೀಡಿ, ಗ್ರಾಹಕರ ವಿವರ ಪರಿಶೀಲನೆ ನಡೆಸಿದ ಘಟನೆ ಗುರುವಾರ ನಡೆದಿದೆ. 
ಲಾಡ್ಜ್ ಗೆ ಆಗಮಿಸುವ ಗ್ರಾಹಕರ ವಿವರಗಳನ್ನು ರಿಜಸ್ಟರ್ ಪುಸ್ತಕದಲ್ಲಿ ನಮೂದಿಸಲಾಗಿದೆಯೇ, ಗ್ರಾಹಕರಿಂದ ಪಡೆದುಕೊಂಡಿರುವ ದಾಖಲಾತಿಗಳ ವಿವರ, ಸಿಸಿ ಕ್ಯಾಮರಾಗಳ ಕಾರ್ಯನಿರ್ವಹಣೆ ಮತ್ತೀತರ ವಿವರಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಶಿಕಾರಿಪುರ ಟೌನ್ ಠಾಣೆ ಸಬ್ ಇನ್ಸ್’ಪೆಕ್ಟರ್ ಮಂಜುನಾಥ್ ಎಸ್ ಕೊಪ್ಪಲೂರು ನೇತೃತ್ವದಲ್ಲಿ ಈ ತಪಾಸಣಾ ಕಾರ್ಯ ನಡೆದಿದೆ. ಗ್ರಾಹಕರಿಗೆ ಕೊಠಡಿ ನೀಡುವ ವೇಳೆ ಅನುಸರಿಸಬೇಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಲಾಡ್ಜ್ – ರೆಸಾರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Previous post ಮೂರನೇ ದಿನಕ್ಕೆ ರೈತರ ಪ್ರತಿಭಟನೆ : ಡಿಎಸ್ಎಸ್ ಮುಖಂಡರು ಭಾಗಿ
Next post ಶಿವಮೊಗ್ಗ ನಾಗರೀಕರೇ ಗಮನಿಸಿ..! : ಫೆ. 27 ರಂದು ನಗರ ಸಂಚಾರ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ!!