
ರಸ್ತೆಯಲ್ಲಿಯೇ ಕಾರ್ ಪಾರ್ಕಿಂಗ್ ಶೆಡ್ ನಿರ್ಮಿಸಿದ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ವಿರುದ್ದ ಪ್ರತಿಭಟನೆ!
ಶಿವಮೊಗ್ಗ, ಮೇ 27: ಜನ – ವಾಹನ ಸಂಚಾರವಿದ್ದ ಡಾಂಬರ್ ರಸ್ತೆಗೆ (road) ಬೇಲಿ ಹಾಕಿ, ಕಚೇರಿ ಕಾರು ನಿಲುಗಡೆ ಶೆಡ್ ಮಾಡಿಕೊಂಡಿರುವ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ (shivamogga – bhadravathi urban development authority) ವಿರುದ್ದ, ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಸೋಮವಾರ ಪ್ರತಿಭಟನೆ (protest) ನಡೆಸಿ ಆಕ್ರೋಶ ವ್ಯಕ್ತಪಡಿಸಿತು.
ವಿನೋಬನಗರದಲ್ಲಿರುವ (vinobanagara) ಪ್ರಾಧಿಕಾರದ ಕಚೇರಿ ಎದುರು ಸಂಘಟನೆ ಪ್ರತಿಭಟನೆ ನಡೆಸಿತು. ಪ್ರಾಧಿಕಾರದ ಜನ ವಿರೋಧಿ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು. ಒಂದು ವಾರದೊಳಗೆ ರಸ್ತೆಗೆ ಹಾಕಿರುವ ಶೆಡ್ ತೆರವುಗೊಳಿಸಿ, ಜನ – ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದೆ. ( www.udayasaakshi.com )
ರಸ್ತೆಗೆ ಬೇಲಿ : ಪ್ರಾಧಿಕಾರದ ಕಚೇರಿಯಿರುವ ಕಟ್ಟಡದ ಪಕ್ಕದಲ್ಲಿಯೇ ಸದರಿ ರಸ್ತೆಯಿದೆ. ಕಳೆದ ಹಲವು ವರ್ಷಗಳಿಂದ ರಸ್ತೆಯಲ್ಲಿ ಜನ – ವಾಹನ ಸಂಚಾರವಿದೆ. ಪಾಲಿಕೆ (corporation) ಆಡಳಿತ ಲಕ್ಷಾಂತರ ರೂ. ವೆಚ್ಚದಲ್ಲಿ ಡಾಂಬರೀಕರಣ (Asphaltization) ಮಾಡಿಕೊಂಡು ಬರುತ್ತಿದೆ. ಆದರೆ ಕಳೆದ ಕೆಲ ತಿಂಗಳುಗಳ ಹಿಂದೆ, ಪ್ರಾಧಿಕಾರವು ರಸ್ತೆಯಲ್ಲಿ ಶೆಡ್ ನಿರ್ಮಾಣ ಮಾಡಿತ್ತು. ಕಚೇರಿ ಕಾರುಗಳ ನಿಲುಗಡೆಗೆ (car parking) ವ್ಯವಸ್ಥೆ ಮಾಡಿಕೊಂಡಿತ್ತು.
‘ಇದೊಂದು ಕಾನೂನುಬಾಹಿರ (Illegal) ಕ್ರಮವಾಗಿದೆ. ಕಳೆದ ಹಲವು ವರ್ಷಗಳಿಂದ ರಸ್ತೆಗೆ ಪಾಲಿಕೆ ಆಡಳಿತ ಡಾಂಬರೀಕರಣ ಮಾಡಿಕೊಂಡು ಬರುತ್ತಿದೆ. ಆದರೆ ಏಕಾಏಕಿ ಪ್ರಾಧಿಕಾರವು ರಸ್ತೆ ಬಂದ್ (closed) ಮಾಡಿ ಕಾರು ನಿಲುಗಡೆ ಶೆಡ್ ನಿರ್ಮಿಸಿರುವುದು ಜನ ವಿರೋಧಿಯಾದುದಾಗಿದೆ’ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ( www.udayasaakshi.com )
‘ರಸ್ತೆ ಜಾಗ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡುವುದು ಕಾನೂನುಬಾಹಿರವಾಗಿದೆ. ಆದರೆ ನಿಯಮ ಅನುಷ್ಠಾನಕ್ಕೆ ತರವು ಕಾರ್ಯನಿರ್ವಹಣೆ ಮಾಡುತ್ತಿರುವ ಪ್ರಾಧಿಕಾರವೇ ರಸ್ತೆ ಒತ್ತುವರಿ (Road encroachment) ಮಾಡಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ. ರಸ್ತೆಯಲ್ಲಿ ಶೆಡ್ ನಿರ್ಮಾಣ ಮಾಡುವುದಕ್ಕೂ ಮುನ್ನ ಪ್ರಾಧಿಕಾರ ಆಡಳಿತವು ನಾಗರೀಕರ ಅಹವಾಲು ಆಲಿಸುವ ಕಾರ್ಯ ನಡೆಸಿಲ್ಲ ಎಂದು ಒಕ್ಕೂಟ ದೂರಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಕೆ.ವಿ.ವಸಂತ್ ಕುಮಾರ್, ಸತೀಶ್ ಕುಮಾರ್ ಶೆಟ್ಟಿ, ಅಶೋಕ್, ಚನ್ನವೀರಪ್ಪ ಗಾಮನಗಟ್ಟಿ, ಜನಮೇಜಿರಾವ್, ಸೀತಾರಾಮ್, ಉಮೇಶ್ ಯಾದವ್, ಚಂದ್ರಪ್ಪ, ಚಂದ್ರಶೇಖರ್ ಗೌಡ, ವೆಂಕಟನಾರಾಯಣ, ಕೇಶವಮೂರ್ತಿ, ಪ್ರಕಾಶ್, ದಿಗಂತ್ ಕುಮಾರ್, ಕೇಶವ, ಸುಬ್ರಹ್ಮಣ್ಯ, ಸುಬ್ಬಣ್ಣ ಮೊದಲಾದವರಿದ್ದರು. ( www.udayasaakshi.com )