Finally the police caught the arecanut thieves! ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ಅಡಕೆ ಕಳ್ಳರು!

ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ಅಡಕೆ ಕಳ್ಳರು!

ಶಿವಮೊಗ್ಗ, ಮೇ 27: ಸಾಗರ, ಸೊರಬ ತಾಲೂಕಿನ (sagar, soraba taluks) ವಿವಿಧೆಡೆ ಅಡಕೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಐವರನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಶಿಕಾರಿಪುರ ತಾಲೂಕು (shikaripura taluk) ಹರಗುವಳ್ಳಿಯ ನಿವಾಸಿ ತುಕ್’ರಾಜ್ (24), ಹನುಮಂತಪ್ಪ (24), ರಾಕೇಶ್ (20), ಅಭಿಷೇಕ್ (20) ಹಾಗೂ ಶಿವಕುಮಾರ್ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ( www.udayasaakshi.com )

ಆರೋಪಿಗಳ ಬಂಧನದಿಂದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ (sagar rural police station) ವ್ಯಾಪ್ತಿಯ 3 ಪ್ರಕರಣ, ಆನಂದಪುರ ಠಾಣೆ (anandapura police station) ವ್ಯಾಪ್ತಿಯ 3, ಕಾರ್ಗಲ್ ಪೊಲೀಸ್ ಠಾಣೆ (kargal police station) ಹಾಗೂ ಸೊರಬ ಪೊಲೀಸ್ ಠಾಣೆ (soraba police station) ವ್ಯಾಪ್ತಿಯಲ್ಲಿ ದಾಖಲಾಗಿದ್ದ ತಲಾ 1 ಅಡಕೆ ಕಳವು ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.

ಬಂಧಿತರಿಂದ 8,19,000 ರೂ. ಮೌಲ್ಯದ ಅಡಕೆ (arecanut), 50 ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ ಟಾಟಾ ಏಸ್ ವಾಹನ, ಮಹೇಂದ್ರ ಪಿಕ್ ಅಪ್ ವಾಹನ ವಶಕ್ಕೆ ಪಡೆಯಲಾಗಿದೆ.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್ (sp g k mithunkumar), ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ ಜಿ, ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಟಿ ಮಾರ್ಗದರ್ಶನದಲ್ಲಿ ಸಾಗರ ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಮಹಾಬಲೇಶ್ವರ ಎಸ್.ಎನ್., ಸಬ್ ಇನ್ಸ್’ಪೆಕ್ಟರ್ ಮುಂದಿನಿಮನಿ, ( www.udayasaakshi.com )

ಸಿಬ್ಬಂದಿಗಳಾದ ಸಿ.ಹೆಚ್.ಸಿ ಸನಾವುಲ್ಲಾ ಶೇಕ್, ಫೈರೋಜ್ ಅಹಮದ್, ಸಿಪಿಸಿಗಳಾದ ರವಿಕುಮಾರ್, ಪ್ರವೀಣ್ ಕುಮಾರ್, ಗುರುಬಸವರಾಜ್, ಗಿರೀಶ್ ಬಾಬು ಅವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

ಮಾಹಿತಿ : ಈ ಕುರಿತಂತೆ ಸೋಮವಾರ ಸಂಜೆ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದರು. ಅಡಕೆ ಕಳವು ತಂಡದ (arecanut theft team) ಬಂಧನದ ಕುರಿತಂತೆ ಮಾಹಿತಿ ನೀಡಿದರು. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ( www.udayasaakshi.com )

Protest against the Shimoga - Bhadravati Urban Development Authority who built a car parking shed on the road! ರಸ್ತೆಯಲ್ಲಿಯೇ ಕಾರ್ ಪಾರ್ಕಿಂಗ್ ಶೆಡ್ ನಿರ್ಮಿಸಿದ ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ವಿರುದ್ದ ಪ್ರತಿಭಟನೆ! Previous post ರಸ್ತೆಯಲ್ಲಿಯೇ ಕಾರ್ ಪಾರ್ಕಿಂಗ್ ಶೆಡ್ ನಿರ್ಮಿಸಿದ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ವಿರುದ್ದ ಪ್ರತಿಭಟನೆ!
Raid on arecanut stock warehouses : Huge amount of illegal stock found! ಅಡಕೆ ದಾಸ್ತಾನು ಗೋದಾಮುಗಳ ಮೇಲೆ ದಾಳಿ : ಭಾರೀ ಪ್ರಮಾಣದ ಅಕ್ರಮ ದಾಸ್ತಾನು ಪತ್ತೆ! Next post ಅಡಕೆ ದಾಸ್ತಾನು ಗೋದಾಮುಗಳ ಮೇಲೆ ದಾಳಿ : ಭಾರೀ ಪ್ರಮಾಣದ ಅಕ್ರಮ ದಾಸ್ತಾನು ಪತ್ತೆ!