
ಆರೋಪಿಗಳ ವಿರುದ್ದ ಕಠಿಣ ಕ್ರಮ : ಶಿವಮೊಗ್ಗ ಎಸ್ಪಿ
ಶಿವಮೊಗ್ಗ (shivamogga), ಮೇ 29: ಮನೆ ಮುಂಭಾಗ ನಿಲ್ಲಿಸಿದ ವಾಹನಗಳ ಗಾಜು ಜಖಂಗೊಳಿಸಿದ ಆರೋಪಿಗಳನ್ನು (accused) ಪತ್ತೆ ಹಚ್ಚಿ ಅವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (sp g k mithun kumar) ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಹೊಸಮನೆ ಬಡಾವಣೆಗೆ (hosamane extension) ಅವರು ಭೇಟಿ ನೀಡಿ ಜಖಂಗೊಂಡ ವಾಹನಗಳನ್ನು ವೀಕ್ಷಿಸಿದರು. ನಂತರ ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿದರು. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಾಹನಗಳ ಗಾಜು ಜಖಂಗೊಳಿಸಿದ (Vehicle glass damage) ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರುಗಳ ಆಧಾರದ ಮೇಲೆ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ (doddapete police station) ಐಪಿಸಿಯ ವಿವಿಧ ಕಲಂ ಹಾಗೂ ಆಸ್ತಿ ನಷ್ಟ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ನಗರಾದ್ಯಂತ ಈಗಾಗಲೇ ರಾತ್ರಿ ಗಸ್ತು, ಫುಟ್ ಪ್ಯಾಟ್ರೋಲಿಂಗ್, ಏರಿಯಾ ಡಾಮಿನೇಷನ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೊಸಮನೆ ಬಡಾವಣೆಗೆ ವಿಶೇಷ ಒತ್ತು ನೀಡಲಾಗುವುದು. ಗಸ್ತು ಹೆಚ್ಚಿಸಲಾಗುವುದು. ಹಾಗೆಯೇ ಗಾಂಜಾ ಸೇವನೆ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಏನಾಗಿತ್ತು? : ಹೊಸಮನೆ ಬಡಾವಣೆಯಲ್ಲಿ ತಡರಾತ್ರಿ ದುಷ್ಕರ್ಮಿಗಳ (criminals) ಗುಂಪೊಂದು ಮನೆಗಳ ಮುಂಭಾಗ ನಿಲ್ಲಿಸಿದ್ದ ಕಾರುಗಳು, ಆಟೋಗಳು ಹಾಗೂ ಬೈಕ್ ಗಳ ಗಾಜುಗಳನ್ನು ಮಾರಕಾಸ್ತ್ರಗಳಿಂದ ಹೊಡೆದು ಜಖಂಗೊಳಿಸಿದ ಘಟನೆ ನಡೆದಿದೆ.
ಘಟನೆಯಲ್ಲಿ ಸುಮಾರು 8 ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ ಎನ್ನಲಾಗಿದೆ. ಈ ದುಷ್ಕೃತ್ಯವು ಸ್ಥಳೀಯ ನಾಗರೀಕರಲ್ಲಿ ಆತಂಕ ಉಂಟು ಮಾಡಿದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವಂತೆ ಸ್ಥಳೀಯರು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.