
ಮಾಂಸಕ್ಕಿಂತ ಮೂಳೆ ಜಾಸ್ತಿಯಿದೆ ಎಂದ ಗ್ರಾಹಕನ ಮೇಲೆ ದಾಳಿ : ಅಪ್ರಾಪ್ತ ಪೊಲೀಸ್ ವಶಕ್ಕೆ
ಶಿವಮೊಗ್ಗ (shivamogga), ಜೂ. 3: ಮಾಂಸಕ್ಕಿಂತ ಮೂಳೆಗಳೇ ಜಾಸ್ತಿಯಿದೆ ಎಂದು ದೂರಿದ ಗ್ರಾಹಕನ (customer) ಮೇಲೆ ಮಾಂಸದಂಗಡಿಯಲ್ಲಿದ್ದ ಅಪ್ರಾಪ್ತನೋರ್ವ, ಹರಿತವಾದ ಆಯುಧದಿಂದ ದಾಳಿ ನಡೆಸಿ ಗಾಯಗೊಳಿಸಿದ ಘಟನೆ, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ (tunganagara police station) ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮಲ್ಲೇಶಪ್ಪ (45) ಗಾಯಗೊಂಡ ಗ್ರಾಹಕ ಎಂದು ಗುರುತಿಸಲಾಗಿದೆ. ಇವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿತ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಹಿನ್ನಲೆ : ಮಾಂಸದ ಅಂಗಡಿಗೆ (meat shop) ಆಗಮಿಸಿದ ಗ್ರಾಹಕ ಮಲ್ಲೇಶಪ್ಪ ಅವರು, ಅಂಗಡಿಯಲ್ಲಿದ್ದ ಅಪ್ರಾಪ್ತನಿಂದ (minor) ಮಾಂಸ ಖರೀದಿಸಿದ್ದರು. ಪ್ಯಾಕ್ ಮಾಡಿಕೊಟ್ಟ ಮಾಂಸದಲ್ಲಿ (meat) ಮೂಳೆಗಳೇ (bones) ಹೆಚ್ಚಿರುವುದು ಕಂಡುಬಂದಿದೆ. ಈ ಬಗ್ಗೆ ಗ್ರಾಹಕನು ಆರೋಪಿಯ ತಂದೆಯ ಮೊಬೈಲ್ ಫೋನ್ ಗೆ ಕರೆ ಮಾಡಿ ದೂರಿದ್ದರು.
ಇದರಿಂದ ಆಕ್ರೋಶಗೊಂಡ ಆರೋಪಿಯು, ಅಂಗಡಿಯಲ್ಲಿದ್ದ ಹರಿತವಾದ ಆಯುಧದಿಂದ ಗ್ರಾಹಕನ ಮೇಲೆ ದಾಳಿ ನಡೆಸಿದ್ದಾನೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
More Stories
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 18 ರ ತರಕಾರಿ ಬೆಲೆಗಳ ವಿವರ
ಶಿವಮೊಗ್ಗ (shivamogga), ಏ. 18: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, ಏ. 18 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ...