Shimoga Lok Sabha Election : All set for vote counting! ಶಿವಮೊಗ್ಗ ಲೋಕಸಭೆ ಚುನಾವಣೆ : ಮತ ಎಣಿಕೆಗೆ ಸಕಲ ಸಜ್ಜು! ವರದಿ : ಬಿ. ರೇಣುಕೇಶ್ reporter - b.renukesha

ಲೋಕಸಭೆ ಚುನಾವಣೆ : ಮತ ಎಣಿಕೆಗೆ ಕೌಂಟ್ ಡೌನ್ – ಸಕಲ ಸಜ್ಜು!

ಶಿವಮೊಗ್ಗ (shivamogga), ಜೂ. 3: ಲೋಕಸಭಾ ಚುನಾವಣೆ-2024 (loksabha election 2024) ಮತ ಎಣಿಕೆ ಜೂನ್ 04 ರಂದು ನಡೆಯಲಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ (shimoga lok sabha constituency) ಮತ ಎಣಿಕೆ ಕಾರ್ಯವು ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜ್ ಕಟ್ಟಡದಲ್ಲಿ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಂಡಿದೆ.

ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ (vote counting) ಪ್ರಕ್ರಿಯೆ ಆರಂಭವಾಗಲಿದೆ. ಎಣಿಕೆಗೆ ಒಟ್ಟು 523 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ (assembly constituency) 14 ಮತ ಎಣಿಕೆ ಟೇಬಲ್ ಗಳು ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಟೇಬಲ್ ಕೌಂಟರ್‍ಗಳಿಗೆ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶವಿರುತ್ತದೆ. ಮತ ಎಣಿಕೆ ಕೇಂದ್ರದ ಸುತ್ತಲು ಬಿಗಿ ಪೊಲೀಸ್ ಪಹರೆಯ (tight police security) ವ್ಯವಸ್ಥೆ ಮಾಡಲಾಗಿದೆ.

ಅಂಚೆ ಮತಪತ್ರಗಳನ್ನು (postal ballot) ಬೆಳಿಗ್ಗೆ 8.00 ಗಂಟೆಗೆ ಚುನಾವಣಾಧಿಕಾರಿಗಳ ಮೇಜಿನಲ್ಲಿ ಆರಂಭಿಸಲಾಗುತ್ತದೆ. ಅಂಚೆ ಮತಪತ್ರಗಳ ಎಣಿಕೆ ಆರಂಭವಾದ 30 ನಿಮಿಷಗಳ ನಂತರ ಕಂಟ್ರೋಲ್ ಯೂನಿಟ್ ಮೂಲಕ ಮತ ಎಣಿಕೆಯನ್ನು ಆರಂಬಿಸಲಾಗುತ್ತದೆ.

ಪ್ರತೀ ಮತ ಎಣಿಕೆ ಟೇಬಲ್ ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರು ಮತ್ತು ಒಬ್ಬರು ಮೈಕ್ರೋ ಅಬ್ಸರ್ವರ್ ಗಳನ್ನು ನೇಮಕಗೊಳಿಸಿ ತರಬೇತಿ ನೀಡಲಾಗಿದೆ. ಇ.ವಿ.ಎಂ (evm) ಮತ ಎಣಿಕೆಗಳು ಪೂರ್ಣಗೊಂಡ ನಂತರ ಪ್ರತೀ ವಿಧಾನಸಭಾ ಕ್ಷೇತ್ರದಿಂದ ಐದು ವಿವಿ ಪ್ಯಾಟ್‍ಗಳ (vv pat) ಎಣಿಕೆಯನ್ನು ಒಂದಾದ ಮೇಲೆ ಒಂದರಂತೆ ಎಣಿಕೆ ಕಾರ್ಯ ಮಾಡಲಾಗುತ್ತದೆ. ಮತ ಎಣಿಕೆ ಹಾಲ್ ನಲ್ಲಿ ಮೊಬೈಲ್ ಗಳಿಗೆ (mobile phone) ಅವಕಾಶವಿರುವುದಿಲ್ಲ.

ಮತ ಎಣಿಕೆ ಆವರಣದ ಸುತ್ತಮುತ್ತ ಸೆಕ್ಷನ್ 144 ನ್ನು (crpc 144 section) ಜಾರಿಗೊಳಿಸಲಾಗುತ್ತಿದೆ. ಮಾಧ್ಯಮ ಕೇಂದ್ರವನ್ನು ಮತ ಎಣಿಕೆ ಆವರಣದಲ್ಲಿ ಪ್ರತ್ಯೇಕ ಕೊಠಡಿಯನ್ನು ತೆರೆಯಲಾಗಿದೆ. ವಿಧಾನಸಭಾ ಕ್ಷೇತ್ರ 18 ರಿಂದ 21 ಸುತ್ತಿನ ಎಣಿಕೆ ನಡೆಯಲಿದ್ದು ಪ್ರತಿಯೊಂದು ಸುತ್ತಿನ ಫಲಿತಾಂಶವನ್ನು ಚುನಾವಣಾ ವೀಕ್ಷಕರ ಸಹಿ ಹಾಕಿದ ನಂತರ ಮಾಧ್ಯಮ ಹಾಗೂ ಮೈಕ್ ಮೂಲಕ ತಿಳಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.

Attack on a customer saying that there are more bones than meat: minor in police custody ಮಾಂಸಕ್ಕಿಂತ ಮೂಳೆ ಜಾಸ್ತಿಯಿದೆ ಎಂದ ಗ್ರಾಹಕನ ಮೇಲೆ ದಾಳಿ : ಅಪ್ರಾಪ್ತ ಪೊಲೀಸ್ ವಶಕ್ಕೆ Previous post ಮಾಂಸಕ್ಕಿಂತ ಮೂಳೆ ಜಾಸ್ತಿಯಿದೆ ಎಂದ ಗ್ರಾಹಕನ ಮೇಲೆ ದಾಳಿ : ಅಪ್ರಾಪ್ತ ಪೊಲೀಸ್ ವಶಕ್ಕೆ
Shimoga Lok Sabha Constituency: BJP candidate B. Y. Raghavendra leads! ಶಿವಮೊಗ್ಗ ಲೋಕಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಮುನ್ನಡೆ! Next post ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಮುನ್ನಡೆ!