
1 ಲಕ್ಷ ಮತಗಳ ಭಾರೀ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ!
ಶಿವಮೊಗ್ಗ (shivamogga), ಜೂ 4: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಬಿರುಸುಗೊಂಡಿದೆ. ಈ ನಡುವೆ ಮತ ಗಳಿಕೆಗೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಭಾರೀ ಮುನ್ನಡೆ ಸಾಧಿಸಲಾರಂಭಿಸಿದ್ದಾರೆ. ಪ್ರತಿಯೊಂದು ಸುತ್ತಿನಲ್ಲಿಯೂ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ.
ಬೆಳಿಗ್ಗೆ 11. 20 ರ ಮಾಹಿತಿಯಂತೆ ಬಿ.ವೈ.ರಾಘವೇಂದ್ರ ಅವರು 3,54,207 ಮತ ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು 2,48,280 ಮತ ಗಳಿಸಿದ್ದಾರೆ. ಬಿ.ವೈ.ರಾಘವೇಂದ್ರ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಗೀತಾ ಶಿವರಾಜಕುಮಾರ್ ಅವರಿಗಿಂತ 1,05,927 ಮತಗಳ ಲೀಡ್ ನಲ್ಲಿದ್ದಾರೆ.
ಉಳಿದಂತೆ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಬೇಕೆಂದೆ ಕಣಕ್ಕಿಳಿದಿದ್ದ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಮತಗಳಿಕೆ ಅತ್ಯಂತ ಕಡಿಮೆಯಿರುವುದು ಕಂಡುಬರುತ್ತಿದೆ. ಕೆ ಎಸ್ ಈಶ್ವರಪ್ಪ ಅವರಿಗೆ 14,144 ಮತಗಳು ಸಂದಾಯವಾಗಿವೆ. ಮತ ಎಣಿಕೆ ಮುಂದುವರೆದಿದೆ.
In#shimoganews, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಶಿವಮೊಗ್ಗ, #ಶಿವಮೊಗ್ಗನ್ಯೂಸ್