
7 ನೇ ವೇತನ ಆಯೋಗದ ಶಿಫಾರಸು ಜಾರಿ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಷ್.ಷಡಾಕ್ಷರಿ ಹೇಳಿದ್ದೇನು?
ಶಿವಮೊಗ್ಗ (shivamogga), ಜೂ. 11: ಪ್ರಸ್ತುತ ಜೂನ್ ತಿಂಗಳಾಂತ್ಯದೊಳಗೆ , ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ವರದಿ (7th pay commission) ಶಿಫಾರಸುಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವ ವಿಶ್ವಾಸವಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (state govt. employees’ association president c s shadakshari) ಅವರು ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಮಂಗಳವಾರ (ಜೂ. 11) ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರ್ಕಾರಿ ನೌಕರರ (govt employees) ವೇತನ ಪರಿಷ್ಕರಣೆಯಾಗಬೇಕು ಎಂಬುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಅದರಂತೆ ವೇತನ ಆಯೋಗ ರಚನೆಯಾಗಿತ್ತು. ಈಗಾಗಲೇ ಆಯೋಗವು ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ (state govt) ಸಲ್ಲಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಮುಖ್ಯಮಮಂತ್ರಿಗಳು (chief minister), ಆದಷ್ಟು ಶೀಘ್ರ ವರದಿ ಪಡೆದು, ಅನುಷ್ಠಾನಗೊಳಿಸುವ ಭರವಸೆಯನ್ನು ನೀಡಿದ್ದರು. ಅದರಂತೆ ಕಳೆದ ಒಂದು ವಾರದ ಹಿಂದೆ, ಸಿಎಂ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿತ್ತು. ಲೋಕಸಭೆ ಚುನಾವಣೆ (loksabha election) ಮಾದರಿ ನೀತಿ – ಸಂಹಿತೆ ಪೂರ್ಣಗೊಂಡ ನಂತರ ಜಾರಿಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ಪ್ರಸಕ್ತ ಜೂನ್ ಅಂತ್ಯದೊಳಗೆ ಆಯೋಗದ ವರದಿಯ ಶಿಫಾರಸ್ಸುಗಳನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಅನುಮೋದನೆ ಪಡೆದು ಆಯೋಗದ ಶಿಫಾರಸ್ಸುಗಳನ್ನು ಸರ್ಕಾರ ಅನುಷ್ಠಾನಗೊಳಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಸಂಘಟನೆಯು ಕೂಡ ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದೆ. ಜೂನ್ ಅಂತ್ಯದೊಳಗೆ ವೇತನ ಆಯೋಗದ ಶಿಫಾರಸ್ಸುಗಳೆಲ್ಲವನ್ನು ಯಥಾವತ್ತಾಗಿ ಸರ್ಕಾರ ಒಪ್ಪಿಕೊಳ್ಳಬೇಕೆಂಬುವುದು ಸಂಘಟನೆಯ ಮನವಿಯಾಗಿದೆ.
ಕೊನೆ ಪಕ್ಷ ಈ ಹಿಂದಿನ ಮುಖ್ಯಮಂತ್ರಿಗಳು ನೀಡಿದಂತೆ ಶೇ. 30 ರಷ್ಟು ಪಿಗ್ಮೆಂಟ್ ಆದರೂ ನೀಡಬೇಕೆಂಬ ಬೇಡಿಕೆಯಿದೆ. ಮುಖ್ಯಮಂತ್ರಿಗಳು ಕೂಡ ತಮ್ಮೊಂದಿಗೆ ಕುಳಿತು ಚರ್ಚಿಸಿ, ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸಿಎಂ (cm siddaramaiah) ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದರ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿ.ಎಸ್.ಷಡಾಕ್ಷರಿ (c s shadakshari) ಸ್ಪಷ್ಟಪಡಿಸಿದ್ದಾರೆ.
3 thoughts on “7 ನೇ ವೇತನ ಆಯೋಗದ ಶಿಫಾರಸು ಜಾರಿ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಷ್.ಷಡಾಕ್ಷರಿ ಹೇಳಿದ್ದೇನು?”
Comments are closed.
ಶ್ರೀಯುತ ಷಡಕ್ಷರಿ ರವರಿಗೆ ವಂದನೆಗಳು, ನಿಮ್ಮ ಪ್ರಯತ್ನಕ್ಕೆ ಭಗವಂತನ ಆಶಿರ್ವಾದ ಸಿಗಲಿ.
No ground work only telling lies
ನಮಗೆ ನಂಬಿಕೆ ಇಲ್ಲ ಸರ್. ಒಂದು ವರ್ಷದಿಂದ ಇವ್ರ ಮಾತು ಕೇಳಿ ಕೇಳಿ ಸಾಕಾಗಿದೆ. ಹೋರಾಟ ಮಾಡದೇ ಏನು ಸಿಗಲ್ಲ ಬಿಡಿ