Yeddyurappa escaped from arrest: What is the order given by High Court to CID? ಬಂಧನ ಭೀತಿಯಿಂದ ಪಾರಾದ ಯಡಿಯೂರಪ್ಪ : ಸಿಐಡಿಗೆ ಹೈಕೋರ್ಟ್ ನೀಡಿದ ಆದೇಶವೇನು?

ಬಂಧನ ಭೀತಿಯಿಂದ ಪಾರಾದ ಯಡಿಯೂರಪ್ಪ!

ಬೆಂಗಳೂರು (bengaluru), ಜೂ. 14: ಹದಿನೇಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪೋಕ್ಸೊ (posco) ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು (yediyurappa) ಬಂಧಿಸದಂತೆ ಶುಕ್ರವಾರ ಹೈಕೋರ್ಟ್ (high court) ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಸಿಎಂಗೆ ದೊಡ್ಡ ರಿಲೀಫ್ ದೊರಕಿದಂತಾಗಿದೆ.

ಯಾವುದೇ ಒತ್ತಾಯದ ಕ್ರಮಕೈಗೊಳ್ಳದಂತೆ ಸಿಐಡಿಗೆ (cid) ಸೂಚಿಸಿರುವ ಹೈಕೋರ್ಟ್, ಜೂ. 17 ರಂದು ಸಿಐಡಿ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದೆ. ಯಡಿಯೂರಪ್ಪ ಅವರು ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಹಾಗೂ ನಿರೀಕ್ಷಣಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಮುಂದಿನ ವಿಚಾರಣೆ ತನಕ ಬಲವಂತದ ಕ್ರಮಕೈಗೊಳ್ಳುವಂತಿಲ್ಲ ಎಂದು ಸೂಚಿಸಿದೆ. ಮುಂದಿನ ಎರಡು ವಾರಗಳ ಕಾಲ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.

ವಾರೆಂಟ್ ಜಾರಿ : ಪೋಕ್ಸೊ ಪ್ರಕರಣದ ಕುರಿತಂತೆ ಸಿಐಡಿ ತನಿಖೆ ನಡೆಸುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಯಡಿಯೂರಪ್ಪರಿಗೆ ನೋಟೀಸ್ ನೀಡಿತ್ತು. ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ಸಿಐಡಿಗೆ ಯಡಿಯೂರಪ್ಪ ಪತ್ರ ಬರೆದಿದ್ದರು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ದ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸುವಂತೆ ಸಿಐಡಿ ಕೋರ್ಟ್ ಮೊರೆ ಹೋಗಿತ್ತು.

ಗುರುವಾರ ಬೆಂಗಳೂರಿನ ಪೋಕ್ಸೊ1 ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ಜಾಮೀನು ರಹಿತ ಬಂಧನದ ವಾರೆಂಟ್ (non bailable arrest warrant) ಹೊರಡಿಸಿತ್ತು. ಇದರ ಬೆನ್ನಲ್ಲೇ ಮಾಜಿ ಸಿಎಂ ಬಂಧನಕ್ಕೆ ಸಿಐಡಿ ಕ್ರಮಕೈಗೊಂಡಿತ್ತು. ಅವರಿಗೆ ಶೋಧ ನಡೆಸಲಾರಂಭಿಸಿತ್ತು. ಈ ನಡುವೆ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು (anticipatory bail) ಕೋರಿ ಗುರುವಾರ ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದ ಹಿನ್ನೆಲೆ : 17 ವರ್ಷದ ಬಾಲಕಿಯ (girl) ಮೇಲೆ ಲೈಂಗಿಕ ದೌರ್ಜನ್ಯ (sexual harassment) ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ, ಯಡಿಯೂರಪ್ಪ ವಿರುದ್ದ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ (sadashiva nagar police station) 2024 ರ ಮಾರ್ಚ್ 3 ರಂದು ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದನ್ನು ಸರ್ಕಾರಿ ಸಿಐಡಿಗೆ ತನಿಖೆಗೆ ಒಪ್ಪಿಸಿತ್ತು.

One thought on “ಬಂಧನ ಭೀತಿಯಿಂದ ಪಾರಾದ ಯಡಿಯೂರಪ್ಪ!

  1. BSY ಗೆ 82 ವರ್ಷ!!
    Sexual Harassment ಮಾಡೋ ವಯಸ್ಸಾ ಅದು!!
    ಓಡಾಡೋದೇ ಕಷ್ಟ… ಕುಂತರೆ ಏಳೋಕಾಗಲ್ಲ…
    ಸರಿಯಾಗಿ ಸುಸು ಮಾಡೋದೇ ಕಷ್ಟ…
    ಇದು ಕಾನೂನಿನ ದುರುಪಯೋಗ ಅಷ್ಟೇ!
    ಕಾನೂನಿನ ದುರುಪಯೋಗ ಮಾಡೋರಿಗೂ ಸರಿಯಾದ ಕಾನೂನು ರೂಪಿಸಿ ಶಿಕ್ಷೆ ಕೊಡಬೇಕು.
    ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕಾನೂನು ತಜ್ಞರು ಆಲೋಚಿಸಲಿ 🙏🏼

Comments are closed.

Those who were selling ganja in Shimoga were caught by the police! ಶಿವಮೊಗ್ಗದಲ್ಲಿ ಗಾಂಜಾ ಮಾರುತ್ತಿದ್ದವರು ಪೊಲೀಸ್ ಬಲೆಗೆ! Previous post ಶಿವಮೊಗ್ಗದಲ್ಲಿ ಗಾಂಜಾ ಮಾರುತ್ತಿದ್ದವರು ಪೊಲೀಸ್ ಬಲೆಗೆ!
Guarantee are not suspended : CM Siddaramaiah clarified ಗ್ಯಾರಂಟಿ ಯೋಜನೆಗಳ ಸ್ಥಗಿತವಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ Next post ಗ್ಯಾರಂಟಿ ಯೋಜನೆಗಳ ಸ್ಥಗಿತವಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ