Disruption of Smart City works in Shimoga: Sudden inspection by Lokayukta police team! ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಅವಾಂತರ : ಲೋಕಾಯುಕ್ತ ಪೊಲೀಸ್ ತಂಡದಿಂದ ದಿಢೀರ್ ಪರಿಶೀಲನೆ!

ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಅವಾಂತರ : ಲೋಕಾಯುಕ್ತ ಪೊಲೀಸ್ ತಂಡದಿಂದ ದಿಢೀರ್ ಪರಿಶೀಲನೆ!

ಶಿವಮೊಗ್ಗ (shivamogga), ಜೂ. 20: ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ (smart city) ಯೋಜನೆಯಡಿ ನೂರಾರು ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಹಲವು ಕಾಮಗಾರಿಗಳ ಕುರಿತಂತೆ, ಈ ಹಿಂದೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದವು.

ಈ ನಡುವೆ ಲೋಕಾಯು್ಕ್ತ ಪೊಲೀಸ್ ತಂಡ (lokayukta police team) ಕೂಡ, ದಿಢೀರ್ ಆಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಖುದ್ದು ಪರಿಶೀಲನೆ ನಡೆಸಿದ (inspection of works) ಘಟನೆ ಜೂ. 20 ರಂದು ನಡೆದಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ (lokayukta police) ಅಧೀಕ್ಷಕರಾದ ಮಂಜುನಾಥ ಚೌದರಿ ಎಂ.ಹೆಚ್ ನೇತೃತ್ವದ ತಂಡ ನಗರದ ವಿವಿಧೆಡೆ ಕಾಮಗಾರಿಗಳ ವೀಕ್ಷಣೆ ನಡೆಸಿತು.

ಈ ಸಂದರ್ಭದಲ್ಲಿ ಲೋಕಾಯುಕ್ತ ಠಾಣೆಯ ಡಿಎಸ್‍ಪಿ ಉಮೇಶ್ ಈಶ್ವರ್ ನಾಯ್ಕ, ಪೊಲೀಸ್ ನಿರೀಕ್ಷಕರಾದ ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ ಮತ್ತವರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಲ್ಲೆಲ್ಲಿ ಪರಿಶೀಲನೆ?: ನಗರದ ಆಯನೂರು ಗೇಟ್, ದ್ವಾರಕ ಕನ್ವೆನ್ಷನ್ ಹಾಲ್ ಹತ್ತಿರ, ಆಲ್ಕೋಳ ಸರ್ಕಲ್, ವಿನೋಬನಗರದ 100 ಅಡಿ ಮುಖ್ಯ ರಸ್ತೆ, ಫ್ರೀಡಂ ಪಾರ್ಕ್ (freedom park), ಗಾಂಧಿನಗರ, ತಿಲಕ್‍ನಗರ, ತುಂಗಾ ನದಿ (tunga river) ಬಳಿ ಮತ್ತು ಇತರೆ ಪ್ರದೇಶಗಳಲ್ಲಿ ಲೋಕಾಯುಕ್ತ ತಂಡ ಸ್ಮಾರ್ಟ್ ಸಿಟಿ (shimoga smart city) ಯೋಜನೆಯಡಿ ಅನುಷ್ಠಾನಗೊಳಿಸಲಾದ ಡ್ರೈನೇಜ್, ರಸ್ತೆ, ಚರಂಡಿ, ಫುಟ್‍ಪಾತ್ ಇತರೆ ಕಾಮಗಾರಿಗಳನ್ನು ಪರಿಶೀಲಿಸಿತು.

ಈ ವೇಳೆ ಸ್ಮಾರ್ಟ್‍ಸಿಟಿ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ್ ಮತ್ತವರ ಸಿಬ್ಬಂದಿಗಳನ್ನು ಬರ ಮಾಡಿಕೊಂಡು ಸ್ಥಳಗಳನ್ನು ಪರಿಶೀಲನೆ ನಡೆಸಿತು. ಅವೈಜ್ಞಾನಿಕ ಮತ್ತು ಕಳಪೆ ಡ್ರೈನೇಜ್, ಚರಂಡಿ, ರಸ್ತೆ, ಫುಟ್‍ಪಾತ್ ಕಾಮಗಾರಿಗಳನ್ನು ಗುರುತಿಸಿದೆ. ಹಲವೆಡೆ ಫುಟ್‍ಪಾತ್, ರಸ್ತೆಯ ಕಾಮಗಾರಿಳು ಅಪೂರ್ಣಗೊಂಡಿರುವುದು ಹಾಗೂ ಈಗಾಗಲೇ ದುರಸ್ತಿಯಲ್ಲಿದ್ದು ಸರಿಯಾದ ನಿರ್ವಹಣೆ ಮಾಡದೇ ಇರುವುದನ್ನು ಗಮನಿಸಿದೆ.

ಸದರಿ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಗಳಿಂದ (Unscientific and poor work) ಮಳೆ ಸಂದರ್ಭದಲ್ಲಿ ನೀರು ನಿಂತು ಹಲವಾರು ಬಡಾವಣೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಕಂಡು ಬಂದಿದ್ದು, ಸ್ಮಾರ್ಟ್‍ಸಿಟಿ ಯೋಜನೆ ಇಂಜಿನಿಯರ್‍ರವರಿಗೆ ಈ ಕಾಮಗಾರಿಗಳನ್ನು ಪುನರ್ ಪರಿಶೀಲಿಸಿ ಕಾಮಗಾರಿಗಳ ಪೂರ್ಣ ಮಾಹಿತಿಯನ್ನು ನೀಡುವಂತೆ ಪೊಲೀಸ್ ಅಧೀಕ್ಷಕರು ಸೂಚನೆ ನೀಡಿರುತ್ತಾರೆ.

ವಿಶ್ವ ಯೋಗ ದಿನಾಚರಣೆ - world yoga day Previous post ಯೋಗಾಭ್ಯಾಸದಿಂದ ಮನಸ್ಸು-ದೇಹಾರೋಗ್ಯಕ್ಕೆ ಹಿತ
Dangerous circle of Shimoga city! Shivasharane Akkamahadevi Circle : Savalanga Road ಶಿವಮೊಗ್ಗ ನಗರದ ಅಪಾಯಕಾರಿ ಸರ್ಕಲ್..! ಶಿವಶರಣೆ ಅಕ್ಕಮಹಾದೇವಿ ವೃತ್ತ : ಸವಳಂಗ ರಸ್ತೆ ವರದಿ : ಬಿ. ರೇಣುಕೇಶ್ b.renukesha Next post ಶಿವಮೊಗ್ಗ ನಗರದ ಅಪಾಯಕಾರಿ ಸರ್ಕಲ್..!