Action to provide mid day meal to government school children: Shimoga GIP CEO promises ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ ಕಲ್ಪಿಸಲು ಕ್ರಮ : ಶಿವಮೊಗ್ಗ ಜಿಪಂ ಸಿಇಓ ಭರವಸೆ

ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ ಕಲ್ಪಿಸಲು ಕ್ರಮ : ಶಿವಮೊಗ್ಗ ಜಿಪಂ ಸಿಇಓ ಭರವಸೆ

ಶಿವಮೊಗ್ಗ (shivamogga), ಜೂ. 26: ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿರುವ ಮೌಲಾನಾ ಆಜಾದ್ ಮಾದರಿ ಸರ್ಕಾರಿ ಶಾಲೆ (maulana azad model school) ಮಕ್ಕಳಿಗೆ, ಬಿಸಿಯೂಟ (mid day meal) ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ (zp) ಮುಖ್ಯ ಕಾರ್ಯನಿರ್ವಹಣಾಧಿಕಾರಿ (ceo) ಸ್ನೇಹಲ್ ಸುಧಾಕರ್ ಲೋಖಂಡೆ ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಸದರಿ ಶಾಲೆ ಕಾರ್ಯನಿರ್ವಹಣೆ ಮಾಡುತ್ತಿದೆ. ಸೋಮಿನಕೊಪ್ಪ ಬಡಾವಣೆಯಲ್ಲಿ ಸ್ವಂತ ಕಟ್ಟಡದಲ್ಲಿ ಕಳೆದ ವರ್ಷದಿಂದ ಶಾಲೆ ಪ್ರಾರಂಭವಾಗಿದೆ. 6 ರಿಂದ 10 ನೇ ತರಗತಿಯವರೆಗೆ 100 ಕ್ಕೂ ಅಧಿಕ ಮಕ್ಕಳು (childrens) ಅಭ್ಯಾಸ ಮಾಡುತ್ತಿದ್ದಾರೆ.

ಆದರೆ ಇಲ್ಲಿಯವರೆಗೂ ಶಾಲೆಯಲ್ಲಿನ ಮಕ್ಕಳಿಗೆ ಬಿಸಿಯೂಟ ಸೇರಿದಂತೆ, ಇತರೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಲಭ್ಯವಾಗುವ ಕೆಲ ಸೌಲಭ್ಯಗಳಿಂದ ವಂಚಿತವಾಗುವಂತಾಗಿದೆ. ಸದರಿ ಶಾಲೆ ಮಕ್ಕಳಿಗೂ ಬಿಸಿಯೂಟ, ಹಾಲು, ಬಾಳೆಹಣ್ಣು ವಿತರಣೆ ಆರಂಭಿಸಬೇಕೆಂಬ ಆಗ್ರಹ ಪೋಷಕರಿಂದ ಕೇಳಿಬಂದಿತ್ತು.

ಈ ಸಂಬಂಧ ಬುಧವಾರ ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಸದರಿ ಶಾಲೆ ಮಕ್ಕಳಿಗೆ ಬಿಸಿಯೂಟ ಆರಂಭಕ್ಕೆ ಸಂಬಂಧಿಸಿದಂತೆ, ಈಗಾಗಲೇ ತಾವು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಸೂಚನೆ ನೀಡಿದ್ದೆನೆ. ಇಷ್ಟರಲ್ಲಿಯೇ ಮಕ್ಕಳಿಗೆ ಬಿಸಿಯೂಟ ಲಭ್ಯವಾಗಲಿದೆ ಎಂದು ಹೇಳಿದ್ಧಾರೆ.

ಹಿಂದಿ ಶಿಕ್ಷಕರ ಅಲಭ್ಯತೆ, ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಮತ್ತೀತರ ಶೈಕ್ಷಣಿಕ ಸೌಲಭ್ಯಗಳಿಂದ ಮಕ್ಕಳು ವಂಚಿತರಾಗಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಸಿಇಓ ಅವರು, ‘ಶಿಕ್ಷಕರ ಕೊರತೆ ಸರಿದೂಗಿಸುವುದರ ಜೊತೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

Continued Lokayukta team's inspection: A surprise visit to Shimoga sub registrar's office! ಮುಂದುವರಿದ ಲೋಕಾಯುಕ್ತ ತಂಡದ ತಪಾಸಣೆ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ Previous post ಮುಂದುವರಿದ ಲೋಕಾಯುಕ್ತ ತಂಡದ ತಪಾಸಣೆ : ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ!
Shimoga: Tunga Reservoir filling! ಶಿವಮೊಗ್ಗ : ತುಂಗಾ ಜಲಾಶಯ ಭರ್ತಿ! tungadam, monsoonrain, Next post ಶಿವಮೊಗ್ಗ : ತುಂಗಾ ಜಲಾಶಯ ಭರ್ತಿ!