Request for Talaguppa-Shirasi-Hubli railway line Appeal for Yesvantpur-Shivamogga Vande Bharat train MP B. Y. Raghavendra consultation with Railway Minister in Delhi ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಕೋರಿಕೆ ಯಶವಂತಪುರ–ಶಿವಮೊಗ್ಗ ವಂದೇ ಭಾರತ್ ರೈಲಿಗೆ ಮನವಿ ದೆಹಲಿಯಲ್ಲಿ ರೈಲ್ವೆ ಸಚಿವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಸಮಾಲೋಚನೆ

ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಕೋರಿಕೆ

ಯಶವಂತಪುರ–ಶಿವಮೊಗ್ಗಕ್ಕೆ ವಂದೇ ಭಾರತ್ ರೈಲಿಗೆ ಮನವಿ

ಶಿವಮೊಗ್ಗ (shivamogga), ಜು. 2: ನವದೆಹಲಿಯಲ್ಲಿ (delhi) ಮಂಗಳವಾರ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ( railway minister ashwini vaishnaw) ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರ (mp b y raghavendra) ಅವರು ಭೇಟಿಯಾಗಿ, ಕ್ಷೇತ್ರ ವ್ಯಾಪ್ತಿಯ ರೈಲ್ವೆ ಯೋಜನೆಗಳ ಅನುಷ್ಠಾನ ಕುರಿತಂತೆ ಮನವಿ ಪತ್ರ ಅರ್ಪಿಸಿದರು.

ತಾಳಗುಪ್ಪ-ಶಿರಸಿ-ತಡಸ-ಹುಬ್ಬಳ್ಳಿ ರೈಲ್ವೆ ಮಾರ್ಗ (talaguppa-sirasi-hubblli railway line) ನಿರ್ಮಾಣಕ್ಕೆ ರೈಲ್ವೆ ಮಂಡಳಿ ಅನುಮತಿ ನೀಡಿದ್ದು, ಈಗಾಗಲೇ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ ಮಂಡಳಿಗೆ ವರದಿ ಸಲ್ಲಿಸಿದೆ. ಸದರಿ ಮಾರ್ಗವು ಮಲೆನಾಡು ಹಾಗೂ ಉತ್ತರ ಕರ್ನಾಟಕ ರೈಲ್ವೆ ಸಂಪರ್ಕಕ್ಕೆ ಸಹಾಯಕವಾಗಲಿದೆ. ಮುಂಬರುವ ಕೇಂದ್ರ ಬಜೆಟ್ ನಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.

ಶಿವಮೊಗ್ಗ – ಬೀರೂರು (shimoga – biruru) ನಡುವಿನ ಮಾರ್ಗ ಡಬ್ಲಿಂಗ್ ಮಂಜೂರಾಗಿ ನೀಡಲಾಗಿತ್ತು. ಆದರೆ ನಂತರ ರೈಲ್ವೆ ಮಂಡಳಿ ಅದನ್ನು ಸ್ಥಗಿತಗೊಳಿಸಿತ್ತು. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು (shimoga-shikaripura-ranebennuru) ಮಾರ್ಗ ಹಾಗೂ ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣದ ನಂತರ, ಸದರಿ ಮಾರ್ಗದಲ್ಲಿ ರೈಲುಗಳ ಸಂಚಾರ ಹೆಚ್ಚಾಗಲಿದೆ. ಈ ಕಾರಣದಿಂದ ಡಬ್ಲಿಂಗ್ ಯೋಜನೆಗೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

ಯಶವಂತಪುರ – ಶಿವಮೊಗ್ಗ – ಯಶವಂತಪುರ (shimoga-yashavantapura) ನಡುವೆ ವಂದೇ ಭಾರತ್ ರೈಲು (vande baharath rail) ಸಂಚಾರ ಆರಂಭಿಸಬೇಕು. ಈ ರೈಲು ಬೆಳಿಗ್ಗೆ 6 ಕ್ಕೆ ಯಶವಂತಪುರದಿಂದ ಹೊರಟು, 9.15 ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ಆಗಮಿಸುವ ಹಾಗೂ ಶಿವಮೊಗ್ಗದಿಂದ ಮಧ್ಯಾಹ್ನ1 ಕ್ಕೆ ಹೊರಟು 4.15 ಗಂಟೆಗೆ ಯಶವಂತಪುರ ತಲುಪುವ ವೇಳಾಪಟ್ಟಿ ಸಿದ್ದಪಡಿಸಬೇಕು ಎಂದಿದ್ದಾರೆ.

ಭದ್ರಾವತಿ ರೈಲ್ವೆ ನಿಲ್ದಾಣ (bhadravathi railway station) ಹಳೇಯದಾಗಿದೆ. ರೈಲ್ವೆ ನಿಲ್ದಾಣದ ಸರ್ವಾಂಗೀಣ ಅಭಿವೃದ್ದಿಗೊಳಿಸಬೇಕು. ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗ ಕಾಮಗಾರಿ ತ್ವರಿಗೊಳಿಸಬೇಕು. ಈಗಾಗಲೇ ಮೊದಲ ಹಂತದ ಶಿವಮೊಗ್ಗ-ಶಿಕಾರಿಪುರ ಮಾರ್ಗದ ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಬೇಕು. ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಅನುದಾನ ಬಿಡುಗಡೆಗೊಳಿಸಬೇಕು.

ಶಿವಮೊಗ್ಗ-ತಿರುಪತಿ (shimoga – tirupati) ನಡುವೆ ಸಂಚರಿಸುತ್ತಿದ್ದ ರೈಲು ಸಂಚಾರ ಪುನಾರಾರಂಭಿಸಬೇಕು. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಮೈಸೂರು-ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ರೈಲು ನಿಲುಗಡೆ ಮಾಡಬೇಕು. ಶಿವಮೊಗ್ಗದ ಕೋಟೆಂಗೂರು ಬಳಿ ನಡೆಯುತ್ತಿರುವ ಕೋಚಿಂಗ್ ಡಿಪೋ (coaching depo) ಕಾಮಗಾರಿ ತ್ವರಿತಗೊಳಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಶಿವಮೊಗ್ಗ-ಶೃಂಗೇರಿ-ಮಂಗಳೂರು ನಡುವೆ ಹೊಸ ಮಾರ್ಗ ನಿರ್ಮಾಣಕ್ಕೆ ಬಜೆಟ್ ನಲ್ಲಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದರ ಜೊತೆಗೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, ಶಿವಮೊಗ್ಗದಿಂದ ಸಂಚರಿಸುತ್ತಿರುವ ವಿವಿಧ ರೈಲುಗಳ ವೇಳಾಪಟ್ಟಿ ಬದಲಾವಣೆ ಹಾಗೂ ಕೋಚ್ ಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಸಂಬಂಧಿತ ವಿಷಯಗಳ ಕುರಿತಂತೆ ಸಚಿವರಿಗೆ ಬಿ.ವೈ.ರಾಘವೇಂದ್ರ ಅವರು ಮನವಿ ಪತ್ರ ಅರ್ಪಿಸಿದ್ದಾರೆ.

ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ : ಸಿ.ಎಂ.ಸಿದ್ದರಾಮಯ್ಯ cm siddaramaiah Previous post ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ : ಸಿ.ಎಂ.ಸಿದ್ದರಾಮಯ್ಯ
Shimoga Bus Station Circle: Bangalore Majestic model development delayed! ಶಿವಮೊಗ್ಗ ಬಸ್ ನಿಲ್ದಾಣ ಸರ್ಕಲ್ : ಬೆಂಗಳೂರು ಮೆಜೆಸ್ಟಿಕ್ ಮಾದರಿ ಅಭಿವೃದ್ದಿ ನೆನೆಗುದಿಗೆ! ವರದಿ : ಬಿ. ರೇಣುಕೇಶ್ reporter : b.renukesha Next post ಶಿವಮೊಗ್ಗ ಬಸ್ ನಿಲ್ದಾಣ ಸರ್ಕಲ್ : ಬೆಂಗಳೂರು ಮೆಜೆಸ್ಟಿಕ್ ಮಾದರಿ ಅಭಿವೃದ್ದಿ ನೆನೆಗುದಿಗೆ!