Outflow of 41 thousand cusecs from Tunga Dam to Hospet TB Dam! ತುಂಗಾ ಡ್ಯಾಂನಿಂದ 41 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ!

ತುಂಗಾ ಡ್ಯಾಂನಿಂದ ಹೊಸಪೇಟೆ ಟಿಬಿ ಡ್ಯಾಂಗೆ 41 ಸಾವಿರ ಕ್ಯೂಸೆಕ್ ಹೊರಹರಿವು!

ಶಿವಮೊಗ್ಗ (shivamogga), ಜು. 4: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ (monsoon rain) ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ (heavy rainfall). ಈ ನಡುವೆ ತುಂಗಾ ಜಲಾಶಯದ (tunga dam) ಒಳಹರಿವಿನಲ್ಲಿ (inflow) ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ. ಇದರಿಂದ ಡ್ಯಾಂನಿಂದ ಹೊರಬಿಡುತ್ತಿರುವ (out flow) ನೀರಿನ ಪ್ರಮಾಣದಲ್ಲಿಯೂ ಏರಿಕೆಯಾಗಿದೆ.

ಜುಲೈ 4 ರ ಗುರುವಾರ ಮಧ್ಯಾಹ್ನದ ಮಾಹಿತಿಯಂತೆ ಡ್ಯಾಂಗೆ (dam) 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಡ್ಯಾಂನ 21 ಕ್ರಸ್ಟ್ ಗೇಟ್ (crest gates) ಗಳನ್ನು ತೆರೆದು ಹೊರ ಬಿಡಲಾಗುತ್ತಿದೆ ಎಂದು ಡ್ಯಾಂ ವ್ಯಾಪ್ತಿಯ ಕರ್ನಾಟಕ ನೀರಾವತಿ ನಿಗಮದ ಎಇಇ (aee) ತಿಪ್ಪಾನಾಯ್ಕ್ ಅವರು ತಿಳಿಸಿದ್ದಾರೆ.

ಇದರಿಂದ ಶಿವಮೊಗ್ಗ ನಗರದ (shimoga city) ಮೂಲಕ ಹಾದು ಹೋಗಿರುವ ತುಂಗಾ ನದಿಯು (tunga river) ಮೈದುಂಬಿ ಹರಿಯಲಾರಂಭಿಸಿದೆ. ಕೋರ್ಪಳಯ್ಯನ ಛತ್ರದ ಬಳಿಯಿರುವ ಅಪಾಯದ ಮಟ್ಟ (danger level) ಸೂಚಿಸುವ ಮಂಟಪ ಮುಳುಗಲು ಸುಮಾರು ಒಂದು ಅಡಿಯಷ್ಟು ನೀರು ನೀರು ಬೇಕಾಗಿದೆ.

ಏರಿಕೆ: ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ (linganamakki dam) ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಜು. 4 ರ ಬೆಳಿಗ್ಗೆಯ ಮಾಹಿತಿಯಂತೆ, 60,238 ಕ್ಯೂಸೆಕ್ ಒಳಹರಿವಿದೆ. 586 ಕ್ಯೂಸೆಕ್ ಹೊರಹರಿವಿದೆ. ಡ್ಯಾಂನ ನೀರಿನ ಮಟ್ಟ 1760 (ಗರಿಷ್ಠ ಮಟ್ಟ : 1819) ಅಡಿಯಿದೆ.

ಉಳಿದಂತೆ ಭದ್ರಾ ಡ್ಯಾಂನ (bhadra dam) ಒಳಹರಿವು 4908 ಅಡಿಯಿದೆ. 348 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 127 (ಗರಿಷ್ಠ ಮಟ್ಟ : 186) ಅಡಿಯಿದೆ.

ಮಳೆ ವಿವರ : ಜು. 4 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ 15.30 ಮಿಲಿ ಮೀಟರ್ (ಮಿ.ಮೀ.), ಭದ್ರಾವತಿ (bhadravathi) 9 ಮಿ.ಮೀ., ತೀರ್ಥಹಳ್ಳಿ (thirthahalli) 100 ಮಿ.ಮೀ., ಸಾಗರ (sagara) 111 ಮಿ.ಮೀ., ಶಿಕಾರಿಪುರ (shikaripura) 18 ಮಿ.ಮೀ., ಸೊರಬ (soraba) 34 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagara) 100 ಮಿ.ಮೀ. ಮಳೆಯಾಗಿದೆ.

Dangerous National Highway: The administration does not rush to help school children! ಅಪಾಯಕಾರಿ ರಾಷ್ಟ್ರೀಯ ಹೆದ್ದಾರಿ : ಶಾಲಾ ಮಕ್ಕಳ ನೆರವಿಗೆ ಧಾವಿಸದ ಆಡಳಿತ! ವರದಿ : ಬಿ ರೇಣುಕೇಶ್ b.renukesha Previous post ಅಪಾಯಕಾರಿ ರಾಷ್ಟ್ರೀಯ ಹೆದ್ದಾರಿ : ಶಾಲಾ ಮಕ್ಕಳ ನೆರವಿಗೆ ಧಾವಿಸದ ಆಡಳಿತ!
Increase in Bhadra Dam inflow! Continued Monsoon rains in the hills ಭದ್ರಾ ಡ್ಯಾಂ ಒಳಹರಿವಿನಲ್ಲಿ ಏರಿಕೆ! ಮಲೆನಾಡಲ್ಲಿ ಮುಂದುವರಿದ #ತುಂಗಾಡ್ಯಾಂ,ಮುಂಗಾರು ಮಳೆ Next post ಭದ್ರಾ ಡ್ಯಾಂ ಒಳಹರಿವಿನಲ್ಲಿ ಏರಿಕೆ! ಮಲೆನಾಡಲ್ಲಿ ಮುಂದುವರಿದ ಮುಂಗಾರು ಮಳೆ