
ಶಿವಮೊಗ್ಗ ನಗರದಲ್ಲಿ ಸಂಚಾರ ಅಸ್ತವ್ಯಸ್ತ : ಹಲವೆಡೆ ಟ್ರಾಫಿಕ್ ಜಾಮ್!!
ಶಿವಮೊಗ್ಗ, ಫೆ. 27: ಶಿವಮೊಗ್ಗ ನಗರದ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನರು ವಿವಿಧ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ.
ಇದರಿಂದ ಸೋಮವಾರ ಬೆಳಿಗ್ಗೆ ನಗರದ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿದೆ. ಟ್ರಾಫಿಕ್ ಜಾಮ್ ಏರ್ಪಟ್ಟಿದೆ, ಸಮಾವೇಢಶಕ್ಕೆ ತೆರಳುವ ವಾಹನಗಳ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಬಿದ್ದಿರುವುದು ಕಂಡುಬರುತ್ತಿದೆ.
ನ್ಯೂಮಂಡ್ಲಿ ಗೋಪಾಳದ ರಸ್ತೆಯಲ್ಲಿ ಕಿ.ಮೀ. ಉದ್ದದ ವಾಹನ ದಟ್ಟಣೆ ಕಂಡುಬಂದಿತು. ಬೆಳಿಗ್ಗೆ ವಿವಿಧ ಕೆಲಸಕಾರ್ಯಗಳಿಗೆ ತೆರಳುವವರು ಟ್ರಾಫಿಕ್ ಜಾಮ್ ಗಳಲ್ಲಿ ಸಿಲುಕಿ ತೀವ್ರ ಸಂಕಷ್ಟ ಪಡುವಂತಾಗಿದೆ.