
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಆಗ್ರಹಿಸಿ ನಿವಾಸಿಗಳಿಂದ ಮನವಿ
ಶಿವಮೊಗ್ಗ (shivamogga), ಜು. 6: ಗ್ರಾಮ ಪಂಚಾಯ್ತಿ (grama panchayat) ಅಧೀನದಲ್ಲಿರುವ ತಮ್ಮ ಬಡಾವಣೆಯನ್ನು ನಿಯಮಾನುಸಾರ ಮಹಾನಗರ ಪಾಲಿಕೆ (city corporation) ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ, ನಗರದ ಹೊರವಲಯ ಸಾಗರ ರಸ್ತೆಯಲ್ಲಿರುವ (sagara road) ಶಕ್ತಿಧಾಮ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘವು (shaktidhama residents’ welfare association) ಮಹಾನಗರ ಪಾಲಿಕೆ ಆಡಳಿತಕ್ಕೆ ಮನವಿ ಪತ್ರ ಅರ್ಪಿಸಿದೆ.
ಶಕ್ತಿಧಾಮ ಲೇಔಟ್ (shaktidhama layout) ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ (muddinakoppa gram panchayat) ಆಡಳಿತದ ಅಧೀನದಲ್ಲಿದೆ. ಸದರಿ ಬಡಾವಣೆಯಲ್ಲಿ ಈಗಾಗಲೇ 200 ಕ್ಕೂ ಅಧಿಕ ಮನೆಗಳ ನಿರ್ಮಾಣ ಮಾಡಲಾಗಿದೆ. ದಿನದಿಂದ ದಿನಕ್ಕೆ ಬಡಾವಣೆ ಅಭಿವೃದ್ದಿಯಾಗುತ್ತಿದೆ. ಹೊಸ ಹೊಸ ಮನೆಗಳ (houses) ನಿರ್ಮಾಣವಾಗುತ್ತಿದೆ.
ಈ ಕಾರಣದಿಂದ ಬಡಾವಣೆಗೆ ಸಮರ್ಪಕ ಮೂಲಸೌಕರ್ಯ (infrastructure) ಲಭ್ಯತೆ ಹಾಗೂ ನಿವಾಸಿಗಳ ಅನುಕೂಲಕ್ಕಾಗಿ, ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ಬಡಾವಣೆಯನ್ನು ನಿಯಮಾನುಸಾರ (as per the rules) ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು. ಈ ಮೂಲಕ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ನಿವಾಸಿಗಳು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಹೆಚ್ಚುತ್ತಿರುವ ಬೇಡಿಕೆ : ಸರಿಸುಮಾರು 27 ವರ್ಷಗಳಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ (shimoga corporation) ಪರಿಷ್ಕರಣೆಯಾಗಿಲ್ಲ. ಸದ್ಯ ನಗರದ ಹೊರವಲಯದ ಪ್ರದೇಶಗಳಲ್ಲಿ ಬೃಹತ್ ಬಡಾವಣೆಗಳು ಅಭಿವೃದ್ದಿಯಾಗಿವೆ. ಆದರೆ ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಮೂಲಸೌಕರ್ಯ ಕಲ್ಪಿಸಲು ಆಗುತ್ತಿಲ್ಲ.
ಇದರಿಂದ ನಾಗರೀಕರು (citizens) ತೀವ್ರ ತೊಂದರೆ ಎದುರಿಸುವಂತಾಗಿದೆ. ಈ ಕಾರಣದಿಂದ ವೈಜ್ಞಾನಿಕ ರೀತಿಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕೆಂಬ ಬೇಡಿಕೆಗಳು ಹೊರವಲಯದ ಪ್ರದೇಶದ ಬಡಾವಣೆಗಳ ನಾಗರೀಕರಿಂದ ಕೇಳಿಬರಲಾರಂಭಿಸಿದೆ.