ಸಮಾವೇಶ ಸ್ಥಳದಲ್ಲಿ ಮೊಬೈಲ್ ಪೋನ್ ಇಂಟರ್ನೆಟ್ ಸೇವೆ ಅಸ್ತವ್ಯಸ್ತ!

ಶಿವಮೊಗ್ಗ ನಗರದ ವಿಮಾನ ನಿಲ್ದಾಣ ಆವರಣದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಸಾವಿರಾರು ಜನ ಭಾಗವಹಿಸಿದ್ದಾರೆ. ಆದರೆ ಸಮಾವೇಶ ಸ್ಥಳದ ಬಳಿ ಮೊಬೈಲ್ ಫೋನ್ ಸಂಪರ್ಕ ಹಾಗೂ ಇಂಟರ್ನೆಟ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದರಿಂದ ಹಲವು ನಾಗರೀಕರು ಪರದಾಡುವಂತಾಗಿದೆ!
ಸಮಾವೇಶ ಸ್ಥಳದ ಆವರಣದಲ್ಲಿ ಮೊಬೈಲ್ ಪೋನ್ ಸಿಗ್ನಲ್ ದೊರಕುತ್ತಿದೆಯಾದರೂ ಸಮರ್ಪಕವಾಗಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಜೊತೆಗೆ ಇಂಟರ್ನೆಟ್ ಆಧಾರಿತ ಆನ್’ಲೈನ್ ಕೆಲಸಕಾರ್ಯ ಕಷ್ಟಕರವಾಗುತ್ತಿದೆ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಕೆಲ ನಾಗರೀಕರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳ ಮೂಲಕ ಫೋಟೋ, ವೀಡಿಯೋಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಹಲವರು ದೂರಿದ್ದಾರೆ.
ಸಾವಿರಾರು ಜನ ಆಗಮಿಸಿರುವ ಕಾರಣದಿಂದ ಮೊಬೈಲ್ ಫೋನ್ ಸೇವೆಗಳು ಅಸ್ತವ್ಯಸ್ತವಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Previous post ಶಿವಮೊಗ್ಗ ನಗರದಲ್ಲಿ ಸಂಚಾರ ಅಸ್ತವ್ಯಸ್ತ : ಹಲವೆಡೆ ಟ್ರಾಫಿಕ್ ಜಾಮ್!!
Next post ಶಿವಮೊಗ್ಗ ಜಿಲ್ಲೆಯನ್ನು ಹಾಡಿ ಹೊಗಳಿದ ನರೇಂದ್ರ ಮೋದಿ!