Joga : Enjoyment of water flow : Flowing waterfall! ಜೋಗ : ಜಲಧಾರೆಯ ವೈಭೋಗ : ಮೈದುಂಬಿ ಹರಿಯುತ್ತಿರುವ ಜಲಪಾತ

ಜೋಗ : ಜಲಧಾರೆಯ ವೈಭೋಗ – ಮೈದುಂಬಿ ಹರಿಯುತ್ತಿರುವ ಜಲಪಾತ!

ಜೋಗಫಾಲ್ಸ್, ಜು. 8: ಮುಂಗಾರು ಮಳೆ (monsoon rain) ಮಲೆನಾಡಿಗೆ ಹೊಸ ಕಳೆ ತಂದಿದೆ. ಸುಡು ಬಿಸಿಲಿಗೆ ಬತ್ತಿ ಹೋಗಿದ್ದ ನದಿ, ತೊರೆ, ಕೆರೆಕಟ್ಟೆಗಳಿಗೆ ಜೀವಕಳೆ ಬಂದಿದೆ. ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅದರಲ್ಲಿಯೂ ವಿಶ್ವವಿಖ್ಯಾತ ಜೋಗ ಜಲಪಾತ (jogfalls) ಜಲಧಾರೆಯಿಂದ ಧುಮ್ಮಿಕ್ಕಿ ಹರಿಯಲಾರಂಭಿಸಿದೆ. ಮತ್ತೆ ಭೋರ್ಗರೆಯಲಾರಂಭಿಸಿದೆ.

ಶರಾವತಿ ಕಣಿವೆ (sharavathi valley) ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ (heavy rainfall). ಇದರಿಂದ ಜೋಗ ಜಲಪಾತ (jogfalls) ಮತ್ತೆ ಹಳೇಯ ವೈಭವಕ್ಕೆ ಮರಳಲಾರಂಭಿಸಿದೆ. ‘ಇರುವುದರೊಳಗೆ ಒಮ್ಮೆ ನೋಡು ಜೋಗದ ಗುಂಡಿ…’ ಎಂಬ ಕವಿವಾಣಿ ಪ್ರಸ್ತುತ ಅಕ್ಷರಶಃ ಸತ್ಯವಾಗಿದೆ!

ಜಲಧಾರೆಯ ವೈಭೋಗವು ಪ್ರವಾಸಿಗರ (tourists) ಕಣ್ಮನ ಸೆಳೆಯುತ್ತಿದೆ. ಕ್ಷೀರ ಸಾಗರದಂತೆ ಬೀಳುವ ಜಲಧಾರೆ, ಸುತ್ತಲಿನ ಹಸಿರು, ಆಗಾಗ್ಗೆ ಜಲಪಾತ (falls) ಮುಚ್ಚಿಕೊಳ್ಳುವ ಇಬ್ಬನಿ, ಇದರ ಜೋತೆ ಮಳೆಯ ಹನಿ ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತಿದೆ.

ಆಗಾಗ್ಗೆ ಬೀಳುವ ಮಳೆ, ಮಂಜು ಮುಸುಕಿದ ವಾತಾವರಣ, ಹಚ್ಚ ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೊಬಗು  ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಜೋಗದ ಜಲಧಾರೆಯ ವೈಭೋಗ ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದೆಲ್ಲದರ ನಡುವೆ ಜೋಗ ಜಲಪಾತದ ಬಳಿ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ.

Young woman's disappearance - murder case: Ainati killer who was running with the police..! ಯುವತಿಯ ನಾಪತ್ತೆ – ಹತ್ಯೆ ಪ್ರಕರಣ : ಪೊಲೀಸರ ಜೊತೆಗೆ ಓಡಾಡಿಕೊಂಡಿದ್ದ ಐನಾತಿ ಹಂತಕ..! thirthahalli agumbe ತೀರ್ಥಹಳ್ಳಿ ಆಗುಂಬೆ ವರದಿ : ಬಿ. ರೇಣುಕೇಶ್ reporter - b renukesha Previous post ಯುವತಿಯ ನಾಪತ್ತೆ – ಹತ್ಯೆ ಪ್ರಕರಣ : ಪೊಲೀಸರ ಜೊತೆಗೆ ಓಡಾಡಿಕೊಂಡಿದ್ದ ಐನಾತಿ ಹಂತಕ..!
Shimoga: Massive protest by women staff of Swachhata Vahini in the rain! ಶಿವಮೊಗ್ಗ : ಮಳೆಯಲ್ಲಿಯೇ ಸ್ವಚ್ಚತಾ ವಾಹಿನಿ ಮಹಿಳಾ ಸಿಬ್ಬಂದಿಗಳಿಂದ ಬೃಹತ್ ಪ್ರತಿಭಟನೆ! Next post ಶಿವಮೊಗ್ಗ : ಮಳೆಯಲ್ಲಿಯೇ ಸ್ವಚ್ಚತಾ ವಾಹಿನಿ ಮಹಿಳಾ ಸಿಬ್ಬಂದಿಗಳಿಂದ ಬೃಹತ್ ಪ್ರತಿಭಟನೆ!