shimoga palike commissioner dr kavitha yogappanavar Hidden people-friendly administration in Shimoga Corporation: Focus on the new commissioner? ಶಿವಮೊಗ್ಗ ಪಾಲಿಕೆಯಲ್ಲಿ ಮರೆಯಾದ ಜನಸ್ನೇಹಿ ಆಡಳಿತ : ಗಮನಹರಿಸುವರೆ ನೂತನ ಆಯುಕ್ತರು? ವರದಿ : ಬಿ. ರೇಣುಕೇಶ್ reporter - b.renukesha

ಶಿವಮೊಗ್ಗ ಪಾಲಿಕೆಯಲ್ಲಿ ಮರೆಯಾದ ಜನಸ್ನೇಹಿ ಆಡಳಿತ : ಗಮನಹರಿಸುವರೆ ನೂತನ ಆಯುಕ್ತರು?

ಶಿವಮೊಗ್ಗ, ಜು. 9: ಕಳೆದ ಕೆಲ ವರ್ಷಗಳ ಹಿಂದೆ, ಶಿವಮೊಗ್ಗ ಪಾಲಿಕೆಯಲ್ಲಿ (shimoga city corporation) ಕಾರ್ಯಗತಗೊಳಿಸಿದ್ದ ಜನಸ್ನೇಹಿ ಕಾರ್ಯಕ್ರಮಗಳು ಇಡೀ ರಾಜ್ಯದ ಗಮನ ಸೆಳೆದಿತ್ತು. ನಗರಾಭಿವೃದ್ದಿ, ಪೌರಾಡಳಿತ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಸಚಿವರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಕಾರಣದಿಂದ ಶಿವಮೊಗ್ಗವೂ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಸ್ಮಾರ್ಟ್ ಸಿಟಿ’ (smart city) ಯೋಜನೆಗೂ ಆಯ್ಕೆಯಾಗುವಂತಾಗಿತ್ತು.

ಆದರೆ ಪ್ರಸ್ತುತ ಪಾಲಿಕೆಯಲ್ಲಿ (palike), ಜನಸ್ನೇಹಿ (people friendly) ಕಾರ್ಯಕ್ರಮಗಳು ಅಕ್ಷರಶಃ ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿವೆ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ನಾಗರೀಕರು ಪಾಲಿಕೆ ಕಚೇರಿಗೆ (palike office) ಅಲೆದಾಡುವಂತಾಗಿದೆ. ಆಡಳಿತ ವ್ಯವಸ್ಥೆ ನಿಸ್ತೇಜವಾಗಿದೆ. ಕ್ರಮೇಣ ಜನರಿಂದಲೇ ಆಡಳಿತ ದೂರವಾಗಲಾರಂಭಿಸಿದೆ!

ವಿನೂತನ ಕಾರ್ಯಕ್ರಮಗಳು : ಎ.ಆರ್.ರವಿ (a r ravi) ಅವರು ಪಾಲಿಕೆ ಆಯುಕ್ತರಾಗಿದ್ದಾಗ (corporation commissioner) ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತಂದಿದ್ದರು. ಹಲವು ಜನಸ್ನೇಹಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದ್ದರು. ನಾಗರೀಕರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುವ ನಿಟ್ಟಿನಲ್ಲಿ, ಜನರು ಮನೆಯಲ್ಲಿಯೇ ಕುಳಿತು ಪಾಲಿಕೆ ಸೇವೆ ಪಡೆಯುವ ವ್ಯವಸ್ಥೆ ಕಾರ್ಯಗೊಳಿಸಿದ್ದರು.

ಮೂಲಸೌಕರ್ಯ ಸಮಸ್ಯೆಗಳ (Infrastructure issues) ಪರಿಹಾರಕ್ಕೆ ಪ್ರತ್ಯೇಕ ಸಹಾಯವಾಣಿ ಕೇಂದ್ರ (helpline center) ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳ (social media) ಮೂಲಕವೂ ಸಮಸ್ಯೆಗಳ ಕುರಿತಂತೆ ದೂರು ದಾಖಲಿಸುವ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಕಡತ ವಿಲೇವಾರಿಗೆ (file disposal) ಚುರುಕು ನೀಡಿದ್ದರು. ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದರು.

ಹಾಗೆಯೇ ಚಾರುಲತಾ ಸೋಮಲ್ (charulata somal) ಅವರು ಆಯುಕ್ತರಾಗಿದ್ದಾಗ, ಆಡಳಿತದಲ್ಲಿ (In administration) ಹೊಸ ಸಂಚಲನ ಮೂಡಿಸಿದ್ದರು. ಜನಪರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಾಲಿಕೆ ಆಸ್ತಿ ಒತ್ತುವರಿಗೆ ತೆರವಿಗೆ ಖಡಕ್ ಕ್ರಮಕೈಗೊಂಡಿದ್ದರು. ಪ್ರಭಾವಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸಿದ್ದರು.

ನಗರದ ಪ್ರತಿಯೊಂದು ವಾರ್ಡ್ ಗಳಿಗೂ (wards) ಖುದ್ದು ಭೇಟಿಯಿತ್ತು ನಾಗರೀಕರ ಅಹವಾಲು ( public grievance) ಆಲಿಸುತ್ತಿದ್ದರು. ಪಾಲಿಕೆಯಲ್ಲಿನ ಕೆಲ ಅಕ್ರಮಗಳನ್ನು (illegal) ಬಯಲಿಗೆಳೆದಿದ್ದರು. ಜನರ ಕೆಲಸ ಮರೆತ್ತಿದ್ದ ಅಧಿಕಾರಿ – ಸಿಬ್ಬಂದಿಗಳ ನಿದ್ದೆಗೆಡುವಂತೆ ಮಾಡಿದ್ದರು. ಹಾಗೆಯೇ ಮುಲ್ಲೈ ಮುಯಿಲನ್ ಮೊದಲಾದ ಆಯುಕ್ತರು ದಕ್ಷ ಕಾರ್ಯನಿರ್ವಹಣೆ ಮೂಲಕ ಗಮನ ಸೆಳೆದಿದ್ದರು.

ಮೂಲೆಗುಂಪು : ಆದರೆ ಸದ್ಯದ ಪಾಲಿಕೆಯ ಸ್ಥಿತಿಗತಿ ಗಮನಿಸಿದರೆ ಜನಪರ ಆಡಳಿತ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ. ನಾಗರೀಕರ ಅಹವಾಲು ಆಲಿಸುವ ಯಾವುದೇ ವ್ಯವಸ್ಥೆಯಿಲ್ಲವಾಗಿದೆ. ಆಡಳಿತ ನಾಗರೀಕರ ಮನೆ ಬಾಗಿಲಿಗೆ ಬರುವುದಿರಲಿ, ನಾಗರೀಕರೇ ಪಾಲಿಕೆಗೆ ಎಡತಾಕಿದರೂ ಸುಲಲಿತವಾಗಿ ಸೇವೆ ಪಡೆಯಲು ಸಾಧ್ಯವಾಗದಂತಹ ದುಃಸ್ಥಿತಿಯಿದೆ.

ಗಮನಹರಿಸಲಿ : ಪಾಲಿಕೆಯ ನೂತನ ಆಯುಕ್ತರಾಗಿ ಯುವ ಕೆ.ಎ.ಎಸ್ ಅಧಿಕಾರಿ ಡಾ. ಕವಿತಾ ಯೋಗಪ್ಪನವರ್ (kas officer Dr kavitha yogappanavar) ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಅವರು ಪಾಲಿಕೆಯಲ್ಲಿ ಉಪ ಆಯುಕ್ತರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಜೊತೆಗೆ ಸೊರಬ ತಾಲೂಕಿನ ತಹಶೀಲ್ದಾರ್ ಆಗಿಯೂ ಸೇವೆ ಸಲ್ಲಿಸಿದ್ದರು.

ನೂತನ ಆಯುಕ್ತರು ಪಾಲಿಕೆ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ. ಆಡಳಿತವನ್ನು ಜನಸ್ನೇಹಿಯಾಗಿ ರೂಪಿಸಬೇಕಾಗಿದೆ. ನಾಗರೀಕರ ಕೆಲಸಕಾರ್ಯ ಮಾಡಿಕೊಡಲು ಸತಾಯಿಸುವ ಅಧಿಕಾರಿ – ಸಿಬ್ಬಂದಿಗಳ ವಿರುದ್ದ ಚಾಟಿ ಬೀಸಬೇಕಾಗಿದೆ. ವಾರ್ಡ್ ಗಳಲ್ಲಿನ ಸಮಸ್ಯೆಗಳನ್ನು ಖುದ್ದು ಅವಲೋಕಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಮನವಿ ಮಾಡುತ್ತಾರೆ.

  • ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಕೇಂದ್ರ ಆರಂಭಿಸಬೇಕು
  • ವಾರ್ಡ್ ಗಳಿಗೆ ಆಯುಕ್ತರು ಖುದ್ದು ಭೇಟಿಯಿತ್ತು ಪರಿಶೀಲಿಸಬೇಕು
  • ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರು ಅಹವಾಲು ತೋಡಿಕೊಳ್ಳುವ ವ್ಯವಸ್ಥೆ ಆರಂಭಿಸಬೇಕು
  • ಕಡತಗಳ ವಿಲೇವಾರಿಗೆ ವೇಗ ನೀಡಬೇಕು
  • ನಗರದ ವಿವಿಧೆಡೆ ಪಾಲಿಕೆಯ ಉಪ ಕಚೇರಿ ತೆರೆಯಲು ಕ್ರಮಕೈಗೊಳ್ಳಬೇಕು
  • ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಮಾಡಿ ಗ್ರಾಪಂ ಅಧೀನದ ಬಡಾವಣೆಗಳ ಸೇರ್ಪಡೆಗೆ ಕ್ರಮಕೈಗೊಳ್ಳಬೇಕು
  • ಪಾಲಿಕೆ ಆಸ್ತಿ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು
  • ಕಟ್ಟಡ ನಿರ್ಮಾಣದ ವೇಳೆ ಸೆಟ್ ಬ್ಯಾಕ್ ನಿಯಮ ಉಲ್ಲಂಘನೆ ತಡೆಗೆ ಕ್ರಮವಾಗಬೇಕು
  • ಪಾಲಿಕೆಯಲ್ಲಿನ ಅಕ್ರಮ, ಅವ್ಯವಹಾರಗಳಿಗೆ ಕಡಿವಾಣಕ್ಕೆ ವ್ಯವಸ್ಥೆ ಮಾಡಬೇಕು
  • ವಾರ್ಡ್ ಗಳಲ್ಲಿಯೇ ಜನ ಸ್ಪಂದನ ಕಾರ್ಯಕ್ರಮ ಆಯೋಜಿಸಬೇಕು
  • ಬೀದಿ ದೀಪ, ಸ್ವಚ್ಚತೆ ಸೇರಿದಂತೆ ಮೂಲಸೌಕರ್ಯಗಳ ಪರಿಣಾಮಕಾರಿ ನಿರ್ವಹಣೆಯತ್ತ ಚಿತ್ತ ಹರಿಸಬೇಕು
  • ಕಂದಾಯ ವಿಭಾಗದಲ್ಲಿ ನಾಗರೀಕರಿಗೆ ಆಗುತ್ತಿರುವ ವಿಳಂಬ ತಪ್ಪಿಸಬೇಕು
  • ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು
  • ಕಾಮಗಾರಿಗಳಲ್ಲಿ ವಿಳಂಬಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಬೇಕು

*** ‘ನಾಗರೀಕರ ಸಮಸ್ಯೆಗಳ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳುವಂತೆ ಅಧಿಕಾರಿ – ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ತಾವು ಕೂಡ ವಾರ್ಡ್ ಗಳಿಗೆ ಭೇಟಿಯಿತ್ತು ಖುದ್ದಾಗಿ ಸಮಸ್ಯೆಗಳ ಅವಲೋಕನಕ್ಕೆ ಕ್ರಮಕೈಗೊಂಡಿದ್ದೆನೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ (shimoga palike commissioner dr kavitha yogappanavar) ತಿಳಿಸಿದ್ದಾರೆ. ಮಂಗಳವಾರ ಪಾಲಿಕೆ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಸ್ತುತ ಮಳೆಗಾಲದ ವೇಳೆ ನಾಗರೀಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಪ್ರತ್ಯೇಕ ಸಹಾಯವಾಣಿ ಕೇಂದ್ರ ಕೂಡ ತೆರೆಯಲಾಗಿದೆ. ಡೆಂಗ್ಯೂ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ಪಾಲಿಕೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಡಾ. ಕವಿತಾ ಯೋಗಪ್ಪನವರ್ ಅವರು ಸ್ಪಷ್ಟಪಡಿಸಿದ್ದಾರೆ.

Knife attack on the police who came to arrest : Rowdy sheeter shot in the leg! ಬಂಧಿಸಲು ಆಗಮಿಸಿದ ಪೊಲೀಸರ ಮೇಲೆ ಚಾಕುವಿನಿಂದ ದಾಳಿ : ರೌಡಿ ಶೀಟರ್ ಕಾಲಿಗೆ ಗುಂಡೇಟು! Previous post ಶಿವಮೊಗ್ಗ – ಪೊಲೀಸರ ಮೇಲೆ ಚಾಕುವಿನಿಂದ ದಾಳಿ : ರೌಡಿ ಶೀಟರ್ ಕಾಲಿಗೆ ಗುಂಡೇಟು!
Bhadravati : Theft case - two arrested! ಭದ್ರಾವತಿ : ಕಳ್ಳತನ ಪ್ರಕರಣ – ಇಬ್ಬರ ಬಂಧನ! Next post ಭದ್ರಾವತಿ : ಕಳ್ಳತನ ಪ್ರಕರಣ – ಇಬ್ಬರ ಬಂಧನ!