Shimoga - The theft of a bike parked in front of the house: The act was caught on the CC camera! ಶಿವಮೊಗ್ಗ - ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವು : ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕೃತ್ಯ!

ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವು : ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕೃತ್ಯ!

ಶಿವಮೊಗ್ಗ (shivamogga), ಜು. 10: ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಬೈಕ್ (bike) ವೊಂದನ್ನು ಕಳ್ಳನೋರ್ವ ನಕಲಿ ಕೀ ಬಳಸಿ ಕೊಂಡೊಯ್ದ ಘಟನೆ ಶಿವಮೊಗ್ಗ ನಗರದ ಬಸ್ ನಿಲ್ದಾಣ (bus stand) ಸಮೀಪದ ಜಿ ಎಸ್ ಕೆ ಎಂ ರಸ್ತೆಯ (gskm road) ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ (pwd quarters) ಜುಲೈ 10 ರ ಬುಧವಾರ ಬೆಳಿಗ್ಗೆ ನಡೆದಿದೆ.

ಕಳುವಾದ ಬೈಕ್ ಕುಮಾರಸ್ವಾಮಿ ರಾಮಚಂದ್ರ ಎಂಬುವರಿಗೆ ಸೇರಿದ್ದಾಗಿದೆ. ಸದರಿ ಕಳ್ಳತನ ಕೃತ್ಯವು (The act of theft) ಮನೆಯ ಮುಂಭಾಗ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ (cc cameras) ಸೆರೆಯಾಗಿದೆ.

ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ನು (splendar plus bike) ಕಳವು ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ (doddapete police station) ದೂರು ನೀಡಿದ್ದೆನೆ ಎಂದು ಕುಮಾರಸ್ವಾಮಿ ರಾಮಚಂದ್ರ ಅವರು ತಿಳಿಸಿದ್ದಾರೆ.

ಮುಂಜಾನೆ ಸರಿಸಮಾರು 4 ಗಂಟೆ ವೇಳೆಗೆ ಕುಮಾರಸ್ವಾಮಿ ರಾಮಚಂದ್ರ ಅವರ ಮನೆ ಬಳಿ  ಜೀನ್ಸ್ ಪ್ಯಾಂಟ್ (jeans pant) ಹಾಗೂ ಟೀ ಶರ್ಟ್ (t shirt) ಧರಿಸಿದ್ದ ಕಳ್ಳ (thief) ಆಗಮಿಸಿದ್ದು, ಕ್ಷಣ ಮಾತ್ರದಲ್ಲಿಯೇ ನಕಲಿ ಕೀ ಬಳಸಿ (use a duplicate key) ಬೈಕ್ ನ ಹ್ಯಾಂಡ್ ಲಾಕ್ (hand lock) ತೆರೆದಿದ್ದಾನೆ. ನಂತರ ಶಬ್ದವಾಗದಂತೆ ಸ್ವಲ್ಪ ದೂರದವರೆಗೆ ಬೈಕ್ ತಳ್ಳಿಕೊಂಡು ಹೋಗಿದ ಕಳ್ಳ, ನಂತರ ಬೈಕ್ ಆನ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ಕುಮಾರಸ್ವಾಮಿ ರಾಮಚಂದ್ರ ಅವರು ಬೆಳಿಗ್ಗೆ ಎದ್ದು ಮನೆ ಹೊರಭಾಗ ಆಗಮಿಸಿದಾಗ ಬೈಕ್ ಇಲ್ಲದಿರುವುದು ಗೊತ್ತಾಗಿದೆ. ನಂತರ ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿ (cc camera footage) ವೀಕ್ಷಿಸಿದಾಗ ಬೈಕ್ ಕಳುವಾಗಿರುವುದು (bike stolen) ಬೆಳಕಿಗೆ ಬಂದಿದೆ.

Bhadravati : Theft case - two arrested! ಭದ್ರಾವತಿ : ಕಳ್ಳತನ ಪ್ರಕರಣ – ಇಬ್ಬರ ಬಂಧನ! Previous post ಭದ್ರಾವತಿ : ಕಳ್ಳತನ ಪ್ರಕರಣ – ಇಬ್ಬರ ಬಂಧನ!
traffic chaos on Kuvempu road in Shimoga city! ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಟ್ರಾಫಿಕ್ ಅವ್ಯವಸ್ಥೆ! ವರದಿ : ಬಿ. ರೇಣುಕೇಶ್ reporter - b.renukesha Next post ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಟ್ರಾಫಿಕ್ ಅವ್ಯವಸ್ಥೆ!