
ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಟ್ರಾಫಿಕ್ ಅವ್ಯವಸ್ಥೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 10 : ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ (kuvempu road), ದಿನದಿಂದ ದಿನಕ್ಕೆ ಸಂಚಾರ ವ್ಯವಸ್ಥೆ (traffic system) ಅವ್ಯವಸ್ಥೆಯ ಆಗರವಾಗಿ ಪರಿಣಮಿಸುತ್ತಿದೆ. ಇದರಿಂದ ನಿರಂತರವಾಗಿ ಟ್ರಾಫಿಕ್ ದಟ್ಟಣೆ (traffic congestion) ಉಂಟಾಗುತ್ತಿದ್ದು, ಸುಗಮ ಜನ – ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಕುವೆಂಪು ರಸ್ತೆಯ ಹಲವು ಕಡೆ ಎಲ್ಲ ರೀತಿಯ ವಾಹನಗಳ ನಿಲುಗಡೆ (no parking zone) ನಿರ್ಬಂಧಿಸಲಾಗಿದೆ. ಆದರೆ ಪಾರ್ಕಿಂಗ್ ನಿರ್ಬಂಧಿತ ಸ್ಥಳಗಳಲ್ಲಿಯೂ ಕಾರು (car) ಮತ್ತೀತರ ವಾಹನಗಳನ್ನು ಯಾವುದೇ ಎಗ್ಗಿಲ್ಲದೆ ನಿಲುಗಡೆ (pariking) ಮಾಡಲಾಗುತ್ತಿದೆ. ರಸ್ತೆಯ ಇಕ್ಕೆಲಗಳ ಫುಟ್ಪಾತ್ ಗಳ (footpath) ಮೇಲೆಯೂ ವಾಹನ ನಿಲ್ಲಿಸುತ್ತಿರುವುದರಿಂದ, ಪಾದಚಾರಿಗಳ (pedestrians) ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ರಸ್ತೆಯಲ್ಲಿಯೇ ನಡೆದುಕೊಂಡು ಹೋಗುವಂತಹ ದುಃಸ್ಥಿತಿಯಿದೆ ಎಂದು ಪಾದಚಾರಿಗಳು ಅಳಲು ತೋಡಿಕೊಳ್ಳುತ್ತಾರೆ.
ಕಿರಿದಾದ ರಸ್ತೆ : ಶಿವಮೊಗ್ಗ ನಗರದಲ್ಲಿ (shimoga city) ಅತ್ಯದಿಕ ಪ್ರಮಾಣದ ಜನ – ವಾಹನ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಕುವೆಂಪು ರಸ್ತೆಯೂ (kuvempu road) ಕೂಡ ಒಂದಾಗಿದೆ. ಸದರಿ ರಸ್ತೆಯಲ್ಲಿ ಪ್ರಮುಖ ಆಸ್ಪತ್ರೆಗಳು (hospitals) ಸೇರಿದಂತೆ ವಾಣಿಜ್ಯ ಕಟ್ಟಡಗಳಿವೆ (commericial buildings). ಹಾಗೆಯೇ ಇತರೆ ಮುಖ್ಯ ರಸ್ತೆಗಳ ಸಂಪರ್ಕ ಕೊಂಡಿಯಾಗಿದೆ.
ಈ ಕಾರಣದಿಂದ ಸದರಿ ರಸ್ತೆಯಲ್ಲಿ ಭಾರೀ ಪ್ರಮಾಣದ ಜನ – ವಾಹನ ದಟ್ಟಣೆಯಿದೆ (People – vehicular traffic). ಕಳೆದ ಒಂದೂವರೆ ದಶಕದ ಹಿಂದೆಯೇ ಸದರಿ ರಸ್ತೆ ಅಗಲೀಕರಣಗೊಳಿಸಬೇಕೆಂಬ (road widen) ಯೋಜನೆ ರೂಪಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ ರಸ್ತೆ ಅಗಲೀಕರಣ ಪ್ರಸ್ತಾಪ ನೆನೆಗುದಿಗೆ ಬಿದ್ದಿತ್ತು. ಇಲ್ಲಿಯವರೆಗೂ ಇತ್ತ ಜನಪ್ರತಿನಿಧಿಗಳಾಗಲಿ (representatives), ಸಂಬಂಧಿಸಿದ ಇಲಾಖೆಯವರಾಗಲಿ ಗಮನಹ ಹರಿಸಿಲ್ಲ.
ಮತ್ತೊಂದೆಡೆ, ಸ್ಮಾರ್ಟ್ ಸಿಟಿ (smart city) ಯೋಜನೆಯಡಿ ಕೋಟ್ಯಾಂತ ರೂ. (crores) ವೆಚ್ಚದಲ್ಲಿ ರಸ್ತೆ ಅಭಿವೃದ್ದಿಗೊಳಿಸಲಾಗಿತ್ತು. ಆದರೆ ಕಾಮಗಾರಿಯ ನಂತರ ಮೊದಲೇ ಕಿರಿದಾಗಿದ್ದ ರಸ್ತೆಯು, ಮತ್ತಷ್ಟು ಕಿರಿದಾಗಿದೆ (is further narrowed). ಇದರಿಂದ ಸದರಿ ರಸ್ತೆಯು ಜನ – ವಾಹನ ಸಂಚಾರಕ್ಕೆ ಅಕ್ಷರಶಃ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ನಾಗರೀಕರು ದೂರುತ್ತಾರೆ.
ಅವ್ಯವಸ್ಥೆ : ಸದರಿ ರಸ್ತೆ ಆರಂಭದ (ಹೆಲಿಪ್ಯಾಡ್ ಸರ್ಕಲ್) ಕೆಲ ಪ್ರದೇಶ ಹೊರತುಪಡಿಸಿದರೆ, ಬಹುತೇಕ ಕಡೆ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ (parking) ಮಾಡಲಾಗುತ್ತಿದೆ. ಅದರಲ್ಲಿಯೂ ಜೈಲ್ ವೃತ್ತದಿಂದ (jail circle) ಶಿವಮೂರ್ತಿ ಸರ್ಕಲ್ (shivamurthi circle) ನಡುವಿನ ರಸ್ತೆಯಲ್ಲಿ ಟ್ರಾಫಿಕ್ ಅವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿದೆ.
ಇನ್ನಾದರೂ ಮಹಾನಗರ ಪಾಲಿಕೆ ಆಡಳಿತ (city corporation) ಹಾಗೂ ಟ್ರಾಫಿಕ್ ಪೊಲೀಸರು (traffic police) ಇತ್ತ ಗಮನಹರಿಸಬೇಕಾಗಿದೆ. ಕುವೆಂಪು ರಸ್ತೆಯ ಅವ್ಯವಸ್ಥೆ ಸರಿಪಡಿಸಿ, ಸುಗಮ ಜನ – ವಾಹನ ಸಂಚಾರಕ್ಕೆ (smooth people-vehicle traffic) ಅನುಕೂಲ ಕಲ್ಪಿಸಿಕೊಡಲು ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.