ಶಿವಮೊಗ್ಗ ಜಿಲ್ಲೆಯನ್ನು ಹಾಡಿ ಹೊಗಳಿದ ನರೇಂದ್ರ ಮೋದಿ!

ಶಿವಮೊಗ್ಗ, ಫೆ. 27: ‘ಶಿವಮೊಗ್ಗ ಜಿಲ್ಲೆಯು ‘ನೇಚರ್ (ಪ್ರಕೃತಿ), ಕಲ್ಚರ್ (ಸಂಸ್ಕೃತಿ), ಅಗ್ರಿಕಲ್ಚರ್ (ಕೃಷಿ) ಧರತಿ (ಭೂಮಿ) ಯಾಗಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಣಗಾನ ಮಾಡಿದ್ದಾರೆ. ಹಾಗೆಯೇ ತಮ್ಮ ಭಾಷಣದ ನಡುವೆ ಕೆಲ ಕನ್ನಡದ ಮಾತುಗಳನ್ನಾಡಿ ಗಮನ ಸೆಳೆದಿದ್ದಾರೆ
ಶಿವಮೊಗ್ಗ ನಗರದ ವಿಮಾನ ನಿಲ್ದಾಣ ಆವರಣದಲ್ಲಿ ಸೋಮವಾರ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯು ಮಲೆನಾಡಿನ ಹೆಬ್ಬಾಗಿಲಾಗಿದೆ. ಇಲ್ಲಿನ ವನ್ಯಜೀವಿ, ನದಿ, ಪರ್ವತ ಶ್ರೇಣಿಗಳು, ಪಶ್ಚಿಮಘಟ್ಟ ಅದ್ಬುತವಾಗಿದೆ. ಜೋಗ ಜಲಪಾತ, ಆನೆ ಬಿಡಾರ, ಸಿಂಹಾಧಾಮ, ಆಗುಂಬೆ ಸೂರ್ಯಾಸ್ತ ಸೇರಿದಂತೆ ಹಲವು ಪ್ರಾಕೃತಿಕ ಪ್ರವಾಸಿ ತಾಣಗಳಿವೆ ಎಂದರು.
‘ಗಂಗಾ ಸ್ನಾನ – ತುಂಗಾ ಪಾನ’ ಎಂಬ ನಾಣ್ನುಡಿ ಪ್ರಸಿದ್ದವಾಗಿದಿದೆ. ಗಂಗೆ ನದಿಯಲ್ಲಿ ಸ್ನಾನ ಮಾಡಿದ್ದಷ್ಟೇ, ತುಂಗಾ ನದಿ ನೀರು ಕುಡಿಯುವುದು ಕೂಡ ಮಹತ್ವದ್ದಾಗಿದೆ. ಅಷ್ಟೊಂದು ಸಿಹಿಯಾದ ನೀರು ತುಂಗಾ ನದಿಯದ್ದಾಗಿದೆ ಎಂದರು.  ಸಂಸ್ಕೃತ ಗ್ರಾಮ ಮತ್ತೂರು, ಸಿಗಂದೂರು ಚೌಡೇಶ್ವರಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಶ್ರೀಧರ್ ಸ್ವಾಮಿಗಳ ಆಶ್ರಮ ಸೇರಿದಂತೆ ಹಲವು ಧಾರ್ಮಿಕ ತಾಣಗಳು ಶಿವಮೊಗ್ಗ ಜಿಲ್ಲೆಯಲ್ಲಿವೆ.
ಬ್ರಿಟಿಷರ ವಿರುದ್ದ ‘ಏಸೂರು ಕೊಟ್ಟರು, ಈಸೂರು ಕೊಡೆವು’ ಎಂದು ಜಿಲ್ಲೆಯ ಈಸೂರು ಗ್ರಾಮದ ಗ್ರಾಮಸ್ಥರು ಹೋರಾಟ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಶಿವಮೊಗ್ಗದ ನೂತನ ವಿಮಾನ ನಿಲ್ದಾಣವು ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಹೊಸ ಅಭಿವೃದ್ದಿಗೆ ಮಾರ್ಗವಾಗಲಿದೆ ಎಂದರು.

Previous post ಸಮಾವೇಶ ಸ್ಥಳದಲ್ಲಿ ಮೊಬೈಲ್ ಪೋನ್ ಇಂಟರ್ನೆಟ್ ಸೇವೆ ಅಸ್ತವ್ಯಸ್ತ!
Next post ‘ಡಬ್ಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ’ – ನರೇಂದ್ರ ಮೋದಿ