
ಪೊಲೀಸರಿಗೆ ಶಿವಮೊಗ್ಗಎಸ್ಪಿ ಖಡಕ್ ವಾರ್ನಿಂಗ್!
ಶಿವಮೊಗ್ಗ (shivamogga), ಜು. 10: ‘ರೌಡಿಸಂ ಸೇರಿದಂತೆ ಅಪರಾಧ ಚಟುವಟಿಕೆಗಳ (criminal activities) ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಪರಿಣಾಮಕಾರಿಯಾಗಿ ಗಸ್ತು ವ್ಯವಸ್ಥೆ (Patrol system) ನಡೆಸಬೇಕು. ಶಾಲಾ-ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುವವರ ವಿರುದ್ದ ಕ್ರಮ ಜರುಗಿಸಬೇಕು. ಅಪಘಾತಗಳ (accidents) ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡಬೇಕು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (shimoga sp g k mithunkumar) ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ಎಲ್ಲ ಡಿವೈಎಸ್ಪಿ (dysp), ಸರ್ಕಲ್ ಇನ್ಸ್’ಪೆಕ್ಟರ್ (cpi) ಹಾಗೂ ಠಾಣಾಧಿಕಾರಿಗಳ ಅಪರಾಧ ವಿಮರ್ಶನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ತನಿಖೆ ಪೂರ್ಣಗೊಳಿಸಿ : ಕಾಲಮಿತಿಯೊಳಗೆ ಪ್ರಕರಣಗಳ ತನಿಖೆ (enquiry) ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು. ಠಾಣಾ ವ್ಯಾಪ್ತಿಗಳಲ್ಲಿ (station limits) ಗಾಂಜಾ ಮಾರಾಟ, ಸಾಗಾಣಿಕೆ, ಸಂಗ್ರಹಣೆ, ಗಾಂಜಾ ಗಿಡ ಬೆಳೆಯುವವರ ಬಗ್ಗೆ ತಳಮಟ್ಟದ ಮಾಹಿತಿ ಸಂಗ್ರಹಿಸಿ ನಿರಂತರವಾಗಿ ದಾಳಿ ನಡೆಸಬೇಕು. ಎನ್.ಡಿ.ಪಿ.ಎಸ್ ಕಾಯ್ದೆಯಡಿ (ndps act) ಹೆಚ್ಚು ಪ್ರಕರಣ ದಾಖಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮಾದಕ ವ್ಯಸನದ ಬಗ್ಗೆ ಯುವ ಜನತೆ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಬೇಕು. ಶಾಲಾ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಸಮುದಾಯದತ್ತ ಪೊಲೀಸ್ ಕಾರ್ಯಕ್ರಮದಡಿ ಬೀಟ್ ಸಮಿತಿ, ಮೊಹಲ್ಲಾ, ನೊಂದವರ, ಯುವಜನ ಹಾಗೂ ಪರಿಶಿಷ್ಟ ಜಾತಿ – ಪಂಗಡಗಳ ಸಭೆ ಆಯೋಜಿಸಬೇಕು ಎಂದು ತಿಳಿಸಿದ್ದಾರೆ.
ಗಸ್ತು ವ್ಯವಸ್ಥೆ : ಎಲ್ಲ ಪೊಲೀಸ್ ಠಾಣೆಗಳಲ್ಲಿ ಹಗಲು – ರಾತ್ರಿ ಗಸ್ತು (day and night patrol) ಪರಿಣಾಮಕಾರಿಯಾಗಿ ನಡೆಸಬೇಕು. ಆಯಾ ಠಾಣಾ ವ್ಯಾಪ್ತಿಗಳಲ್ಲಿ ರೌಡಿಗಳು (Rowdies), ಎಂಓಬಿಗಳು, ಪೂರ್ವ ಸಜಾ ಆಸಾಮಿಗಳ ಚಟುವಟಿಕೆಗಳ ಬಗ್ಗೆ ಪರಿಶೀಲಿಸಬೇಕು. ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸ್ಮಾರ್ಟ್ ಇ ಬೀಟ್ (smart Ebeat), ಎಂಸಿಸಿಟಿಎನ್ಎಸ್ ತಂತ್ರಾಂಶಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು.
ಪೊಲೀಸ್ ಠಾಣೆಗೆ ಬರುವ ದೂರುದಾರರ ದೂರುಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಕಾನೂನಿನ ಚೌಕಟ್ಟಿನೊಳಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಜೊತೆಗೆ ಠಾಣೆಗೆ ಭೇಟಿ ನೀಡುವ ದೂರುದಾರರ ಮಾಹಿತಿಯನ್ನು ಸಂದರ್ಶಕರ ನೋಂದಣಿ ಪುಸ್ತಕದಲ್ಲಿ ನಮೂದಿಸಬೇಕು ಎಂದು ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಸೂಚನೆ : ಠಾಣಾ ವ್ಯಾಪ್ತಿಯಲ್ಲಿನ ಸೂಕ್ಷ್ಮ ಪ್ರದೇಶ (sensitive area) ಹಾಗೂ ಹೊರ ವಲಯಗಳಲ್ಲಿ ಕಾಲ್ನಡಿಗೆ ಮತ್ತು ಏರಿಯಾ ಡಾಮಿನೇಷನ್ ವಿಶೇಷ ಗಸ್ತನ್ನು ನಿರಂತರವಾಗಿ ನಡೆಸಬೇಕು. ಚೆನ್ನಮ್ಮ ಪಡೆಯಲ್ಲಿ (Chennamma Pade) ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ – ಸಿಬ್ಬಂದಿಗಳು ಶಾಲಾ-ಕಾಲೇಜುಗಳ ಪ್ರಾರಂಭ ಮತ್ತು ಮುಕ್ತಾಯದ ಸಂದರ್ಭದಲ್ಲಿ ಶಾಲಾ ಕಾಲೇಜುಗಳ ಹತ್ತಿರ, ಪಾರ್ಕ್, ಬಸ್ ನಿಲ್ದಾಣ ಹಾಗೂ ಇತರೆ ಜನನಿಬಿಡ ಪ್ರದೇಶಗಳಲ್ಲಿ ಗಸ್ತು ಮಾಡಬೇಕು.
ಸಂಘಟಿತ ಅಪರಾಧಗಳನ್ನು (organized crimes) ತಡೆಗಟ್ಟುವ ನಿಟ್ಟಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ತಳ ಮಟ್ಟದ ಮಾಹಿತಿ ಕಲೆ ಹಾಕಿ (basic information) ದಾಳಿ ನಡೆಸಿ, ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಅಪಘಾತ : ಅಪಘಾತಗಳನ್ನು (accidents) ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಅಪಘಾತ ಸ್ಥಳಗಳಿಗೆ (accidents zones) ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಬೇಕು. ಸಂಚಾರ ಸೂಚನಾ ಫಲಕಗಳು, ರಂಬಲ್ ಸ್ಟ್ರಿಪ್ಸ್, ಕ್ಯಾಟ್ ಐ, ರೋಡ್ ಹಂಪ್ಸ್ ಗಳನ್ನು ಅಳವಡಿಸುವ ಮೂಲಕ ಅಪಘಾತ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (asp) ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಬು ಆಂಜನಪ್ಪ, ಸುರೇಶ್ ಎಂ, ಗೋಪಾಲಕೃಷ್ಣ ಟಿ ನಾಯಕ್, ಗಜಾನನ ವಾಮನ ಸುತಾರ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರು ಉಪಸ್ಥಿತರಿದ್ದರು.